AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

Alia Bhatt wedding video: ರಣಬೀರ್​ ಕಪೂರ್​ ಅವರ ಮುಂಬೈನ ನಿವಾಸದಲ್ಲಿ ಈ ಮದುವೆ ನಡೆದಿದೆ. ವಿವಾಹದ ಬಳಿಕ ಆಲಿಯಾ ಭಟ್​ ಜೊತೆ ರಣಬೀರ್​ ಪೋಸ್​ ನೀಡಿದ್ದಾರೆ.

ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​
ಆಲಿಯಾ ಭಟ್, ರಣಬೀರ್ ಕಪೂರ್
TV9 Web
| Edited By: |

Updated on: Apr 15, 2022 | 8:55 AM

Share

ಬಾಲಿವುಡ್​ ಸೆಲೆಬ್ರಿಟಿಗಳಾದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ (Ranbir Kapoor) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಇವರ ಮದುವೆ ಬಗ್ಗೆ ಸಿಕ್ಕಾಪಟ್ಟೆ ರಹಸ್ಯ ಕಾಯ್ದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು ಇತ್ತೀಚೆಗೆ ತಮ್ಮ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದರು. ಆದರೆ ಮದುವೆ ದಿನಾಂಕವನ್ನು ಗೌಪ್ಯವಾಗಿ ಇಟ್ಟಿದ್ದರು. ಅಂತೂ ಇಂತೂ ಏ.14ರಂದು ಆಪ್ತರ ಸಮ್ಮುಖದಲ್ಲಿ ಆಲಿಯಾ ಭಟ್ (Alia Bhatt)​ ಮತ್ತು ರಣಬೀರ್​ ಕಪೂರ್​ ಹಸೆಮಣೆ ಏರಿದರು. ಈ ಜೋಡಿ ಹಕ್ಕಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಒಂದಷ್ಟು ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡು ಎಲ್ಲರಿಂದ ಆಶೀರ್ವಾದ ಬೇಡಿದ್ದಾರೆ. ಆ ಫೋಟೋಗಳಿಗಿಂತಲೂ ಹೆಚ್ಚಾಗಿ ಮತ್ತೊಂದು ವಿಡಿಯೋ (Alia Bhatt wedding video) ವೈರಲ್​ ಆಗಿದೆ. ಮದುವೆ ಬಳಿಕ ಪತ್ನಿ ಆಲಿಯಾ ಭಟ್​ ಅವರನ್ನು ರಣಬೀರ್​ ಕಪೂರ್​ ಎತ್ತಿಕೊಂಡು ಪೋಸ್ ನೀಡಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಅದನ್ನು ಕಂಡು ಅಭಿಮಾನಿಗಳು ‘ಸಖತ್​ ಕ್ಯೂಟ್​’ ಎಂದು ಕಮೆಂಟ್​ ಮಾಡುತ್ತಿದ್ದಾರೆ. ನವದಂಪತಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ರಣಬೀರ್​ ಕಪೂರ್​ ಅವರ ಮನೆಯಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿ ಆದರು. ಮದುವೆ ವಿಚಾರದಲ್ಲಿ ತೀರಾ ಗುಟ್ಟು ಮಾಡಿದ್ದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ವಿವಾಹದ ಶಾಸ್ತ್ರಗಳು ಮುಗಿಯುತ್ತಿದ್ದಂತೆಯೇ ಮನೆಯಿಂದ ಹೊರಬಂದು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಮದುವೆ ಆದ ಖುಷಿಯಲ್ಲಿ ಈ ಜೋಡಿ ಹಕ್ಕಿಗಳು ತೇಲುತ್ತಿದ್ದವು.

ಮನೆ ಎದುರು ನೆರೆದಿದ್ದ ಅಭಿಮಾನಿಗಳು ಮತ್ತು ಮಾಧ್ಯಮದವರ ಕಡೆಗೆ ನೋಡಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಕೈ ಬೀಸಿದರು. ಎಲ್ಲರ ಕಡೆಗೂ ನಗು ಬೀರುತ್ತ ಪೋಸ್​ ನೀಡಿದರು. ಅಷ್ಟೇ ಅಲ್ಲ, ಭಾರಿ ಖುಷಿಯಲ್ಲಿದ್ದ ರಣಬೀರ್​ ಕಪೂರ್​ ಅವರು ಪತ್ನಿ ಆಲಿಯಾ ಭಟ್​ ಅವರನ್ನು ಎತ್ತಿಕೊಂಡು ಓಡಾಡಿದರು. ಆಗ ಎಲ್ಲಿದ್ದ ಜನರೆಲ್ಲರೂ ಓ.. ಎಂದು ಜೋರಾಗಿ ಕೂಗಿದರು. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ನಡುವೆ ಬರೋಬ್ಬರಿ 10 ವರ್ಷಗಳ ವಯಸ್ಸಿನ ಅಂತರ ಇದೆ. ರಣಬೀರ್​ ಕಪೂರ್​ಗೆ ಈಗ 39ರ ಪ್ರಾಯ. ಆಲಿಯಾ ಭಟ್​ ಅವರಿಗೆ ಈಗಿನ್ನೂ 29 ವರ್ಷ ವಯಸ್ಸು. ಬಾಲ್ಯದಲ್ಲಿದ್ದಾಗಲೇ ರಣಬೀರ್​ ಕಪೂರ್​ ಮೇಲೆ ಆಲಿಯಾಗೆ ಪ್ರೀತಿ ಚಿಗುರಿತ್ತು. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೆಲವೇ ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಬಾಯಿ ಬಿಟ್ಟಿದ್ದರು.

‘ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ. ನನ್ನ ಬದುಕಿನಲ್ಲಿ ನಾನು ಕಂಡು ಅತಿ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ. ಅವರು ನನಗೆ ಸಖತ್​ ಬೆಂಬಲ ನೀಡುತ್ತಾರೆ. ನನ್ನ ಬಗ್ಗೆ ಮಾತನಾಡಲು ಕೂಡ ಅವರಲ್ಲಿ ಸಾಕಷ್ಟು ವಿಷಯ ಇದೆ ಅಂದುಕೊಂಡಿದ್ದೇನೆ. ಆದರೆ ಅದೆಲ್ಲವೂ ಆಗಬೇಕು ಎಂದರೆ ಸೂಕ್ತ ಸಮಯ ಬರಬೇಕು’ ಎಂದು ಆಲಿಯಾ ಹೇಳಿದ್ದರು.

ಇದನ್ನೂ ಓದಿ:

Alia Bhatt Wedding Photos: ಆಲಿಯಾ ಭಟ್-ರಣಬೀರ್ ಕಪೂರ್ ಮದುವೆ ಫೋಟೋ ಗ್ಯಾಲರಿ

ಆಲಿಯಾ​-ರಣಬೀರ್ ಮದುವೆ ಖಚಿತಗೊಂಡ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ