‘ಫ್ಯಾನ್ಸ್ಗೆ ಸೆಲ್ಫಿ ಕೊಡಲು ಕಾರು ತಿರುಗಿಸಿಕೊಂಡು ವಾಪಸ್ ಬಂದಿದ್ದರು ಪುನೀತ್’: ಆ ಘಟನೆ ನೆನೆದ ಹರ್ಷ
‘ಜೇಮ್ಸ್’ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಘಟನೆಯನ್ನು ಹರ್ಷ ಈಗ ನೆನಪು ಮಾಡಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿ ಅವರು ಭಾವುಕರಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಲೆಕ್ಕವಿಲ್ಲದಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞ ಹಾಗೂ ಕಲಾವಿದರ ಎದೆಯಲ್ಲಿ ಹಲವು ನೆನಪುಗಳು ಹಸಿರಾಗಿವೆ. ಅವುಗಳ ಬಗ್ಗೆ ಎಷ್ಟು ಮಾತನಾಡಿದರೂ ಮುಗಿಯದು. ಮಾ.17ರಂದು ‘ಜೇಮ್ಸ್’ ಸಿನಿಮಾ (James Movie) ಬಿಡುಗಡೆ ಆಗಲಿದೆ. ಅದು ಪುನೀತ್ ರಾಜ್ಕುಮಾರ್ ಅಭಿನಯದ ಕೊನೇ ಸಿನಿಮಾ. ಆ ಚಿತ್ರದಲ್ಲಿ ಅಪ್ಪು ಜೊತೆ ‘ಗಜಪಡೆ’ ಹರ್ಷ (Gajapade Harsha) ಕೂಡ ಅಭಿನಯಿಸಿದ್ದಾರೆ. ‘ಜೇಮ್ಸ್’ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಘಟನೆಯನ್ನು ಹರ್ಷ ಈಗ ನೆನಪು ಮಾಡಿಕೊಂಡಿದ್ದಾರೆ. ಪುನೀತ್ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಹರ್ಷ ಅವರ ಬಾಲ್ಯದ ಸ್ನೇಹಿತರು ‘ಜೇಮ್ಸ್’ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಶೂಟಿಂಗ್ ಮುಗಿಸಿಕೊಂಡು ಅಪ್ಪು ಬೇಗ ಹೊರಟು ಹೋದರು. ಅಭಿಮಾನಿಗಳು ಕಾಯುತ್ತಿದ್ದಾರೆ ಎಂಬ ವಿಷಯವನ್ನು ಫೋನ್ ಮೂಲಕ ಅವರಿಗೆ ಹರ್ಷ ಹೇಳಿದಾಗ ಮತ್ತೆ ಕಾರು ತಿರುಗಿಸಿಕೊಂಡು ಚಿತ್ರೀಕರಣದ ಸ್ಥಳಕ್ಕೆ ವಾಪಸ್ ಬಂದಿದ್ದರು. ಅದನ್ನು ನೆನೆದು ಹರ್ಷ ಭಾವುಕರಾಗಿದ್ದಾರೆ.
ಇದನ್ನೂ ಓದಿ:
‘ಪುನೀತ್ ರೀತಿ ನಾವು ಸ್ಟಂಟ್ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್, ಜ್ಯೂ. ಎನ್ಟಿಆರ್
‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’: ‘ಜೇಮ್ಸ್’ ಬಗ್ಗೆ ಚಿಕ್ಕಣ್ಣ ನೋವಿನ ನುಡಿ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ

