Updated on: Feb 25, 2022 | 8:01 PM
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ತೆರೆಗೆ ಬರೋಕೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.
ಫೆಬ್ರವರಿ 11ರಂದು ರಿಲೀಸ್ ಆದ ಟೀಸರ್ ಸಾಕಷ್ಟು ಸದ್ದು ಮಾಡಿದೆ. ಪರಭಾಷೆಯ ಸ್ಟಾರ್ಗಳು ಈ ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಹಾಗೂ ಇತರ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಪುನೀತ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಅವರ ಅಭಿಮಾನಿಗಳ ವಲಯದಲ್ಲಿ ಖುಷಿ ಇದೆ.
ಪುನೀತ್ ‘ಜೇಮ್ಸ್’ ಸಿನಿಮಾದ ಡಬ್ಬಿಂಗ್ ಕೆಲಸ ಮಾಡಿರಲಿಲ್ಲ. ಹೀಗಾಗಿ, ಈ ಕೆಲಸವನ್ನು ಅವರ ಸಹೋದರ ಶಿವರಾಜ್ಕುಮಾರ್ ಮಾಡಿದ್ದಾರೆ.
‘ನನಗೆ ರೆಕಾರ್ಡ್ ಬ್ರೇಕ್ ಮಾಡಿಯೇ’ ಅಭ್ಯಾಸ ಎನ್ನುವ ಡೈಲಾಗ್ ಪ್ರೇಕ್ಷಕರಿಗೆ ಖುಷಿ ನೀಡಿದೆ. ಇಂತಹ ಹಲವು ಡೈಲಾಗ್ಗಳು ಸಿನಿಮಾದಲ್ಲಿದೆ ಎನ್ನಲಾಗಿದೆ. ಈ ಡೈಲಾಗ್ಗಳಿಗೆ ಚಿತ್ರಮಂದಿರಗಳಲ್ಲಿ ಸಿಳ್ಳೆ ಬೀಳೋದು ಪಕ್ಕಾ.
ಟೀಸರ್ನಲ್ಲಿ ಚಿತ್ರದ ರಿಲೀಸ್ ದಿನಾಂಕವನ್ನೂ ಉಲ್ಲೇಖ ಮಾಡಲಾಗಿದೆ. ಮಾರ್ಚ್ 17ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.
ಟೀಸರ್ ನೋಡಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈ ಮೂಲಕ ‘ಜೇಮ್ಸ್’ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ.
‘ಪರಭಾಷೆಯ ಯಾವ ಚಿತ್ರಕ್ಕೂ ಜೇಮ್ಸ್ ಸಿನಿಮಾ ಟೀಸರ್ ಕಮ್ಮಿ ಇಲ್ಲ. ಅಪ್ಪು ಅವರು ತುಂಬ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಈ ರೀತಿ ಕ್ವಾಲಿಟಿ ಸಿನಿಮಾ ನೀಡಿದರೆ ನಾವು ಹಿಂದೆಂದಿಗಿಂತಲೂ ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತೇವೆ’ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರು ನಮಗೆ ಸ್ಫೂರ್ತಿ. ಜೇಮ್ಸ್ ಎಷ್ಟು ದಿನ ಪ್ರದರ್ಶನ ಕಾಣಲಿದೆಯೋ ಅಷ್ಟು ದಿನಗಳ ಕಾಲ ಚಿತ್ರಮಂದಿರದ ಎದುರು ಅನ್ನದಾನ, ನೇತ್ರದಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದಿದ್ದಾರೆ ಅಪ್ಪು ಫ್ಯಾನ್ಸ್.
ಮಾರ್ಚ್ 17ರಂದು ರಿಲೀಸ್ ಆಗುತ್ತಿರುವ ಪುನೀತ್ ನಟನೆಯ ‘ಜೇಮ್ಸ್’ ಚಿತ್ರದ ಸ್ಟಿಲ್ಗಳು.
‘ಜೇಮ್ಸ್’ ಚಿತ್ರದಲ್ಲಿ ಪುನೀತ್