AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್​ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್​ ರಿಲೀಸ್​; ನಟೇಶ್ ಹೆಗಡೆ​ ನಿರ್ದೇಶನಕ್ಕೆ ಮೆಚ್ಚುಗೆ

ಗೋಪಾಲ್​ ಹೆಗಡೆ, ರಾಮಕೃಷ್ಣ ಭಟ್​ ದಂಡಿ, ರಾಜ್​ ಬಿ. ಶೆಟ್ಟಿ, ಮೇದಿನಿ ಕೆಳಮನೆ, ನಾಗರಾಜ್​ ಹೆಗಡೆ ಮೊದಲಾದವರು ‘ಪೆದ್ರೊ’ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲಿ ಬಹುತೇಕ ಕಲಾವಿದರು ಸ್ಥಳೀಯರು.

ರಿಷಬ್​ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್​ ರಿಲೀಸ್​; ನಟೇಶ್ ಹೆಗಡೆ​ ನಿರ್ದೇಶನಕ್ಕೆ ಮೆಚ್ಚುಗೆ
ಗೋಪಾಲ್​ ಹೆಗಡೆ- ರಿಷಬ್​ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on:Feb 25, 2022 | 6:14 PM

Share

ರಿಷಬ್ ಶೆಟ್ಟಿ (Rishab Shetty) ಅವರು ‘ರಿಷಬ್​ ಶೆಟ್ಟಿ ಫಿಲ್ಮ್ಸ್​’ (Rishab Shetty Films) ನಿರ್ಮಾಣ ಸಂಸ್ಥೆ ಮೂಲಕ ಭಿನ್ನ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳಿಗೆ ರಿಷಬ್​ ಹೆಚ್ಚು ಆದ್ಯತೆ ನೀಡುತ್ತಾರೆ. ಈಗ ಯುವ ನಿರ್ದೇಶಕ ನಟೇಶ್​ ಹೆಗಡೆ (Natesh Hegde) ನಿರ್ದೇಶನದ ‘ಪೆದ್ರೊ’ ಚಿತ್ರವನ್ನು ರಿಷಬ್​ ಶೆಟ್ಟಿ ನಿರ್ಮಿಸಿದ್ದಾರೆ. ಇಂದು ಚಿತ್ರದ ಟ್ರೇಲರ್​ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಕೆಲವು ಕಡೆಗಳಲ್ಲಿ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಟ್ರೇಲರ್​ ನೋಡಿದ ನಂತರ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿದೆ.

ಗೋಪಾಲ್​ ಹೆಗಡೆ, ರಾಮಕೃಷ್ಣ ಭಟ್​ ದಂಡಿ, ರಾಜ್​ ಬಿ. ಶೆಟ್ಟಿ, ಮೇದಿನಿ ಕೆಳಮನೆ, ನಾಗರಾಜ್​ ಹೆಗಡೆ ಮೊದಲಾದವರು ‘ಪೆದ್ರೊ’ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲಿ ಬಹುತೇಕ ಕಲಾವಿದರು ಸ್ಥಳೀಯರು. ನಿರ್ದೇಶಕ ನಟೇಶ್​ ತಂದೆ ಗೋಪಾಲ್​ ಹೆಗಡೆ ಅವರು ಪೆದ್ರೊ ಪಾತ್ರವನ್ನು ಮಾಡಿದ್ದಾರೆ. ಇವರು ಎಲ್ಲಿಯೂ ನಟನೆ ಕಲಿತವರಲ್ಲ. ಆದಾಗ್ಯೂ, ಅವರು ಉತ್ತಮವಾಗಿ ಅಭಿನಯಿಸಿದ್ದಾರೆ ಎಂಬುದು ಟ್ರೇಲರ್​ ಮೂಲಕ ಸಾಬೀತಾಗಿದೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ರಾಜ್​ ಬಿ. ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ರಾಮೀಣ ಸೊಗಡಿನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ‘ಒಂದು ಹಳ್ಳಿಯಲ್ಲಿರುವ ಎಲೆಕ್ಟ್ರಿಷಿಯನ್ ಅಪರಾಧ ಎಸಗುತ್ತಾನೆ. ಅಲ್ಲಿಂದ ಆತನ ಹಾಗೂ ಸಮಾಜದ ನಡುವೆ ತಿಕ್ಕಾಟ ಆರಂಭ ಆಗುತ್ತದೆ. ಇದನ್ನು ತೋರಿಸುವ ಕೆಲಸ ಸಿನಿಮಾದಲ್ಲಿ ಆಗಿದೆ. ‘ಪೆದ್ರೊ’ ಎಂಬುದು ಕ್ರಿಶ್ಚನ್​ ವ್ಯಕ್ತಿಯ ಹೆಸರು. ಪೀಟರ್​ ಹೆಸರಿನ ಅಪಭ್ರಂಶ ‘ಪೆದ್ರೊ’. ಸಿನಿಮಾ ನೋಡಿ ರಿಷಬ್​ ಶೆಟ್ಟಿ ಸಂತಸಪಟ್ಟಿದ್ದಾರೆ. ಅವರು ಸಿನಿಮಾ ನೋಡಿ ಮೆಚ್ಚಿಕೊಂಡರು. ಅವರು ಈ ಚಿತ್ರವನ್ನು ನಂಬಿ, ನಿರ್ಮಾಣ ಮಾಡಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ನಟೇಶ್ ಹೆಗಡೆ.

ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ‘ಪೆದ್ರೊ’ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ರಿಷಬ್​, ‘ಪೆದ್ರೊ ಟ್ರೇಲರ್ ಬಿಡುಗಡೆಯಾಗಿದೆ. ನಮ್ಮ ಪರಿಶ್ರಮದ ಫಲ ನಿಮ್ಮ ಮುಂದೆ. ನಮ್ಮ ತಲೆಮಾರಿನ ಉತ್ಕೃಷ್ಟ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿಮಾರನ್​ರವರು ನಮ್ಮ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶೀಘ್ರವೇ ಈ ಸಿನಿಮಾ ರಿಲೀಸ್​ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kantara: ‘ಕಾಂತಾರ’ ಚಿತ್ರದಲ್ಲಿ ಏನೆಲ್ಲಾ ಇರಲಿದೆ?; ಗುಟ್ಟು ಬಿಟ್ಟುಕೊಟ್ಟ ರಿಷಬ್ ಶೆಟ್ಟಿ

Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?

Published On - 6:14 pm, Fri, 25 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್