AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್​ನಲ್ಲಿ ಆಲಿಯಾ ಭಟ್​-ರಣಬೀರ್​

Gangubai Kathiawadi Box Office Collection: 2 ವಾರ ಕಳೆಯುವುದರೊಳಗೆ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗೆಲುವಿನಿಂದ ಆಲಿಯಾ ಭಟ್​ ಸಖತ್​ ಖುಷಿ ಆಗಿದ್ದಾರೆ.

100 ಕೋಟಿ ರೂ. ಗಳಿಸಿದ ‘ಗಂಗೂಬಾಯಿ ಕಾಠಿಯಾವಾಡಿ’; ಪಾರ್ಟಿ ಮೂಡ್​ನಲ್ಲಿ ಆಲಿಯಾ ಭಟ್​-ರಣಬೀರ್​
ಆಲಿಯಾ ಭಟ್, ರಣಬೀರ್ ಕಪೂರ್
TV9 Web
| Updated By: ಮದನ್​ ಕುಮಾರ್​|

Updated on: Mar 10, 2022 | 4:05 PM

Share

ನೆಪೋಟಿಸಂ ಫಲಾನುಭವಿ ಎಂಬ ಆರೋಪ ಇದ್ದರೂ ಕೂಡ ನಟಿ ಆಲಿಯಾ ಭಟ್ (Alia Bhatt)​ ಅವರು ತಮ್ಮ ನಟನೆ ಮೂಲಕವೇ ಗೆದ್ದು ತೋರಿಸಿದ್ದಾರೆ. ಒಂದಲ್ಲ, ಎರಡಲ್ಲ.. ಹಲವು ಬಾರಿ ಅವರು ಅಭಿನಯದ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಈಗ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ವಿಚಾರದಲ್ಲೂ ಹಾಗೆಯೇ ಆಗಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಸಿನಿಮಾವನ್ನು ಸಂಜಯ್​ ಲೀಲಾ ಬನ್ಸಾಲಿ ಅವರು ನಿರ್ದೇಶಿಸಿದ್ದಾರೆ. ದೇಶಾದ್ಯಂತ ಪ್ರೇಕ್ಷಕರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಪರಿಣಾಮವಾಗಿ ‘ಗಂಗೂಬಾಯಿ ಕಾಠಿಯಾವಾಡಿ’ ಬಾಕ್ಸ್​ ಆಫೀಸ್​ ಕಲೆಕ್ಷನ್ (Gangubai Kathiawadi Box Office Collection)​ 100 ಕೋಟಿ ರೂಪಾಯಿ ಮುಟ್ಟಿದೆ. ಈ ಗೆಲುವಿನಿಂದ ಆಲಿಯಾ ಭಟ್​ ಸಖತ್​ ಖುಷಿ ಆಗಿದ್ದಾರೆ. ಹಾಗಾಗಿ ಅವರು ಪ್ರಿಯಕರ ರಣಬೀರ್​ ಕಪೂರ್​ ಜೊತೆ ರಿಲ್ಯಾಕ್ಸ್​ ಮೂಡ್​ನಲ್ಲಿ ಇದ್ದಾರೆ. ಕುಟುಂಬದವರ ಜೊತೆ ಸೇರಿ ಅವರು ಡಿನ್ನರ್​ಗಾಗಿ ರೆಸ್ಟೋರೆಂಟ್​​ಗೆ ತೆರಳಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಅಭೂತಪೂರ್ವ ಗೆಲವು ಕಂಡಿರುವ ಆಲಿಯಾ ಭಟ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಫೆ.25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ದಿನವೇ ಈ ಸಿನಿಮಾ 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಎರಡು ವಾರ ಕಳೆಯುವುದರೊಳಗೆ 100 ಕೋಟಿ ರೂಪಾಯಿ ಬಾಚಿಕೊಂಡು ಈ ಚಿತ್ರ ಗೆಲುವಿನ ನಗು ಬೀರಿದೆ.

ಆಲಿಯಾ ಭಟ್​ ಅವರಿಗೆ ಬಿಳಿ ಬಣ್ಣದ ಬಗ್ಗೆ ಏನೋ ಒಂಥರಾ ಗೀಳು. ಬಹುತೇಕ ಸಂದರ್ಭದಲ್ಲಿ ಅವರು ಬಿಳಿ ಬಟ್ಟೆಯನ್ನೇ ಧರಿಸುತ್ತಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಪ್ರಚಾರದ ವೇಳೆ ಅವರು ಬಿಳಿ ಕಾಸ್ಟ್ಯೂಮ್​ಗಳನ್ನು ಹೆಚ್ಚಾಗಿ ಧರಿಸಿದ್ದರು. ಈಗ ಪ್ರಿಯಕರನ ಫ್ಯಾಮಿಲಿ ಜೊತೆ ಡಿನ್ನರ್​ಗೆ ತೆರಳಿದ್ದಾಗಲೂ ಅವರು ಶ್ವೇತವರ್ಣದ ದಿರಿಸಿನಲ್ಲಿ ಕಂಗೊಳಿಸಿದ್ದಾರೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಮದುವೆ ಆಗುತ್ತಾರೆ. ಅವರ ಪ್ರೀತಿಯ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಮಾಧ್ಯಮಗಳ ಸಂದರ್ಶನದ ವೇಳೆ ಅವರಿಬ್ಬರು ನೇರವಾಗಿಯೇ ಈ ಕುರಿತು ಮಾತನಾಡಿದ್ದುಂಟು. ರಣಬೀರ್​ ಕಪೂರ್​ ಮೇಲೆ ತಮಗೆ ಹೇಗೆ ಪ್ರೀತಿ ಚಿಗುರಿತು ಎಂಬುದನ್ನು ಕೂಡ ಆಲಿಯಾ ಭಟ್​ ಅವರು ಇತ್ತೀಚೆಗೆ ಹೇಳಿದ್ದರು. ಅಲ್ಲದೇ ಅವರು ಹೋದಲ್ಲೆಲ್ಲ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇದೆ. ಪದೇಪದೇ ಅದೇ ಪ್ರಶ್ನೆ ಕೇಳಿಬರುತ್ತಿರುವುದಕ್ಕೆ ಆಲಿಯಾ ಕೊಂಚ ಬೇಸರ ಮಾಡಿಕೊಂಡಿದ್ದಾರೆ ಕೂಡ. ಆ ಕುರಿತು ಇನ್ಮುಂದೆ ಉತ್ತರ ನೀಡಬಾರದು ಎಂದು ಸಹ ಅವರು ತೀರ್ಮಾನಿಸಿದ್ದಾರೆ ಎಂದು ವರದಿ ಆಗಿತ್ತು.

ರಣಬೀರ್​ ಕಪೂರ್​ ಮೇಲೆ ಬಾಲ್ಯದಲ್ಲೇ ಚಿಗುರಿತ್ತು ಪ್ರೀತಿ:

‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ಮಾನಸಿಕವಾಗಿ ಅವರ ಜೊತೆ ಈಗಾಗಲೇ ಮದುವೆ ಆಗಿದ್ದೇನೆ. ಅದನ್ನೂ ಬಿಡಿ, ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ’ ಎಂದು ಆಲಿಯಾ ಇತ್ತೀಚೆಗೆ ಬಾಯಿ ಬಿಟ್ಟಿದ್ದರು.

ಇದನ್ನೂ ಓದಿ:

ನಿಜ ಜೀವನದಲ್ಲೂ ಗಂಗೂಬಾಯಿ ರೀತಿ ಬದಲಾದ ಆಲಿಯಾ; ಬಾಯ್​ಫ್ರೆಂಡ್​ ರಣಬೀರ್​ ಕಪೂರ್​ಗೆ ಕಿರಿಕಿರಿ

‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್​ ದೇವಗನ್​ಗೆ ಸಿಕ್ಕಿದ್ದೆಷ್ಟು?