‘ರಾಯನ್ ಸರ್ಜಾ​ ತಂದೆ ತರಹ ಆಗಬೇಕು ಎಂದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು’; ಮೇಘನಾ ರಾಜ್​ ಭಾವುಕ ನುಡಿ

ಪ್ರಜ್ವಲ್​ ದೇವರಾಜ್​, ರಾಗಿಣಿ ಚಂದ್ರನ್​, ಪನ್ನಗ ಭರಣ ಜತೆ ಚಿರು ತುಂಬಾನೇ ಕ್ಲೋಸ್​ ಆಗಿದ್ದರು. ಮೇಘನಾ ಕೂಡ ಇದೇ ಫ್ರೆಂಡ್ಸ್​ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿರು ಅವರನ್ನು ಮೇಘನಾ ಹೆಚ್ಚು ನೆನಪು ಮಾಡಿಕೊಂಡರು.

‘ರಾಯನ್ ಸರ್ಜಾ​ ತಂದೆ ತರಹ ಆಗಬೇಕು ಎಂದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು’; ಮೇಘನಾ ರಾಜ್​ ಭಾವುಕ ನುಡಿ
ಮೇಘನಾ, ರಾಯನ್​, ಚಿರು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 15, 2022 | 2:22 PM

ನಟಿ ಮೇಘನಾ ರಾಜ್ (Meghana Raj)​ ಅವರ ಬದುಕು ನಿಧಾನವಾಗಿ ಮೊದಲಿನ ಹಾಗೆ ಆಗುತ್ತಿದೆ. ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಕಳೆದುಕೊಂಡಿದ್ದ ಮೇಘನಾ ಬಾಳಲ್ಲಿ ಜ್ಯೂ. ಚಿರು ಬಂದಿದ್ದಾನೆ. ರಾಯನ್​ ಸರ್ಜಾ (Raayan Sarj) ಹುಟ್ಟಿದ ನಂತರದಲ್ಲಿ ಮೇಘನಾ ಬಾಳಲ್ಲಿ ಮತ್ತೆ ಖುಷಿ ಮೂಡಿದೆ. ಅವರು ಮರಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಹೊಸಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಖುಷಿ ನೀಡಿದೆ. ಈ ಮಧ್ಯೆ ಅನೇಕ ವೇದಿಕೆಗಳಲ್ಲಿ ಚಿರು ಅವರನ್ನು ಮೇಘನಾ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈಗ ಜೀ ಕನ್ನಡ ವಾಹಿನಿಯ ‘ಗೋಲ್ಡನ್​ ಗ್ಯಾಂಗ್​’ ವೇದಿಕೆ ಮೇಲೆ ಚಿರು ಅವರನ್ನು ನೆನಪು ಮಾಡಿಕೊಂಡು ಮೇಘನಾ ಕಣ್ಣೀರು ಹಾಕಿದ್ದಾರೆ.

‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮವನ್ನು ‘ಗೋಲ್ಡನ್​ ಸ್ಟಾರ್​’ ಗಣೇಶ್​ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ವಾರ ಒಂದು ಸೆಲೆಬ್ರಿಟಿ ಗ್ಯಾಂಗ್​ ಕಾರ್ಯಕ್ರಮಕ್ಕೆ ಆಗಮಿಸುತ್ತದೆ. ಜೀವನದಲ್ಲಿ ಕಳೆದ ಕಹಿ ಹಾಗೂ ಸಿಹಿ ಘಟನೆಯನ್ನು ವೇದಿಕೆ ಮೇಲೆ ಹಂಚಿಕೊಳ್ಳಲಾಗುತ್ತದೆ. ಕಳೆದ ವಾರಾಂತ್ಯದಲ್ಲಿ ಮೇಘನಾ ರಾಜ್​ ಆ್ಯಂಡ್​ ಗ್ಯಾಂಗ್​ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಈ ವೇಳೆ ಚಿರು ಅವರನ್ನು ತುಂಬಾನೇ ಮಿಸ್​ ಮಾಡಿಕೊಂಡಿತು ತಂಡ.

ಪ್ರಜ್ವಲ್​ ದೇವರಾಜ್​, ರಾಗಿಣಿ ಚಂದ್ರನ್​, ಪನ್ನಗ ಭರಣ ಜತೆ ಚಿರು ತುಂಬಾನೇ ಕ್ಲೋಸ್​ ಆಗಿದ್ದರು. ಮೇಘನಾ ಕೂಡ ಇದೇ ಫ್ರೆಂಡ್ಸ್​ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿರು ಅವರನ್ನು ಮೇಘನಾ ಹೆಚ್ಚು ನೆನಪು ಮಾಡಿಕೊಂಡರು. ಪ್ರಜ್ವಲ್​ ದೇವರಾಜ್​ ಕೂಡ ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು.

ಚಿರಂಜೀವಿ ಸರ್ಜಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿರು ಮೇಲೆ ಕರ್ನಾಟಕದ ಜನತೆ ಇಟ್ಟ ಪ್ರೀತಿ ಬಗ್ಗೆ ಮೇಘನಾ ಸಂತಸ ವ್ಯಕ್ತಪಡಿಸಿದರು. ‘ಹುಟ್ಟಿದ ಮೇಲೆ ಏನೋ ಒಂದು ಸಾಧನೆ ಮಾಡುತ್ತೇವೆ. ಇವರು ಏನು ಸಂಪಾದನೆ ಮಾಡಿದ್ದಾರೆ ಎಂದು ಎಲ್ಲರೂ ಕೇಳುತ್ತಾರೆ. ನಾನು ಪ್ರೆಗ್ನೆಂಟ್​ ಆಗಿದ್ದಾಗ ಅಮ್ಮನಿಗೆ ಹೇಳ್ತಾ ಇದ್ದೆ. ನನಗೆ ಮಗೂನೆಲ್ಲ ನೋಡಿಕೊಳ್ಳೋಕೆ ಆಗಲ್ಲ, ನನಗೆ ಬೇರೆ ಪ್ಲ್ಯಾನ್​ ಇದೆ. ಈ ಮಗೂನ ರಸ್ತೆ ಮೇಲೆ ಕೂರಿಸಿ, ಯಾರಾದರೂ ನೋಡಿಕೊಳ್ಳಿ ಎಂದು ನಾನು ಒಮ್ಮೆ ಹೇಳಿದ್ದರೂ, ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಎಷ್ಟು ಜನ ಇದ್ದಾರೋ, ಅಷ್ಟೂ ಜನರು ಬಂದು ನನ್ನ ಮಗುವನ್ನು ಬೇಕಾದರೆ ನೋಡಿಕೊಳ್ಳುತ್ತಿದ್ದರು. ಅವರೇ ಜನ್ಮ ಕೊಟ್ಟ ಮಗು ಎಂಬಷ್ಟು ಪ್ರೀತಿಯಿಂದ ನನ್ನ ಮಗನನ್ನು ನೋಡಿಕೊಳ್ತಾರೆ. ನನ್ನ ಗಂಡ ಚಿರಂಜೀವಿ ಸರ್ಜಾ ಅಷ್ಟು ಪ್ರೀತಿನಾ ಸಂಪಾದಿಸಿದ್ದಾರೆ’ ಎಂದರು ಮೇಘನಾ.

View this post on Instagram

A post shared by Zee Kannada (@zeekannada)

‘ರಾಯನ್​ ಚಿರು ಮಗ ಹೌದು. ಆದರೆ, ಅವನು ತಂದೆಯಂತೆ ಆಗಬೇಕು ಎಂದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು’ ಎಂದರು ಮೇಘನಾ. ಇಡೀ ಕಾರ್ಯಕ್ರಮದಲ್ಲಿ ಚಿರುಗೋಸ್ಕರ ಒಂದು ಚೇರ್​ಅನ್ನು ಹಾಗೆಯೇ ಖಾಲಿ ಬಿಡಲಾಗಿತ್ತು ಅನ್ನೋದು ವಿಶೇಷ.

ಇದನ್ನೂ ಓದಿ: ಹೇಗೆ ಸಾಗ್ತಿದೆ ಮೇಘನಾ ರಾಜ್​ ಕಮ್​ಬ್ಯಾಕ್​ ಜರ್ನಿ? ವಿಡಿಯೋ ಮೂಲಕ ಖುಷಿ ಹಂಚಿಕೊಂಡ ನಟಿ 

‘ನಿಜಕ್ಕೂ ಅದು ಅನಿರೀಕ್ಷಿತವಾಗಿತ್ತು’; ಖುಷಿಯಿಂದ ಎಲ್ಲವನ್ನೂ ಹೇಳಿಕೊಂಡ ಮೇಘನಾ ರಾಜ್​

Published On - 1:42 pm, Tue, 15 February 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ