‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ

Malaika Arora: ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ದಿರಿಸಿನ ಕಾರಣಕ್ಕೆ ಹಲವು ಬಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಕೂಡ ಹೀಗೆಯೇ ಆಗಿತ್ತು. ಈ ಬಾರಿ ನಟಿ ಕಾಲೆಳೆಯುವವರ ಡಬಲ್ ಸ್ಟಾಂಡರ್ಡ್​​ಅನ್ನು ಪ್ರಶ್ನಿಸಿದ್ದಲ್ಲದೇ, ಟ್ರೋಲ್​ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ
ಮಲೈಕಾ ಅರೋರಾ
Follow us
| Updated By: shivaprasad.hs

Updated on: Mar 10, 2022 | 11:39 AM

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ (Malaika Arora) ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಚಿತ್ರಗಳಲ್ಲಿ ಅವರು ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ ಕೂಡ ಅವರ ದಿರಿಸು, ಮಾತು, ಗೆಳೆಯ ಅರ್ಜುನ್ ಕಪೂರ್ ಜತೆಗಿನ ಸುತ್ತಾಟ ಈ ಎಲ್ಲಾ ಕಾರಣದಿಂದ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಬಟ್ಟೆಯ ವಿಚಾರಕ್ಕೆ ಮಲೈಕಾ ಬಹಳ ಹಿಂದಿನ ಕಾಲದಿಂದಲೂ ಸುದ್ದಿಯಾಗುತ್ತಾರೆ. ಹಲವರಿಗೆ ಅವರ ಫ್ಯಾಶನ್ ಇಷ್ಟವಾದರೆ, ಮತ್ತೆ ಹಲವರು ಟೀಕಿಸುತ್ತಾರೆ. ಕೆಲವರು ಅತಿಯಾಯ್ತು ಎನ್ನುತ್ತಾರೆ. ಆದರೆ ಮಲೈಕಾ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದು ಕಡಿಮೆ. ಇಂಥದ್ದೇ ಮತ್ತೊಂದು ಪ್ರಕರಣ ಎದುರಾಗಿದ್ದು, ನಟಿ ಈ ಬಾರಿ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್ ತಮ್ಮ ವಿವಾಹದ ನಂತರ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಮಲೈಕಾ ಕಪ್ಪು ಬಣ್ಣದ ಗೌನ್ ಮಾದರಿಯ ದಿರಿಸನ್ನು ಧರಿಸಿ ಭಾಗವಹಿಸಿದ್ದರು. ಮಲೈಕಾಗೆ ಅವರ ಸ್ನೇಹಿತೆಯರಾದ ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಮೃತಾ ಅರೋರಾ ಸಾಥ್ ನೀಡಿದ್ದರು. ಮಲೈಕಾ ದಿರಿಸಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಮತ್ತಷ್ಟು ಜನರು ಕಟುವಾಗಿ ಟೀಕಿಸಿದ್ದರು. ಇವುಗಳಿಗೆ ನಟಿ ಉತ್ತರಿಸಿದ್ದಾರೆ.

ದಿರಿಸಿನ ಕುರಿತ ಇಂತಹ ಪ್ರತಿಕ್ರಿಯೆಗಳಿಗೆ ಮಲೈಕಾ ಪಿಂಕ್​ವಿಲ್ಲಾ ಜತೆ ಮಾತನಾಡುತ್ತಾ ಉತ್ತರಿಸಿದ್ದಾರೆ. ತಮಗೆ ವೈಯಕ್ತಿಕವಾಗಿ ದಿರಿಸಿನ ಬಗ್ಗೆ ಸಿಗುವ ಪ್ರತಿಕ್ರಿಯೆಗಳೆಲ್ಲವೂ ‘ಅದ್ಭುತವಾಗಿತ್ತು’ ಎಂದೇ ಆಗಿರುತ್ತದೆ. ಆದರೆ ಕಾಲೆಳೆಯುವವರದ್ದು ಡಬಲ್ ಸ್ಟಾಂಡರ್ಡ್ ಎಂದಿದ್ದಾರೆ ನಟಿ. ಇದಕ್ಕೆ ಅವರು ಉದಾಹರಣೆಯನ್ನೂ ನೀಡಿದ್ದಾರೆ. ‘‘ಅಮೇರಿಕನ್ ಗಾಯಕಿಯರಾದ ರಿಹಾನ್ನಾ, ಜೆನ್ನಿಫರ್ ಲೋಪೆಜ್, ಬಿಯಾನ್ಸ್ ಮೊದಲಾದವರು ಇಂಥದ್ದೇ ಉಡುಗೆ ಧರಿಸಿದರೆ ಎಲ್ಲರೂ ಅದ್ಭುತವಾಗಿದೆ ಎನ್ನುತ್ತಾರೆ. ಆದರೆ ಅದನ್ನೇ ನಾನು ಧರಿಸಿದರೆ ಎಲ್ಲರೂ ‘ಇಂತಹ ಬಟ್ಟೆ ಹಾಕುತ್ತೀರಾ?’, ‘ನೀವೊಬ್ಬ ತಾಯಿ’, ‘ನೀವು ಅದು, ನೀವು ಇದು..’ ಹೀಗೆಲ್ಲಾ ಪ್ರತಿಕ್ರಿಯೆ ನೀಡಲು ಆರಂಭಿಸುತ್ತಾರೆ’’ ಎಂದು ಮಲೈಕಾ ಹೇಳಿದ್ದಾರೆ.

ಇಂತಹ ದಿರಿಸುಗಳು ಸಾರ್ವತ್ರಿಕ ಎಂದಿರುವ ನಟಿ, ‘‘ನೀವು ಯಾರನ್ನೋ ಇಂಥದ್ದೇ ದಿರಿಸಿಗೆ ಹೊಗಳುತ್ತೀರಿ. ಮತ್ತೊಬ್ಬರಿಗೆ ತೆಗಳುತ್ತೀರಿ ಎಂದಾದರೆ ಅದು ನಿಮ್ಮಲ್ಲಿರುವ ಡಬಲ್ ಸ್ಟಾಂಡರ್ಡ್​​ಅನ್ನು ತೋರಿಸುತ್ತದೆ’’ ಎಂದು ಖಡಕ್ ಆಗಿ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ.

ಇಂತಹ ಟ್ರೋಲ್​ಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಲೈಕಾ, ಮೊದಲೆಲ್ಲಾ ತಲೆ ಕೆಡಿಸಿಕೊಳ್ಳುತ್ತಿದ್ದೆ. ಆದರೆ ಈಗ ಅವುಗಳ ಬಗ್ಗೆ ಯೋಚಿಸುವುದಿಲ್ಲ ಎಂದಿದ್ದಾರೆ. ಅದಾಗ್ಯೂ ಕೆಲವೊಮ್ಮೆ ಇವುಗಳು ಅತಿರೇಕಕ್ಕೆ ಹೋದಾಗ ಬೇಸರವಾಗುತ್ತದೆ ಎಂದಿದ್ದಾರೆ ನಟಿ.

ಮಲೈಕಾ ಅರೋರಾ ಬಾಲಿವುಡ್​ನಲ್ಲಿ ತಮ್ಮ ನೃತ್ಯದಿಂದಲೇ ಛಾಪು ಮೂಡಿಸಿದವರು. ‘ಚಯ್ಯ ಚಯ್ಯ’, ‘ಮಾಹಿ ವೆ’, ‘ಕಾಲ್ ಧಮಾಲ್’, ‘ಮುನ್ನಿ ಬದನಾಮ್ ಹೋಯಿ’ ಮೊದಲಾದ ಸೂಪರ್ ಹಿಟ್ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಜನಪ್ರಿಯತೆ ಪಡೆದವರು.

ಇದನ್ನೂ ಓದಿ:

ವೀಕೆಂಡ್ ಮೂಡಲ್ಲಿ ನಟಿ ಮಲೈಕಾ ಅರೋರಾ; ಕಲರ್​ಪುಲ್ ಡ್ರೆಸ್​ನಲ್ಲಿ ಮಿಂಚಿದ ಹಾಟ್​ ಬೆಡಗಿ; ಇಲ್ಲಿವೆ ಫೋಟೋಗಳು

‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ

ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ