Virat Kohli: ಎಲ್ಲರೆದುರು ತರಲೆ ಮಾಡಿಕೊಂಡಿರುವ ವಿರಾಟ್, ಅನುಷ್ಕಾ ಎದುರು ಬಂದರೆ ಹೇಗೆ ವರ್ತಿಸುತ್ತಾರಂತೆ ಗೊತ್ತಾ?

Anushka Sharma: ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಜೋಡಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅನುಷ್ಕಾ ಎದುರಿದ್ದಾಗ ವಿರಾಟ್ ಹೇಗೆ ವರ್ತಿಸುತ್ತಾರೆ, ಇಲ್ಲದಿದ್ದಾಗ ಹೇಗಿರುತ್ತಾರೆ ಎನ್ನುವುದನ್ನು ವಿರಾಟ್ ಸ್ನೇಹಿತ ವಿವರಿಸಿದ್ದಾರೆ.

Virat Kohli: ಎಲ್ಲರೆದುರು ತರಲೆ ಮಾಡಿಕೊಂಡಿರುವ ವಿರಾಟ್, ಅನುಷ್ಕಾ ಎದುರು ಬಂದರೆ ಹೇಗೆ ವರ್ತಿಸುತ್ತಾರಂತೆ ಗೊತ್ತಾ?
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
TV9kannada Web Team

| Edited By: shivaprasad.hs

Mar 10, 2022 | 3:37 PM

ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ಅಭಿಮಾನಿಗಳ ನೆಚ್ಚಿನ ತಾರಾ ಜೋಡಿಗಳಲ್ಲೊಂದು. ಈರ್ವರನ್ನೂ ಪ್ರೀತಿಯಿಂದ ವಿರುಷ್ಕಾ ಎಂದೇ ಎಲ್ಲರೂ ಗುರುತಿಸುತ್ತಾರೆ. ಪರಸ್ಪರ ವೃತ್ತಿ ಜೀವನಕ್ಕೆ ಬೆನ್ನೆಲುವಾಗಿ ನಿಲ್ಲುವ ವಿರಾಟ್- ಅನುಷ್ಕಾರ ನಡೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇತ್ತೀಚೆಗಷ್ಟೇ ವಿರಾಟ್ ಮೊಹಾಲಿಯಲ್ಲಿ ತಮ್ಮ ವೃತ್ತಿ ಜೀವನದ ಮಹೋನ್ನತ ಸಾಧನೆಯನ್ನೊಂದು ಮಾಡಿದ್ದರು. 100ನೇ ಟೆಸ್ಟ್ ಪಂದ್ಯವಾಡಿದ್ದ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ವಿಶೇಷ ಗೌರವವನ್ನು ಸಮರ್ಪಿಸಲಾಯಿತು. ಈ ವೇಳೆ ವಿರಾಟ್ ಪತ್ನಿ ಅನುಷ್ಕಾರನ್ನು ಮೈದಾನಕ್ಕೆ ಕರೆತಂದಿದ್ದರು. ನಂತರ ತಮ್ಮ ಮಾತಿನಲ್ಲೂ ವೃತ್ತಿ ಜೀವನಕ್ಕೆ ಅನುಷ್ಕಾರ ಕೊಡುಗೆಯನ್ನು ಸ್ಮರಿಸಿ ಧನ್ಯವಾದ ಹೇಳಿದ್ದರು. ಅವರು ಪತ್ನಿಗೆ ನೀಡುವ ಗೌರವವನ್ನು ಎಲ್ಲರೂ ಕೊಂಡಾಡಿದ್ದರು. ವಿರಾಟ್ ತಮ್ಮ ಆಕ್ರಮಣಕಾರಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರೂ ಕೂಡ ಮೈದಾನದಿಂದ ಹೊರಗೆ ಅವರ ವಿರುದ್ಧ ಯಾವುದೇ ದೂರುಗಳಿಲ್ಲ. ಅವರನ್ನು ಎಲ್ಲರೂ ಸಂಭಾವಿತ ವ್ಯಕ್ತಿಯೆಂದೇ ಗುರುತಿಸುತ್ತಾರೆ. ಇದೀಗ ಕಿಂಗ್ ಕೊಹ್ಲಿಯ ವ್ಯಕ್ತಿತ್ವದ ಬಗ್ಗೆ ಅಚ್ಚರಿಯ ವಿಚಾರವೊಂದನ್ನು ಅವರ ಸಹ ಆಟಗಾರ, ಸ್ನೇಹಿತ ಹೊರಹಾಕಿದ್ದಾರೆ.

ಭಾರತದ ಕ್ರಿಕೆಟ್ ಆಟಗಾರ ಪ್ರದೀಪ್ ಸಾಂಗ್ವಾನ್ ‘ಅಂಡರ್ 19’ ಪಂದ್ಯಾವಳಿಯ ಸಮಯದಿಂದ ವಿರಾಟ್​ಗೆ ಆಪ್ತರಾಗಿದ್ದವರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪ್ರದೀಪ್ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಮೊದಲಿನಿಂದ ನೋಡಿರುವುದರಿಂದ ಈರ್ವರೂ ಉತ್ತಮ ಸ್ನೇಹಿತರು. ಇತ್ತೀಚೆಗೆ ಅವರು ಮಾತನಾಡುತ್ತಾ ವಿರಾಟ್ ಬಗ್ಗೆ ಕುತೂಹಲಕರ ವಿಚಾರ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿರಾಟ್ ಅವರನ್ನು ಪ್ರದೀಪ್ ಭೇಟಿಯಾಗಿದ್ದರಂತೆ. ಈ ವೇಳೆ ಅವರಿಗೆ ಅಚ್ಚರಿ ತಂದಿದ್ದು ವಿರಾಟ್ ಮೊದಲಿಗಿಂತ ಸ್ವಲ್ಪವೂ ಬದಲಾಗಿಲ್ಲ ಎಂಬುದು. ಸಾಮಾನ್ಯವಾಗಿ ವಿರಾಟ್ ಎಲ್ಲರಿಗೂ ಪ್ರಾಂಕ್ ಮಾಡಿಕೊಂಡು, ತರಲೆ ಮಾಡಿಕೊಂಡು ನಗುತ್ತಾ ಇರುತ್ತಾರಂತೆ. ಮೊದಲಿಗೆ ವಿರಾಟ್​ರನ್ನು ಗಮನಿಸಿದಾಗ ಅವರು ಇನ್ನೂ ಹಾಗೆಯೇ ಇದ್ದಾರೆ ಎಂದು ಪ್ರದೀಪ್​ಗೆ ಅನ್ನಿಸಿತಂತೆ.

ಆದರೆ ಇಲ್ಲೊಂದು ಟ್ವಿಸ್ಟ್ ನೀಡಿದ್ದಾರೆ ಪ್ರದೀಪ್. ವಿರಾಟ್ ಹೀಗೆ ತರಲೆ ಮಾಡಿಕೊಂಡಿರುವುದು ಅನುಷ್ಕಾ ಎದುರು ಬರುವವರೆಗೆ ಮಾತ್ರ ಎಂದು ಹೇಳಿದ್ದಾರೆ. ಹೌದು, ಪ್ರಾಂಕ್ ಮಾಡಿಕೊಂಡು, ಕೀಟಲೆ ಮಾಡಿಕೊಂಡು ಇರುವ ವಿರಾಟ್ ಅನುಷ್ಕಾ ಎದುರು ಬಂದರೆ ಇದ್ದಕ್ಕಿದ್ದಂತೆ ಸಂಭಾವಿತರಂತೆ ವರ್ತಿಸುತ್ತಾರಂತೆ. ಅನುಷ್ಕಾ ಸ್ಥಳದಿಂದ ತೆರಳಿದರೆ ಮತ್ತೆ ಮೊದಲಿನಂತೆ ತರಲೆ ಮಾತನಾಡುತ್ತಾ ಇರುತ್ತಾರಂತೆ! ಹೀಗೆ ಹೇಳಿ ನಕ್ಕಿದ್ದಾರೆ ಪ್ರದೀಪ್. ಪ್ರದೀಪ್ ಹೇಳಿರುವ ವಿಚಾರ ಸದ್ಯ ವೈರಲ್ ಆಗಿದ್ದು, ವಿರಾಟ್ ಅಭಿಮಾನಿಗಳೂ ಇದನ್ನು ಕೇಳಿ ನಸುನಕ್ಕಿದ್ದಾರೆ.

ವಿರಾಟ್ 100ನೇ ಟೆಸ್ಟ್ ಪಂದ್ಯದ ವೇಳೆ ವಿರುಷ್ಕಾ:

ಇದನ್ನೂ ಓದಿ:

Virat Kohli: ಮೈದಾನದಲ್ಲೇ ಪತ್ನಿಗೆ ಕಿಸ್ ಕೊಟ್ಟ ವಿರಾಟ್ ಕೊಹ್ಲಿ: ಅನುಷ್ಕಾ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ

​ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್​ ಕಂಡು ಹೌಹಾರಿದ ವರುಣ್​ ಧವನ್​; ವೈರಲ್​ ಆಗಿದೆ ಈ ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada