ಪುನೀತ್​ ಇಲ್ಲದೇ ಕಳೆಯಿತು ನಾಲ್ಕು ತಿಂಗಳು; ಸಮಾಧಿಗೆ ಪೂಜೆ ಸಲ್ಲಿಸಿದ ಮಕ್ಕಳು

ಪ್ರತಿ ದಿನ ನೂರಾರು ಅಭಿಮಾನಿಗಳು ಬಂದು ಪುನೀತ್​ ರಾಜ್​ಕುಮಾರ್​ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಅಪ್ಪು​ ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಇಂದು (ಫೆ.28) ಅರ್ಪಿಸಲಾಗಿದೆ.

TV9kannada Web Team

| Edited By: Madan Kumar

Feb 28, 2022 | 12:43 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ನಾಲ್ಕು ತಿಂಗಳು ಮುಗಿದಿದೆ. ‘ಪವರ್​ ಸ್ಟಾರ್​’ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಲೇ ಇಲ್ಲ. ಅ.29ರಂದು ಅಪ್ಪು ಹೃದಯಾಘಾತದಿಂದ ನಿಧನರಾದಾಗ ಅವರ ಕುಟುಂಬಕ್ಕೆ (Puneeth Rajkumar Family) ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇಂದಿಗೂ ಕೂಡ ಪುನೀತ್​ ಪತ್ನಿ-ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂದು (ಫೆ.28) ಫೆಬ್ರವರಿ ತಿಂಗಳ ಕೊನೇ ದಿನ. ಹಾಗಾಗಿ 29ನೇ ತಾರೀಕಿನ ಬದಲಿಗೆ ಒಂದು ದಿನ ಮುಂಚಿತವಾಗಿ ಪುನೀತ್​ ರಾಜ್​ಕುಮಾರ್​ ಸಮಾಧಿಗೆ (Puneeth Rajkumar Samadhi) ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ. ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್​ ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಅರ್ಪಿಸಲಾಗಿದೆ. ಇಂದಿಗೂ ಕೂಡ ಪ್ರತಿ ದಿನ ನೂರಾರು ಅಭಿಮಾನಿಗಳು ಬಂದು ಅಪ್ಪು ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಪುನೀತ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ ಬಿಡುಗಡೆಗೆ ಸಜ್ಜಾಗಿದೆ. ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ಆ ಚಿತ್ರ ರಿಲೀಸ್​ ಆಗಲಿದೆ.

ಇದನ್ನೂ ಓದಿ:

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

ಪುನೀತ್​ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳು ನಟ ‘ದಳಪತಿ’ ವಿಜಯ್​

Follow us on

Click on your DTH Provider to Add TV9 Kannada