ಪಾದಯಾತ್ರೆಯಲ್ಲೂ ರಾರಾಜಿಸಿತು ಪುನೀತ್​ ಫೋಟೋ; ಎಂದೂ ಮರೆಯಾಗದು ಅಪ್ಪು ಮೇಲಿನ ಅಭಿಮಾನ

ರಾಮನಗರದಿಂದ ಆರಂಭವಾದ ಮೇಕೆದಾಟು ಪಾದಯಾತ್ರೆ ಈಗ ಬೆಂಗಳೂರು ತಲುಪಿದೆ. ಅಭಿಮಾನಿಗಳು ಅಪ್ಪು ಭಾವಚಿತ್ರ ಹಿಡಿದು ಪಾದಯಾತ್ರೆಯಲ್ಲಿ ​ಪಾಲ್ಗೊಂಡಿದ್ದಾರೆ.

TV9kannada Web Team

| Edited By: Madan Kumar

Mar 03, 2022 | 1:58 PM

ಕನ್ನಡ ಚಿತ್ರರಂಗ ಎಂದಿಗೂ ಕೂಡ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಮರೆಯಲು ಸಾಧ್ಯವಿಲ್ಲ. ಹೃದಯಾಘಾತದಿಂದ ಅವರು ಅಕಾಲಿಕ ಮರಣ ಹೊಂದಿದ್ದು ತೀವ್ರ ನೋವಿನ ಸಂಗತಿ. ಅಪ್ಪು ಎಂದರೆ ಎಲ್ಲರಿಗೂ ಸಖತ್​ ಪ್ರೀತಿ-ಗೌರವ. ನಿಧನದ ಬಳಿಕವಂತೂ ಅವರನ್ನು ದೇವರ ಸ್ಥಾನದಲ್ಲಿ ಇಟ್ಟು ನೋಡುತ್ತಿರುವವರ ಸಂಖ್ಯೆ ದೊಡ್ಡದಿದೆ. ಅನೇಕ ಜಾತ್ರೆ, ಸಮಾರಂಭಗಳಲ್ಲೂ ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಉದಾಹರಣೆ ಸಾಕಷ್ಟು ಇದೆ. ಈಗ ಮೇಕುದಾಟು ಪಾದಯಾತ್ರೆಯಲ್ಲಿ (Mekedatu Padayatra) ಕೂಡ ‘ಪವರ್​ ಸ್ಟಾರ್​’ ಫೋಟೋ ರಾರಾಜಿಸಿದೆ. ಅಭಿಮಾನಿಗಳು ಅಪ್ಪು ಭಾವಚಿತ್ರ ಹಿಡಿದು ಪಾದಯಾತ್ರೆಯಲ್ಲಿ ​ಪಾಲ್ಗೊಂಡಿದ್ದಾರೆ. ರಾಮನಗರದಿಂದ ಆರಂಭವಾದ ಪಾದಯಾತ್ರೆ ಈಗ ಬೆಂಗಳೂರು ತಲುಪಿದೆ. ಪುನೀತ್​ ಫೋಟೋ (Puneeth Rajkumar Photo) ಹಿಡಿದುಕೊಂಡಿರುವ ಅಭಿಮಾನಿಗಳು ಸಹ ಇದರಲ್ಲಿ ಪಾಲ್ಗೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಪ್ಪು ಜನ್ಮದಿನ (ಮಾ.17) ಬರಲಿದೆ. ಅದಕ್ಕಾಗಿಯೂ ಅಭಿಮಾನಿಗಳು ಒಂದಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಪುನೀತ್​ ಇಲ್ಲದೇ ಕಳೆಯಿತು ನಾಲ್ಕು ತಿಂಗಳು; ಸಮಾಧಿಗೆ ಪೂಜೆ ಸಲ್ಲಿಸಿದ ಮಕ್ಕಳು

ಪುನೀತ್​ ಆಟೋಗ್ರಾಫ್​ ಹಾಕಿದ್ದ ಬೈಕ್​ ಮೇಲೆ ಅಭಿಮಾನಿಯ ಸವಾರಿ; ಇಲ್ಲಿದೆ ಫೋಟೋ ಗ್ಯಾಲರಿ

Follow us on

Click on your DTH Provider to Add TV9 Kannada