​ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್​ ಕಂಡು ಹೌಹಾರಿದ ವರುಣ್​ ಧವನ್​; ವೈರಲ್​ ಆಗಿದೆ ಈ ವಿಡಿಯೋ

ವಿಡಿಯೋ ಅಪ್​ಲೋಡ್​ ಮಾಡಿ ಒಂದು ಗಂಟೆ ಕಳೆಯುವುದರೊಳಗೆ 10 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ. ವರುಣ್​ ಧವನ್​ಗೆ ರಶ್ಮಿಕಾ ಮಂದಣ್ಣ ಟೀಸ್​ ಮಾಡಿರುವುದು ಗಮನ ಸೆಳೆಯುತ್ತಿದೆ.

​ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್​ ಕಂಡು ಹೌಹಾರಿದ ವರುಣ್​ ಧವನ್​; ವೈರಲ್​ ಆಗಿದೆ ಈ ವಿಡಿಯೋ
ರಶ್ಮಿಕಾ ಮಂದಣ್ಣ, ವರುಣ್ ಧವನ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 10, 2022 | 3:13 PM

ಪ್ರತಿ ದಿನ ಹತ್ತು ಹಲವು ಕಾರಣಗಳಿಂದಾಗಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಆ ಸಿನಿಮಾ ತೆಲುಗಿನಲ್ಲಿ ತಯಾರಾಗಿದ್ದರೂ ಹಿಂದಿಗೆ ಡಬ್​ ಆಗಿ ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡಿತು. 100 ಕೋಟಿಗೂ ಹೆಚ್ಚು ಆದಾಯವನ್ನು ಹಿಂದಿ ವರ್ಷನ್​ನಿಂದ ಗಳಿಸಿತು. ‘ಪುಷ್ಪ’ ಗೆಲುವಿನ ಬಳಿಕ ಬಾಲಿವುಡ್​ನಿಂದ ರಶ್ಮಿಕಾ ಮಂದಣ್ಣ ಅವರಿಗೆ ಒಳ್ಳೊಳ್ಳೆಯ ಆಫರ್​ಗಳು ಬರುತ್ತಿವೆ. ಈಗಾಗಲೇ ಅವರು ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಅಮಿತಾಭ್​ ಬಚ್ಚನ್​ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸುವ ಚಾನ್ಸ್​ ಗಿಟ್ಟಿಸಿದ್ದಾರೆ. ಅವರ ಮೊದಲ ಬಾಲಿವುಡ್ (Bollywood)​ ಸಿನಿಮಾ ‘ಮಿಷನ್​ ಮಜ್ನು’ ಬಿಡುಗಡೆ ಆಗುವುದಕ್ಕೂ ಮುನ್ನವೇ ಹಿಂದಿ ಪ್ರೇಕ್ಷಕರ ವಲಯದಲ್ಲಿ ರಶ್ಮಿಕಾ ಫುಲ್​ ಫೇಮಸ್​ ಆಗಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್​ ಸೆಲೆಬ್ರಿಟಿಗಳ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಈಗ ಅವರು ಖ್ಯಾತ ನಟ ವರುಣ್​ ಧವನ್​ (Varun Dhawan) ಜೊತೆ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ವರುಣ್​ಗೆ ರಶ್ಮಿಕಾ ಚಮಕ್​ ನೀಡಿದ್ದಾರೆ.

ದಳಪತಿ ವಿಜಯ್​ ಮತ್ತು ಪೂಜಾ ಹೆಗ್ಡೆ ನಟನೆಯ ‘ಬೀಸ್ಟ್​’ ಸಿನಿಮಾದ ‘ಅರೇಬಿಕ್​ ಕುತು..’ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ. ಆ ಸಾಲಿಗೆ ರಶ್ಮಿಕಾ ಮಂದಣ್ಣ ಮತ್ತು ವರುಣ್​ ಧವನ್​ ಕೂಡ ಸೇರಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಇಬ್ಬರೂ ಜೋಡಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಆ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಅಪ್​ಲೋಡ್​ ಮಾಡಿ ಒಂದು ಗಂಟೆ ಕಳೆಯುವುದರೊಳಗೆ 10 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಏನೆಂದರೆ ವರುಣ್​ ಧವನ್​ಗೆ ರಶ್ಮಿಕಾ ಮಂದಣ್ಣ ಟೀಸ್​ ಮಾಡಿದ್ದಾರೆ. ಡ್ಯಾನ್ಸ್​ ಮುಗಿಸಿದ ಬಳಿಕ ವರುಣ್​ ಅವರ ಮೊಣಕಾಲಿನ ಬಳಿಗೆ ಸಡನ್​ ಆಗಿ ಕೈ ತೆಗೆದುಕೊಂಡು ಹೋಗಿ ಚಮಕ್​ ನೀಡಿದ್ದಾರೆ ರಶ್ಮಿಕಾ. ಆ ಕ್ಷಣ ವರುಣ್​ ಧವನ್​ ಹೌಹಾರಿದ್ದಾರೆ.

View this post on Instagram

A post shared by VarunDhawan (@varundvn)

ಅಷ್ಟಕ್ಕೂ ವರುಣ್​ ಧವನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇಬ್ಬರು ಜೋಡಿಯಾಗಿ ನಟಿಸುವ ಯಾವುದೇ ಹೊಸ ಸಿನಿಮಾ ಬಗ್ಗೆಯೂ ಈವರೆಗೆ ಅಧಿಕೃತ ಘೋಷಣೆ ಆಗಿಲ್ಲ. ಇವರಿಬ್ಬರು ಯಾವುದೋ ಜಾಹೀರಾತಿನಲ್ಲಿ ಒಟ್ಟಿಗೆ ಅಭಿನಯಿಸುತ್ತಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ರಶ್ಮಿಕಾ ನಟನೆಯ ಮೊದಲ ಬಾಲಿವುಡ್​ ಚಿತ್ರ ‘ಮಿಷನ್​ ಮಜ್ನು’ ರಿಲೀಸ್​ ದಿನಾಂಕ ಘೋಷಣೆ ಮಾಡಿಕೊಂಡಿದೆ. ಜೂನ್​ 10ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

ಇನ್ನು, ‘ಬೀಸ್ಟ್​’ ಸಿನಿಮಾದ ‘ಅರೇಬಿಕ್​ ಕುತು..’ ಹಾಡಿನ ಬಗ್ಗೆ ಹೇಳುವುದಾದರೆ ಯೂಟ್ಯೂಬ್​ನಲ್ಲಿ ಈ ಗೀತೆಯನ್ನು 150 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಈ ಹಾಡಿನಲ್ಲಿ ದಳಪತಿ ವಿಜಯ್​ ಹಾಗೂ ಪೂಜಾ ಹೆಗ್ಡೆ ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರುವುದು ಲಿರಿಕಲ್​ ವಿಡಿಯೋ ಮಾತ್ರ. ಈ ಗೀತೆಗೆ ಅನಿರುದ್ಧ್ ರವಿಚಂದರ್​ ಸಂಗೀತ ನೀಡಿದ್ದಾರೆ. ಶಿವಕಾರ್ತಿಕೇಯನ್​ ಲಿರಿಕ್ಸ್​ ಬರೆದು ಮಿಂಚುತ್ತಿದ್ದಾರೆ. ಜಾನಿ ಮಾಸ್ಟರ್​ ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ

‘ನಾನು ಪ್ಯಾನ್​ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ