ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಾಡು ಹಾಡಿದ ಸಚಿವೆ ಶಶಿಕಲಾ ಜೊಲ್ಲೆ!; ವಿಡಿಯೋ ನೋಡಿ

TV9 Web
| Updated By: ganapathi bhat

Updated on: Mar 06, 2022 | 2:52 PM

ವಕ್ಫ್ ಮತ್ತು ದೇವಸ್ಥಾನಗಳ ಆಸ್ತಿ ದುರ್ಬಳಕೆ ತಡೆಯಬೇಕಾಗಿರುವ ಹಿನ್ನೆಲೆ ಅಧಿವೇಶನ ಮುಗಿದ ಬಳಿಕ ಡ್ರೋನ್ ಮೂಲಕ ಸರ್ವೆ ಕಾರ್ಯ ನಡೆಯಲಿದೆ ಎಂದು ಇದೇ ವೇಳೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.

ಧಾರವಾಡ: ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಡು ಹಾಡಿದ್ದಾರೆ. ಈ ಮಧ್ಯೆ, ಹಾಡಿನ ಕೆಲ ಸಾಲುಗಳನ್ನು ಮರೆತಿದ್ದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜಕೀಯದ್ದೇ ಕೆಲಸದಿಂದ ತಲೆಗೆ ತುಕ್ಕು ಹಿಡಿದಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಮತ್ತೆ ಹಾಡು ಮುಂದುವರಿಸಿದ್ದಾರೆ.

ಧಾರವಾಡದಲ್ಲಿ ನಡೆದಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ವೇಳೆ ಹಾಡು ಹಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಷ್ಟು ಮಹಿಳೆಯರನ್ನು ನೋಡಿ ಹಾಡೊಂದು ನೆನಪಾಗುತ್ತಿದೆ. ಹೀಗಾಗಿ ಹಾಡು ಹೇಳುವೆ ಎಂದು ತಿಳಿಸಿ ಸಚಿವೆ ಹಾಡಿದ್ದಾರೆ. ಆಲಕ್ಕೆ ಹೂವಿಲ್ಲ, ಸಾಲಕ್ಕೆ ಕೊನೆಯಿಲ್ಲ, ತಾಯಿಯ ಮನೆಯೂ ಸ್ಥಿರವಲ್ಲ ನನ ಮಗಳೇ ಎಂಬ ಹಾಡು ಹಾಡಿದ್ದಾರೆ.

ವಕ್ಫ್ ಮತ್ತು ದೇವಸ್ಥಾನಗಳ ಆಸ್ತಿ ದುರ್ಬಳಕೆ ತಡೆಯಬೇಕಾಗಿರುವ ಹಿನ್ನೆಲೆ ಅಧಿವೇಶನ ಮುಗಿದ ಬಳಿಕ ಡ್ರೋನ್ ಮೂಲಕ ಸರ್ವೆ ಕಾರ್ಯ ನಡೆಯಲಿದೆ ಎಂದು ಇದೇ ವೇಳೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇವಸ್ಥಾನಗಳನ್ನು ಖಾಸಗೀಕರಣ ಮಾಡುತ್ತಿಲ್ಲ; ದೇವಸ್ಥಾನಗಳಿಗೆ ಸ್ವಾಯುತ್ತತೆ ಕೊಡುತ್ತಿದ್ದೇವೆ: ಶಶಿಕಲಾ ಜೊಲ್ಲೆ ಹೇಳಿಕೆ

ಇದನ್ನೂ ಓದಿ: ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಸಾಧ್ಯತೆ: ಸಚಿವೆ ಶಶಿಕಲಾ ಜೊಲ್ಲೆ