‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’: ರಿಷಬ್​ ಶೆಟ್ಟಿ ಖಡಕ್​ ನಿರ್ಧಾರ

‘ಪೆದ್ರೊ’ ಚಿತ್ರದ ನಿರ್ಮಾಪಕ​ ರಿಷಬ್​ ಶೆಟ್ಟಿ ಈ ರೀತಿ ಹೇಳಿದ್ದಕ್ಕೆ ಕಾರಣ ಇದೆ. ಅದೇನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’: ರಿಷಬ್​ ಶೆಟ್ಟಿ ಖಡಕ್​ ನಿರ್ಧಾರ
| Updated By: ಮದನ್​ ಕುಮಾರ್​

Updated on: Mar 06, 2022 | 4:03 PM

ಕನ್ನಡದ ‘ಪೆದ್ರೊ’ ಸಿನಿಮಾ (Pedro Movie) ಬೇರೆ ಬೇರೆ ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ. ಆದರೆ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಈ ಚಿತ್ರ ಆಯ್ಕೆ ಆಗಲಿಲ್ಲ. ಇದು ಅನೇಕ ಸಿನಿಪ್ರಿಯರಿಗೆ ಬೇಸರ ಮೂಡಿಸಿತು. ಈ ಬಗ್ಗೆ ನಿರ್ಮಾಪಕ ರಿಷಬ್​ ಶೆಟ್ಟಿ, ನಿರ್ದೇಶಕ ನಟೇಶ್​ ಹೆಗಡೆ (Natesh Hegde) ಹಾಗೂ ನಟ ರಾಜ್​ ಬಿ. ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ನಡೆಸಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಪೆದ್ರೊ’ ಚಿತ್ರವನ್ನು ಬೆಂಗಳೂರು ಸಿನಿಮೋತ್ಸವಕ್ಕೆ ಆಯ್ಕೆ ಮಾಡದೇ ಇರುವುದಕ್ಕೆ ಅನೇಕ ಸೆಲೆಬ್ರಿಟಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈಗ ಈ ಚಿತ್ರವನ್ನು ಸಿನಿಮೋತ್ಸವಕ್ಕೆ ತೆಗೆದುಕೊಳ್ಳವ ಸಾಧ್ಯತೆ ಬಗ್ಗೆ ಕೆಲವರು ಫೋನ್​ ಮಾಡಿ ರಿಷಬ್​​ ಶೆಟ್ಟಿ ಜೊತೆ ಮಾತನಾಡಿದ್ದುಂಟು. ಆದರೆ ಆ ವಿಚಾರದಲ್ಲಿ ರಿಷಬ್​ ಶೆಟ್ಟಿ (Rishab Shetty) ಖಡಕ್​ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’ ಎಂದು ಅವರು ಹೇಳಿದ್ದಾರೆ. ರಿಷಬ್​ ಶೆಟ್ಟಿ ಈ ರೀತಿ ಹೇಳಿದ್ದಕ್ಕೆ ಕಾರಣ ಇದೆ. ಅದೇನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:

‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ

ರಿಷಬ್​ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್​ ರಿಲೀಸ್​; ನಟೇಶ್ ಹೆಗಡೆ​ ನಿರ್ದೇಶನಕ್ಕೆ ಮೆಚ್ಚುಗೆ

Follow us