‘ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರ್ತಾರೆ, ಅದೇ ಇದರ ಸಸ್ಪೆನ್ಸ್’: ನಟ ಉಪೇಂದ್ರ
‘ಹೋಮ್ ಮಿನಿಸ್ಟರ್ ಎಂಬ ಟೈಟಲ್ ಕೇಳಿ ಥಿಯೇಟರ್ ಒಳಗೆ ಹೋದರೆ ನೀವು ಶಾಕ್ ಆಗ್ತೀರಿ’ ಎಂದು ತಮ್ಮ ಹೊಸ ಸಿನಿಮಾದ ಬಗ್ಗೆ ನಟ ಉಪೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ರಿಯಲ್ ಸ್ಟಾರ್’ ಉಪೇಂದ್ರ (Actor Upendra) ಅಭಿನಯದ ‘ಹೋಮ್ ಮಿನಿಸ್ಟರ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಲೇಟ್ ಆದವು. ‘ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುತ್ತೇವೆ’ ಎಂದು ಉಪೇಂದ್ರ ಹೇಳಿದ್ದಾರೆ. ಜೊತೆಗೆ ಸಿನಿಮಾದ ಬಗ್ಗೆ ಕೆಲವು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ‘ಹೋಮ್ ಮಿನಿಸ್ಟರ್’ (Upendra New Movie) ಶೀರ್ಷಿಕೆ ನೋಡಿದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಎನಿಸಬಹುದು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ‘ಇದು ವಿಭಿನ್ನವಾದಂತಹ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. ಹೋಮ್ ಮಿನಿಸ್ಟರ್ ಎಂಬ ಟೈಟಲ್ ಕೇಳಿ ಥಿಯೇಟರ್ ಒಳಗೆ ಹೋದರೆ ನೀವು ಶಾಕ್ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್. ನನಗಿಂತ ವೇದಿಕಾ (Vedhika) ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. ಹಲವು ಹುಡುಗಿಯರು ಈ ಸಿನಿಮಾದಲ್ಲಿ ಇದ್ದಾರೆ. ನಮ್ಮ ನಿರ್ಮಾಪಕರಿಗೆ ಗ್ಲಾಮರ್ ಎಂದರೆ ಇಷ್ಟ. ಮಲೇಷಿಯಾ, ಥಾಯ್ಲೆಂಡ್ನಲ್ಲಿ ಶೂಟಿಂಗ್ ಮಾಡಲಾಗಿದೆ’ ಎಂದಿದ್ದಾರೆ ಉಪೇಂದ್ರ.
ಇದನ್ನೂ ಓದಿ:
ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ; ಇಲ್ಲಿದೆ ಕಲರ್ಫುಲ್ ಫೋಟೋ ಆಲ್ಬಂ
Upendra: ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್ ಸ್ಟಾರ್’ ನೀಡಿದ ಸೂಪರ್ ಅವಕಾಶ
ಮೂವರ ಶೂಟೌಟ್ ಕೇಸ್: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

