ಪುನೀತ್​ ನಟನೆಯ ‘ಜೇಮ್ಸ್​’ ಸಿನಿಮಾದ ಪ್ರೆಸ್​ಮೀಟ್​ ಲೈವ್​ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

ಈಗಾಗಲೇ ‘ಜೇಮ್ಸ್​’ ಸಿನಿಮಾದ ಸೆನ್ಸಾರ್​ ಪ್ರಕ್ರಿಯೆ ಮುಗಿದಿದ್ದು, ಯು/ಎ ಸರ್ಟಿಫಿಕೇಟ್​​ ಪಡೆದುಕೊಂಡಿದೆ. ಈ ಎಲ್ಲಾ ವಿಚಾರದ ಕುರಿತು ಮಾಹಿತಿ ನೀಡೋಕೆ ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.

TV9kannada Web Team

| Edited By: Rajesh Duggumane

Mar 06, 2022 | 8:05 PM

ನಟ ಪುನೀತ್​ ರಾಜ್​ಕುಮಾರ್ ಅವರ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಅಂದು ಅಪ್ಪು ಜನ್ಮದಿನ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾ ಹಾಡು ಹಾಗೂ ಟೀಸರ್​ಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ‘ಜೇಮ್ಸ್​’ ಸಿನಿಮಾದ ಸೆನ್ಸಾರ್​ ಪ್ರಕ್ರಿಯೆ ಮುಗಿದಿದ್ದು, ಯು/ಎ ಸರ್ಟಿಫಿಕೇಟ್​​ ಪಡೆದುಕೊಂಡಿದೆ. ಈ ಎಲ್ಲಾ ವಿಚಾರದ ಕುರಿತು ಮಾಹಿತಿ ನೀಡೋಕೆ ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್ (ShivarajKumar)​ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ‘ಜೇಮ್ಸ್​’ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಶಿವರಾಜ್​ಕುಮಾರ್ ಡಬ್​ ಮಾಡಿದ್ದಾರೆ. ಟೀಸರ್​ನಲ್ಲಿ ಇದರ ಝಲಕ್​ ಸಿಕ್ಕಿದೆ. ಅಕ್ಟೋಬರ್​ 29ರಂದು ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ್ದರು. ಅದಾಗಲೇ ಅವರು ‘ಜೇಮ್ಸ್​’ ಸಿನಿಮಾ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿದ್ದರು. ಒಂದು ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇತ್ತು. ಆದರೆ, ವಿಧಿಯಾಟವೇ ಬೇರೆ ಆಗಿತ್ತು. ಪುನೀತ್ ಅವರನ್ನು ದೇವರು ಬೇಗ ಕರೆಸಿಕೊಂಡರು. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಪುನೀತ್​ ಕಟೌಟ್​ ತಯಾರಿ; ‘ಜೇಮ್ಸ್​’ ಚಿತ್ರದ ಅದ್ದೂರಿ ಬಿಡುಗಡೆಗೆ ದಿನಗಣನೆ

ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಜೇಮ್ಸ್’​; ಪುನೀತ್​ ಸಿನಿಮಾಗೆ ಯಾವ ಪ್ರಮಾಣಪತ್ರ?

Follow us on

Click on your DTH Provider to Add TV9 Kannada