ರಾಯನ್​ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್​; ಇಲ್ಲಿದೆ ವಿಡಿಯೋ

ರಾಯನ್​ ಫೋಟೋ ಹಾಗೂ ವಿಡಿಯೋಗಳನ್ನು ನೋಡುವುದು ಎಂದರೆ ಅಭಿಮಾನಿಗಳಿಗೆ ಖುಷಿಯ ವಿಚಾರ. ಮೇಘನಾ ಅವರು ರಾಯನ್​ಗೆ​ ಮಾತು ಕಲಿಸುತ್ತಿದ್ದಾರೆ.

TV9kannada Web Team

| Edited By: Rajesh Duggumane

Feb 25, 2022 | 2:34 PM

ಮೇಘನಾ ರಾಜ್​  (Meghan Raj) ಬಾಳಲ್ಲಿ ಮತ್ತೆ ಬೆಳಕು ಮೂಡಿದೆ. ಪತಿ ಚಿರಂಜೀವಿ ಸರ್ಜಾ ಅವರನ್ನು (Chiranjeevi Sarja) ಕಳೆದುಕೊಂಡ ನಂತರ ಮಂಕಾಗಿದ್ದ ಅವರ ಬಾಳಲ್ಲಿ ಬಂದಿದ್ದು ಜ್ಯೂ. ಚಿರು. ಆತನಿಗೆ ರಾಯನ್​ ರಾಜ್​ ಸರ್ಜಾ (Raayan Raj Sarja) ಎಂದು ಹೆಸರು ಇಡಲಾಗಿದೆ. ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ಮೇಘನಾ ರಾಜ್​ ಅವರು ಕುಟುಂಬದ ಕಡೆಗೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಾಕಷ್ಟು ಸಮಯವನ್ನು ಮಗನ ಜತೆ ಕಳೆಯುತ್ತಿದ್ದಾರೆ. ರಾಯನ್​ ಫೋಟೋ ಹಾಗೂ ವಿಡಿಯೋಗಳನ್ನು ನೋಡುವುದು ಎಂದರೆ ಅಭಿಮಾನಿಗಳಿಗೆ ಖುಷಿಯ ವಿಚಾರ. ಮೇಘನಾ ಅವರು ರಾಯನ್​ಗೆ​ ಮಾತು ಕಲಿಸುತ್ತಿದ್ದಾರೆ. ಅಮ್ಮ ಹೇಳಿದಂತೆ ರಾಯನ್​ ಹೇಳಿದ್ದಾನೆ. ಈ ವಿಡಿಯೋ ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ‘ರಾಯನ್ ಸರ್ಜಾ​ ತಂದೆ ತರಹ ಆಗಬೇಕು ಎಂದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು’; ಮೇಘನಾ ರಾಜ್​ ಭಾವುಕ ನುಡಿ

‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್​

Follow us on

Click on your DTH Provider to Add TV9 Kannada