ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

James movie tattoo: ಅಭಿಮಾನಿಗಳ ಪಾಲಿಗೆ ‘ಜೇಮ್ಸ್​’ ಎಂದರೆ ಬರೀ ಸಿನಿಮಾ ಆಗಿ ಉಳಿದಿಲ್ಲ. ಬದಲಿಗೆ ಒಂದು ಎಮೋಷನ್​ ಆಗಿ ಬದಲಾಗಿದೆ. ಅದಕ್ಕೆ ಈ ಟ್ಯಾಟೂ ಫೋಟೋ ಸೂಕ್ತ ಸಾಕ್ಷಿ ಎನ್ನಬಹುದು.

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ
‘ಜೇಮ್ಸ್’ ಶೀರ್ಷಿಕೆಯ ಟ್ಯಾಟೂ
Follow us
TV9 Web
| Updated By: ಮದನ್​ ಕುಮಾರ್​

Updated on: Mar 10, 2022 | 7:59 AM

ನಟ ಪುನೀತ್​ ರಾಜ್​ಕುಮಾರ್​ ( Puneeth Rajkumar) ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಇಂದಿಗೂ ಕಷ್ಟ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ (James Movie) ಬಗ್ಗೆ ಸಿನಿಪ್ರಿಯರಿಗೆ ಸಖತ್​ ನಿರೀಕ್ಷೆ ಇದೆ. ಮಾ.17ರಂದು ಪುನೀತ್​ ಜನ್ಮದಿನ. ಆ ವಿಶೇಷ ದಿನದಂದೇ ‘ಜೇಮ್ಸ್​’ ರಿಲೀಸ್​ ಆಗುತ್ತಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು (Puneeth Rajkumar Fans) ರಾಜ್ಯಾದ್ಯಂತ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಲವು ಬಗೆಯಲ್ಲಿ ಜನರು ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ‘ಪವರ್​ ಸ್ಟಾರ್​’ ಅವರ ಕೊನೇ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಗಲಿದೆ. ಅಭಿಮಾನಿಗಳಲ್ಲಿ ಯಾವ ಪರಿ ಕ್ರೇಜ್​ ಸೃಷ್ಟಿ ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವು ಘಟನೆಗಳು ನಡೆಯುತ್ತಿವೆ. ರಿಲೀಸ್​ ಆಗುವುದಕ್ಕಿಂತ ಹತ್ತಾರು ದಿನಗಳಿಗೂ ಮುನ್ನವೇ ಚಿತ್ರಮಂದಿರಗಳ ಮುಂಭಾಗದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ಅದರ ಜೊತೆಗೆ ‘ಜೇಮ್ಸ್​’ ಶೀರ್ಷಿಕೆಯ ಟ್ಯಾಟೂ ಫೋಟೋಗಳು ಕೂಡ ವೈರಲ್​ ಆಗಿವೆ. ಕೆಲವು ಅಭಿಮಾನಿಗಳು ಮೈಮೇಲೆ ‘ಜೇಮ್ಸ್​’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಅಪ್ಪು ಮೇಲೆ ತಮಗೆ ಇರುವ ಅಭಿಮಾನ ಎಂಥದ್ದು ಎಂಬುದನ್ನು ತೋರಿಸುತ್ತಿದ್ದಾರೆ.

ಅಭಿಮಾನಿಯೊಬ್ಬರು ಕುತ್ತಿಗೆಯ ಮೇಲೆ ‘ಜೇಮ್ಸ್​’ ಶೀರ್ಷಿಕೆಯನ್ನು ಇಂಗ್ಲಿಷ್​ ಅಕ್ಷರದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಆ ಪರಿಯಾಗಿ ಅಭಿಮಾನಿಗಳಲ್ಲಿ ಈ ಸಿನಿಮಾ ಕ್ರೇಜ್​ ಸೃಷ್ಟಿ ಮಾಡಿದೆ. ಪುನೀತ್​ ರಾಜ್​ಕುಮಾರ್​ ಅವರನ್ನು ದೊಡ್ಡ ಪರದೆ ಮೇಲೆ ಹೀರೋ ಆಗಿ ಕಾಣಲು ‘ಜೇಮ್ಸ್​’ ಮೂಲಕ ಕೊನೇ ಅವಕಾಶ ಸಿಗುತ್ತಿದೆ. ಹಾಗಾಗಿ ಅಭಿಮಾನಿಗಳ ಪಾಲಿಗೆ ಇದು ಬರೀ ಸಿನಿಮಾ ಆಗಿ ಉಳಿದಿಲ್ಲ. ಬದಲಿಗೆ ಒಂದು ಎಮೋಷನ್​ ಆಗಿ ಬದಲಾಗಿದೆ. ಅದಕ್ಕೆ ಈ ಟ್ಯಾಟೂ ಫೋಟೋ ಸೂಕ್ತ ಸಾಕ್ಷಿ ಎನ್ನಬಹುದು.

ಈಗಾಗಲೇ ಎಲ್ಲ ಚಿತ್ರಮಂದಿರಗಳ ಎದುರಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ ನಿಲ್ಲಿಸಲಾಗಿದೆ. ಬಿಡುಗಡೆಯ ದಿನ ಕಟೌಟ್​ಗೆ ಹಾರ ಹಾಕಿ, ದೀಪ ಬೆಳಗಿ, ಹಾಲಿನ ಅಭಿಷೇಕ ಮಾಡಿ, ಜೈಕಾರ ಹಾಕುವುದು ಸಹಜ. ಆದರೆ ‘ಜೇಮ್ಸ್​’ ಚಿತ್ರದ ವಿಚಾರದಲ್ಲಿ ಇದು ಬೇರೆ ರೀತಿ ಆಗಿದೆ. ಚಿತ್ರದ ಬಿಡುಗಡೆ ಆಗುವುದಕ್ಕಿಂತ ಹಲವು ದಿನಗಳ ಮುನ್ನವೇ ಈ ಪರಿ ಸೆಲೆಬ್ರೇಷನ್​ ಶುರುವಾಗಿದೆ. ಅಪ್ಪು ಕಟೌಟ್​ಗೆ ಅಭಿಮಾನಿಗಳು ಅಭಿಷೇಕ ಮಾಡುತ್ತಿರುವ ಹಲವು ವಿಡಿಯೋಗಳು ಈಗಾಗಲೇ ವೈರಲ್​ ಆಗಿವೆ.

ವೀರೇಶ್​ ಚಿತ್ರಮಂದಿರದಲ್ಲಿ ಪುನೀತ್​ಗೆ 30 ಕಟೌಟ್:

ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​ ತಲೆ ಎತ್ತಿದೆ. ಮಾಗಡಿ ರಸ್ತೆಯಲ್ಲಿ ಇರುವ ವೀರೇಶ್​ ಥಿಯೇಟರ್​ ಮುಂಭಾಗ ಬರೋಬ್ಬರಿ 30 ಕಟೌಟ್​ ನಿಲ್ಲಿಸಲು ಪುನೀತ್​ ಅಭಿಮಾನಿಗಳು ಪ್ಲ್ಯಾನ್​ ಮಾಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ‘ಇದು ಪುನೀತ್​ ಅಭಿನಯದ 30ನೇ ಸಿನಿಮಾ. ಹಾಗಾಗಿ ಈ ಬಾರಿ ವೀರೇಶ್​ ಚಿತ್ರಮಂದಿರದಲ್ಲಿ 30 ಕಟೌಟ್​ಗಳನ್ನು ನಿರ್ಮಿಸುತ್ತಿದ್ದೇವೆ’ ಎಂದು ಅಪ್ಪು ಫ್ಯಾನ್ಸ್​ ಹೇಳಿದ್ದಾರೆ. ಈ ಚಿತ್ರಕ್ಕೆ ಚೇತನ್​ ಕುಮಾರ್​ ನಿರ್ದೇಶನ ಮಾಡಿದ್ದು, ಪುನೀತ್​ಗೆ ನಾಯಕಿಯಾಗಿ ಪ್ರಿಯಾ ಆನಂದ್​ ಅಭಿನಯಿಸಿದ್ದಾರೆ. ಕಿಶೋರ್​ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್​ ಧೂಳೆಬ್ಬಿಸಿದೆ. ಈ ಚಿತ್ರದಲ್ಲಿ ಪುನೀತ್​ ಪಾತ್ರಕ್ಕೆ ಶಿವರಾಜ್​ಕುಮಾರ್​ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

‘ಫ್ಯಾನ್ಸ್​ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್​ ಬಂದಿದ್ದರು ಪುನೀತ್​’: ಆ ಘಟನೆ ನೆನೆದ ಹರ್ಷ

‘ಪುನೀತ್​ ರೀತಿ ನಾವು ಸ್ಟಂಟ್​ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ