AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ​-ರಣಬೀರ್ ಮದುವೆ ಖಚಿತಗೊಂಡ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ

Deepika Padukone | Ranbir Kapoor: ರಣಬೀರ್ ಕಪೂರ್​ ಮತ್ತು ಆಲಿಯಾ ಭಟ್​ ವಿವಾಹಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಬದಲಿಗೆ, ಒಂದೇ ಒಂದು ಲೈಕ್​ ಮಾಡಿ ಸುಮ್ಮನಾಗಿದ್ದಾರೆ.

ಆಲಿಯಾ​-ರಣಬೀರ್ ಮದುವೆ ಖಚಿತಗೊಂಡ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ
ರಣಬೀರ್​ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ
TV9 Web
| Edited By: |

Updated on: Apr 14, 2022 | 11:59 AM

Share

ಬಾಲಿವುಡ್​ನ ಸ್ಟಾರ್​ ಜೋಡಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಮದುವೆ (Alia Bhatt Ranbir Kapoor Wedding) ಆಗುತ್ತಿರುವ ವಿಷಯ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ. ಮದುವೆ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಕೇವಲ ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಆದ್ರೆ ಈಗ ಒಂದೊಂದೇ ವಿಚಾರಗಳು ಬಹಿರಂಗ ಆಗುತ್ತಿವೆ. ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ (Ranbir Kapoor Marriage) ಆಗುತ್ತಿರುವುದು ಖಚಿತಗೊಂಡಿದೆ. ಇಬ್ಬರ ಮನೆಯನ್ನೂ ಸಿಂಗರಿಸಲಾಗಿದೆ. ಅನೇಕ ಅತಿಥಿಗಳು ಆಗಮಿಸುತ್ತಿದ್ದಾರೆ. ಈ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ನಿರ್ದೇಶಕ ಅಯಾನ್​ ಮುಖರ್ಜಿ ಅವರು ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಆ ಮೂಲಕ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ಗೆ ಅವರು ಅಭಿನಂದನೆ ತಿಳಿಸಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಆಲಿಯಾ-ರಣಬೀರ್​ ಜೋಡಿಯಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಒಂದು ಹಾಡಿನಲ್ಲಿ ಅವರು ಮದುವೆ ಜೋಡಿಯಂತೆಯೇ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಹಂಚಿಕೊಂಡಿರುವ ಅಯಾನ್​ ಮುಖರ್ಜಿ ಅವರು, ಈ ತಾರೆಗಳ ಹೊಸ ಬದುಕಿಗೆ ಶುಭ ಹಾರೈಸಿದ್ದಾರೆ. ಅದಕ್ಕೆ ದೀಪಿಕಾ ಪಡುಕೋಣೆ (Deepika Padukone) ಪ್ರತಿಕ್ರಿಯಿಸಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣಬೀರ್​ ಕಪೂರ್​ ನಡುವೆ ಒಂದು ಕಾಲದಲ್ಲಿ ಪ್ರೀತಿ ಚಿಗುರಿತ್ತು. ಇನ್ನೇನು ಅವರಿಬ್ಬರು ಮದುವೆ ಆಗಿಬಿಡುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್​ ಆಯಿತು. ಆ ಬಳಿಕವೂ ಅವರು ಹಳೆಯದನ್ನೆಲ್ಲಾ ಮರೆತು ಸ್ನೇಹಿತರಾಗಿ ಮುಂದುವರಿದರು. ಬಳಿಕ ರಣವೀರ್​ ಸಿಂಗ್​ ಜತೆ ದೀಪಿಕಾ ಪಡುಕೋಣೆ ಮದುವೆ ನೆರವೇರಿತು. ನಂತರ ಮಾಜಿ ಪ್ರಿಯಕರನ ಜೊತೆ ದೀಪಿಕಾ ಹೆಚ್ಚು ಸಂಪರ್ಕ ಉಳಿಸಿಕೊಳ್ಳಲಿಲ್ಲ.

ಈಗ ಮಾಜಿ ಬಾಯ್​ಫ್ರೆಂಡ್​ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಸೈಲೆಂಟ್​ ಆಗಿದ್ದಾರೆ. ರಣಬೀರ್​-ಆಲಿಯಾ ವಿವಾಹಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಒಂದೇ ಒಂದು ಲೈಕ್​ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು, ಅಯಾನ್​ ಮುಖರ್ಜಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋವನ್ನು ದೀಪಿಕಾ ಪಡುಕೋಣೆ ಲೈಕ್​ ಮಾಡಿದ್ದಾರೆ ಅಷ್ಟೇ. ಈ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ಮುಂಬೈನಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ ನಡೆಯುತ್ತಿದೆ. ವಿವಾಹದ ಹಿನ್ನೆಲೆಯಲ್ಲಿ ಅವರಿಬ್ಬರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಡೀ ಬಂಗಲೆ ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮನೆಯೊಳಗೆ ಎಂಟ್ರಿ ನೀಡುವ ಎಲ್ಲ ಸಿಬ್ಬಂದಿಯ ಮೊಬೈಲ್​ ಕ್ಯಾಮೆರಾಗೆ ಪಿಂಕ್​ ಸ್ಟಿಕರ್​ ಅಂಟಿಸಲಾಗಿದೆ. ಆ ಮೂಲಕ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್​ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ಇಂದು (ಏ.14) ಅವರಿಬ್ಬರು ಹಸೆ ಮಣೆ ಏರಲಿದ್ದಾರೆ. ಮದುವೆ ಫೋಟೋಗಳನ್ನು ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ.

View this post on Instagram

A post shared by Ayan Mukerji (@ayan_mukerji)

ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಕೂಡ ಎರಡೂ ಕುಟುಂಬದವರು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗಿದೆ. ಆ ಸಮಾರಂಭಕ್ಕೆ ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​, ಕತ್ರಿನಾ ಕೈಫ್​, ವಿಕ್ಕಿ ಕೌಶಲ್​ ಮುಂತಾದವರು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಆಲಿಯಾ ಭಟ್​ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ‘ಆರ್​ಆರ್​ಆರ್​’ ಚಿತ್ರದಲ್ಲಿ ನಟಿಸಿದ ಬಳಿಕ ಅವರು ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಈ ಪರಿ ಡಿಮ್ಯಾಂಡ್​ ಇರುವಾಗಲೇ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ವರ್ಷ ತೆರೆಕಂಡ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಆ ಚಿತ್ರ ಕೂಡ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ:

ರಣಬೀರ್​ ಕಪೂರ್​ ಮದುವೆಗೆ ಬರ್ತಾರಾ ಮಾಜಿ ಗರ್ಲ್​ಫ್ರೆಂಡ್ಸ್​ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?

100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್​ನಲ್ಲಿ ಆಲಿಯಾ ಭಟ್​-ರಣಬೀರ್​

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ