ಪುನೀತ್​ ಮೇಲಿನ ಅಭಿಮಾನಕ್ಕೆ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ ಫ್ಯಾನ್ಸ್​; ಇಲ್ಲಿದೆ ವಿಡಿಯೋ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಇರುವ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಈ ಕಾರ್ಯ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದಾರೆ.

ಪುನೀತ್​ ಮೇಲಿನ ಅಭಿಮಾನಕ್ಕೆ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ ಫ್ಯಾನ್ಸ್​; ಇಲ್ಲಿದೆ ವಿಡಿಯೋ
| Updated By: ಮದನ್​ ಕುಮಾರ್​

Updated on:Mar 06, 2022 | 10:03 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ ಅವರ ನೆನಪು ಎಂದಿಗೂ ಹಸಿರಾಗಿ ಇರುತ್ತದೆ. ಸಿನಿಮಾ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದ ಅವರನ್ನು ಮರೆಯಲು ಸಾಧ್ಯವಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಅನೇಕ ರಸ್ತೆ, ವೃತ್ತ, ಪಾರ್ಕ್​ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್​ ಹೆಸರು ಇಡಲಾಗಿದೆ. ದೇವರ ಪಕ್ಕದಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಕೂಡ ಇದೆ. ಈಗ ಪುನೀತ್​ ರಾಜ್​ಕುಮಾರ್​ ಅವರ ಮೂರ್ತಿಯನ್ನು (Puneeth Rajkumar Statue) ಪ್ರತಿಷ್ಠಾಪನೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಹೂವಿನ ಹಡಗಲಿಯಲ್ಲಿ (Huvina Hadagali) ಇರುವ ‘ಪವರ್​ ಸ್ಟಾರ್​’ ಫ್ಯಾನ್ಸ್​ ಈ ಕಾರ್ಯ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿ, ಸಾವಿರಾರು ಜನರು ಸೇರಿ ಹಬ್ಬದಂತೆ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಬಣ್ಣ ಬಣ್ಣದ ಲೈಟಿಂಗ್ಸ್​ ಹಾಕಿ, ಪುನೀತ್​ ಅವರ ಅನೇಕ ಪೋಸ್ಟರ್​ಗಳನ್ನು ಅಂಟಿಸಿ ಖುಷಿಪಡಲಾಗಿದೆ. ರಾಜ್ಯದ ಹಲವು ಊರುಗಳಿಂದ ಈ ರೀತಿಯ ಘಟನೆಗಳು ವರದಿ ಆಗುತ್ತಿರುವುದು ಅಪ್ಪು ಮೇಲಿನ ಅಪಾರವಾದ ಪ್ರೀತಿ-ಅಭಿಮಾನಕ್ಕೆ ಸಾಕ್ಷಿ. ಮಾ.17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನ. ಅಂದು ‘ಜೇಮ್ಸ್​’ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಆ ಸಿನಿಮಾವನ್ನು ಬರಮಾಡಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ:

ಹೇಗಿದೆ ನೋಡಿ ಪುನೀತ್​ ಕಟೌಟ್​ ತಯಾರಿ; ‘ಜೇಮ್ಸ್​’ ಚಿತ್ರದ ಅದ್ದೂರಿ ಬಿಡುಗಡೆಗೆ ದಿನಗಣನೆ

ಪಾದಯಾತ್ರೆಯಲ್ಲೂ ರಾರಾಜಿಸಿತು ಪುನೀತ್​ ಫೋಟೋ; ಎಂದೂ ಮರೆಯಾಗದು ಅಪ್ಪು ಮೇಲಿನ ಅಭಿಮಾನ

Published On - 9:58 am, Sun, 6 March 22

Follow us