AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಎಂದರೆ ಹೋರಾಟ, ಹೋರಾಟವೆಂದರೆ ಕಾಂಗ್ರೆಸ್ ಎಂದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್!

ಕಾಂಗ್ರೆಸ್ ಎಂದರೆ ಹೋರಾಟ, ಹೋರಾಟವೆಂದರೆ ಕಾಂಗ್ರೆಸ್ ಎಂದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್!

TV9 Web
| Edited By: |

Updated on: Mar 03, 2022 | 4:10 PM

Share

ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಅದರೆ ಶ್ರೇಯಸ್ಸು ನಮಗೆ ಬೇಡ, ಅದನ್ನು ಅವರೇ ತೆಗೆದುಕೊಳ್ಳಲಿ, ನಮಗೆ ಯೋಜನೆ ಜಾರಿಗೊಳ್ಳುವುದಷ್ಟೇ ಮುಖ್ಯ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಇಂದು (ಗುರುವಾರ) ಮುಕ್ತಾಯಗೊಳ್ಳುತ್ತಿದೆ. ಕೊನೆಯ ದಿನ ಪಕ್ಷದ ಪ್ರಮುಖ ನಾಯಕರೆಲ್ಲ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ ಗ್ರಾಮೀಣ (Belagavi Rural) ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರು ಟಿವಿ9 ಬೆಂಗಳೂರು ವರದಿಗಾರರೊಂದಿಗೆ ಮಾತಾಡಿದರು. ಕಾಂಗ್ರೆಸ್ ಪಾದಯಾತ್ರೆ ಕೇವಲ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಯಾತ್ರೆ, ಬರೀ ಶೋಅಪ್, ಬಿಲ್ಡಪ್ ಅಂತ ಬಿಜೆಪಿ ಟೀಕಿಸುತ್ತಿರುವುದನ್ನು ಗಮನಕ್ಕೆ ತಂದಾಗ ಲಕ್ಷ್ಮಿ ಅವರು ಶಾಂತಚಿತ್ತರಾಗಿಯೇ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಶೋಅಪ್, ಬಿಲ್ಡಪ್ ಗಳ ಅನಿವಾರ್ಯತೆ ಇಲ್ಲ. ಸ್ಟ್ಯಾಂಡ್ ಆಪ್ ಇಂಡಿಯಾ, ಸಿಟ್ ಅಪ್ ಇಂಡಿಯ, ಗೋ ಇಂಡಿಯ, ಕಮ್ ಇಂಡಿಯ ಮೊದಲಾದ ಘೋಷಣೆಗಳು ಅವರಿಗೆ ಬೇಕಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಅವರು ತಮ್ಮ ಹೆಸರುಗಳನ್ನು ನೀಡಿ ಹೆಸರು ಮಾಡುವ ಪ್ರಯತ್ನದಲ್ಲಿದ್ದಾರೆ, ಎಂದು ಲಕ್ಷ್ಮಿ ಹೇಳಿದರು.

ಇತಿಹಾಸದ ಪುಟಗಳನ್ನು ಕೆದಕಿದರೆ, ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿರುವ ಹೋರಾಟಗಳ ಬಗ್ಗೆ ಎಲ್ಲ ಮಾಹಿತಿ ಸಿಗುತ್ತದೆ. ಜನರ ಅಭ್ಯುದಯ, ಏಳಗೆಗಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ, ಕಾಂಗ್ರೆಸ್ ಅಂದರೆ ಹೋರಾಟ ಎಂದು ಶಾಸಕಿ ಹೇಳಿದರು. ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಅದರೆ ಶ್ರೇಯಸ್ಸು ನಮಗೆ ಬೇಡ, ಅದನ್ನು ಅವರೇ ತೆಗೆದುಕೊಳ್ಳಲಿ, ನಮಗೆ ಯೋಜನೆ ಜಾರಿಗೊಳ್ಳುವುದಷ್ಟೇ ಮುಖ್ಯ ಎಂದು ಅವರು ಹೇಳಿದರು.

ನಾಳೆಯಿಂದ (ಶುಕ್ರವಾರ) ಬಜೆಟ್ ಅಧಿವೇಶನ ಶುರುವಾಗುತ್ತದೆ. ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಅದರ ಘೋಷಣೆಯಾಗಲಿ. ಯೋಜನೆಯ ಪ್ರಸ್ತಾವನೆ ಇಟ್ಟರೆ ನಾವು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ:    Mekedatu Padayatra 2.0 Live: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದತ್ತ ಕಾಂಗ್ರೆಸ್​ ಪಾದಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ ಭಾಗಿ