AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಪ್ತವಾಗಿ ಮದುವೆಯಾಗಿದ್ದ ಖ್ಯಾತ ನಟಿ; ವಿಷಯವನ್ನು ವರ್ಷಗಳ ಕಾಲ ಎಲ್ಲರಿಂದ ಮುಚ್ಚಿಟ್ಟಿದ್ದೇಕೆ?

Amrita Rao | RJ Anmol: ಬಾಲಿವುಡ್​ನ ಖ್ಯಾತ ನಟಿ ಅಮೃತಾ ರಾವ್ ಹಾಗೂ ಆರ್​ಜೆ ಅನ್ಮೋಲ್ ಎಲ್ಲರಿಗೂ ತಿಳಿದಿದ್ದಂತೆ 2016ರಲ್ಲಿ ವಿವಾಹವಾಗಿದ್ದರು. ಆದರೆ ಅದಕ್ಕೂ ಮೊದಲೇ ಗುಪ್ತವಾಗಿ ವಿವಾಹವಾಗಿದ್ದೆವು ಎಂದು ಈ ಜೋಡಿ ಹೇಳಿಕೊಂಡಿದೆ. ಅಂತಹ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕರ ಮಾಹಿತಿ.

ಗುಪ್ತವಾಗಿ ಮದುವೆಯಾಗಿದ್ದ ಖ್ಯಾತ ನಟಿ; ವಿಷಯವನ್ನು ವರ್ಷಗಳ ಕಾಲ ಎಲ್ಲರಿಂದ ಮುಚ್ಚಿಟ್ಟಿದ್ದೇಕೆ?
ಆರ್​ಜೆ ಅನ್ಮೋಲ್ ಹಾಗೂ ಅಮೃತಾ ರಾವ್
TV9 Web
| Updated By: shivaprasad.hs|

Updated on:Mar 10, 2022 | 8:14 AM

Share

ಬಾಲಿವುಡ್ ನಲ್ಲಿ ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ‌ ಕಾಲಿಡುವುದಾದರೆ ಬಹಳ ಅದ್ದೂರಿ ಸಮಾರಂಭ ಏರ್ಪಡಿಸಲಾಗುತ್ತದೆ. ಕಾರ್ಯಕ್ರಮಕ್ಕೆ‌ ಬಾಲಿವುಡ್ (Bollywood) ಚಿತ್ರರಂಗವನ್ನು ಆಹ್ವಾನಿಸಲಾಗುತ್ತದೆ. ಇಂತಹ ಹಲವು ಅದ್ದೂರಿ ಮದುವೆಗಳಿಗೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ‌. ಆದರೆ ಈಗ ಖ್ಯಾತ ನಟಿಯೋರ್ವರು ತಮ್ಮ ಗೆಳೆಯನೊಂದಿಗೆ ಗುಪ್ತವಾಗಿ ಮದುವೆಯಾಗಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗುಪ್ತವಾಗಿ‌ ಮದುವೆಯಾದ ಈ ಜೋಡಿ ಕೆಲವು ವರ್ಷಗಳ ನಂತರ ಅಧಿಕೃತವಾಗಿ ಎಲ್ಲರ ಸಮ್ಮುಖದಲ್ಲೂ ಮದುವೆಯಾಗಿದ್ದಾರೆ. ಹಾಗಾದರೆ‌‌ ಮೊದಲು ಮದುವೆಯಾಗಿದ್ದೇಕೆ? ಅದನ್ನು ಎಲ್ಲರಿಂದ‌ ಮುಚ್ಚಿಟ್ಟಿದ್ದೇಕೆ? ಈ ಎಲ್ಲಾ ವಿಚಾರಗಳನ್ನೂ ಈ ತಾರಾ ಜೋಡಿಯೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಹೀಗೆ ಗುಪ್ತವಾಗಿ ಮದುವೆಯಾಗಿದ್ದ ತಾರಾ ಜೋಡಿಯೆಂದರೆ ಅದು ಅಮೃತಾ ರಾವ್ (Amrita Rao) ಹಾಗೂ ಆರ್ ಜೆ ಅನ್ಮೋಲ್ (RJ Anmol).

ಅಮೃತಾ ರಾವ್ 2002ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಶಾಹಿದ್ ಕಪೂರ್ ಜತೆ ‘ವಿವಾಹ್’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಅವರ ಗೆಳೆಯ ಆರ್​ಜೆ ಅನ್ಮೋಲ್. ರೇಡಿಯೋ ಜಾಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 2009ರ ಸಮಯದಲ್ಲಿ ಈರ್ವರೂ ಪರಿಚಯವಾಗಿದ್ದರು. 2016ರಲ್ಲಿ ಏಳು ವರ್ಷಗಳ ಸುತ್ತಾಟದ ನಂತರ ವಿವಾಹವಾಗಿದ್ದರು. ಆದರೆ ಇದೀಗ ಅಮೃತಾ ಹಾಗೂ ಅನ್ಮೋಲ್ ತಾವು 2016ಕ್ಕೂ ಮೊದಲೇ ಗುಪ್ತವಾಗಿ‌ ಮದುವೆಯಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಮಾತನಾಡಿರುವ ಈ ಜೋಡಿ ಅಧಿಕೃತ ವಿವಾಹಕ್ಕೂ ಎರಡು ವರ್ಷಗಳ ಮುನ್ನ ಅಂದರೆ 2014ರಲ್ಲೇ ಮದುವೆಯಾಗಿದ್ದೆವು ಎಂದು ಹೇಳಿದ್ದಾರೆ. ಇಂತಹ ನಿರ್ಧಾರಕ್ಕೆ‌ ಏನು ಕಾರಣ ಎನ್ನುವುದನ್ನೂ ಬಹಿರಂಗಪಡಿಸಲಾಗಿದೆ.

ಅಮೃತಾಗೆ 2014ರ ಸಮಯದಲ್ಲಿ ದೊಡ್ಡ ಬ್ಯಾನರ್ ನ ಸಿನಿಮಾಗಳಲ್ಲಿ ಆಫರ್ ಸಿಕ್ಕಿತ್ತಂತೆ. ಅದೇ ವೇಳೆ ಆರ್ ಜೆ ಅನ್ಮೋಲ್ ಅವರಿಗೂ ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ನಿರೂಪಕರಾಗಿ ಹೊಸ ಹೊಸ ಅವಕಾಶಗಳು ಸಿಗತೊಡಗಿದವಂತೆ. ಮೊದಲೊಮ್ಮೆ ಅನ್ಮೋಲ್ ಮದುವೆಯಾಗೋಣ ಎಂದಿದ್ದಕ್ಕೆ ಅಮೃತಾ ನಿರಾಕರಿಸಿದ್ದರಂತೆ. ಮತ್ತೊಮ್ಮೆ ಕೇಳಿದಾಗ ಹೊಸ ಆಫರ್ ಗಳು ಸಿಗತೊಡಗಿದ್ದರಿಂದ ನಿರಾಕರಿಸಿದೆ ಎಂದು ಅಮೃತಾ ಹೇಳಿಕೊಂಡಿದ್ದಾರೆ.

2012ರ ಸಮಯದಲ್ಲಿ ‘ಜಾಲಿ ಎಲ್​ಎಲ್​ಬಿ’ ಸೇರಿದಂತೆ ಹಲವು ದೊಡ್ಡ ಚಿತ್ರಗಳು ಅಮೃತಾ ಬತ್ತಳಿಕೆಗೆ ಸೇರ್ಪಡೆಯಾಗಿದ್ದವು. ಒಂದು ವೇಳೆ ಮದುವೆಯಾದರೆ ಇನ್ನೂ ಉತ್ತಮ ಅವಕಾಶಗಳು ಬರುವುದು ತಪ್ಪಿ ಹೋಗುತ್ತವೆ. ಇದು ವೃತ್ತಿ‌ ಜೀವನಕ್ಕೆ ದೊಡ್ಡ ಹೊಡೆತ ನೀಡುತ್ತದೆ ಎಂದು ಅಮೃತಾ ಭಾವಿಸಿದ್ದರು. ಇದರಿಂದ ಈರ್ವರೂ ಗುಪ್ತವಾಗಿ ಮದುವೆಯಾಗುವ ತೀರ್ಮಾನ ಮಾಡಿದೆವು ಎಂದು ಅಮೃತಾ ಹೇಳಿದ್ದಾರೆ.

ಅಮೃತಾ- ಅನ್ಮೋಲ್:

ಮದುವೆಗೆ ತಮ್ಮ ಸಂಬಂಧಿಕರನ್ನೂ ಆಹ್ವಾನಿಸದೇ ಬಹಳ ಗುಪ್ತವಾಗಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ‌ ಕಾಲಿಟ್ಟಿದ್ದರು. 2014ರ ಮೇ 15ರಂದು ಈರ್ವರೂ ವಿವಾಹವಾಗಿದ್ದರು. 2016ರಲ್ಲಿ ಅಧಿಕೃತವಾಗಿ ಮತ್ತೊಮ್ಮೆ ವಿವಾಹವಾದರು. ಆದರೆ ಅಮೃತಾ ಹಾಗೂ ಅನ್ಮೋಲ್ ಗುಪ್ತ ವಿವಾಹದ ಬಗ್ಗೆ ಜಗತ್ತಿಗೆ ತಿಳಿದಿದ್ದು ಇಷ್ಟು ದೀರ್ಘ ಕಾಲದ ನಂತರ. ಅದೂ ಅವರೇ ಹೇಳಿಕೊಂಡಿದ್ದರಿಂದ! ಮುಂದಿನ ವಿಡಿಯೋದಲ್ಲಿ ಗುಪ್ತವಾಗಿ‌ ಮದುವೆಯಾಗಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದಾಗಿ ಈ ಜೋಡಿ ತಿಳಿಸಿದೆ.

ವಿವಾಹದ ಬಗ್ಗೆ ಅನ್ಮೋಲ್- ಅಮೃತಾ ಹಂಚಿಕೊಂಡ ವಿಡಿಯೋ:

ಇದನ್ನೂ ಓದಿ:

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

ಟಾಪ್ ಮಾತ್ರ ಧರಿಸಿ ಫೋಟೋ ಹಂಚಿಕೊಂಡ ಮಲ್ಲಿಕಾ ಶೆರಾವತ್

Published On - 8:12 am, Thu, 10 March 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!