ಉಕ್ರೇನ್​ನಲ್ಲಿ ಓದುತ್ತಿರುವ ಭಾರತೀಯ ಮಕ್ಕಳು ಬಂಕರ್ ನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ

ಉಕ್ರೇನ್​ನಲ್ಲಿ ಓದುತ್ತಿರುವ ಭಾರತೀಯ ಮಕ್ಕಳು ಬಂಕರ್ ನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 25, 2022 | 4:01 PM

ಎರಡು ದಿನಗಳಿಗಾಗುವಷ್ಟು ಆಹಾರ ಸಾಮಗ್ರಿ ಮತ್ತು ನೀರಿನೊಂದಿಗೆ ಈ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ಬಂಕರ್ ಗೆ ಶಿಫ್ಟ್ ಆಗಿದ್ದಾರೆ. ಬಂಕರ್ ಬಹಳ ಇಕ್ಕಟ್ಟಾದ ಸ್ಥಳಗಳಾಗಿರುತ್ತವೆ. ಅವುಗಳಲ್ಲಿ ಕುರಿಗಳಂತೆ ಇರಬೇಕಾದ ಅನಿವಾರ್ಯತೆ ಅವರಿಗಿದೆ. ಕನ್ನಡ ಮಾತಾಡುತ್ತಿರುವ ವಿದ್ಯಾರ್ಥಿಗಳೂ ಬಂಕರ್ ನಲ್ಲಿದ್ದಾರೆ.

ಈ ಮಕ್ಕಳ ಪರದಾಟ ನೋಡಿ. ಉಕ್ರೇನಲ್ಲಿ ಮೆಡಿಕಲ್ (medical) ವ್ಯಾಸಂಗ ಮಾಡಲು ಹೋಗಿರುವ ಭಾರತೀಯ ಮಕ್ಕಳು. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಉಕ್ರೇನ್ (Ukraine) ಮೇಲೆ ಯುದ್ಧ ಸಾರಿ ಎರಡು ದಿನಗಳಾಗಿವೆ. ಹುಚ್ಚು ಹಟಕ್ಕೆ ಬಿದ್ದಿರುವ ಪುಟಿನ್ ಅಮಾಯಕ ನಾಗರಿಕರ ಜೀವದೊಂದಿಗೆ ಅಕ್ಷರಶಃ ಚೆಲ್ಲಾಟವಾಡುತ್ತಿದ್ದಾರೆ ಅಂತ ಅಂತರರಾಷ್ಟ್ರೀತ ಸಮುದಾಯ ಜರಿಯುತ್ತಿದೆ. ಉಕ್ರೇನ್ ದೇಶದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಭಾರತದ ಸುಮಾರು 20,000 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಒಂದಷ್ಟು ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಆದರೆ ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅಂತಿಮ ವರ್ಷದ ಎಮ್ ಬಿ ಬಿ ಎಸ್ ಓದುತ್ತಿರುವವರಿಗೆ ಅವರವರ ಕಾಲೇಜುಗಳು ವಾಪಸ್ಸು ಹೋಗುವ ಅನುಮತಿ ನೀಡಿಲ್ಲ. ಅವರಿಗೆ ಆನ್ ಲೈನ್ ಕ್ಲಾಸ್ ನಡೆಸುವುದು ಸಾಧ್ಯವಿಲ್ಲ ಎಂದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಹೇಳಿವೆ. ಹಾಗಾಗಿ ಇಲ್ಲಿ ಬಂಕರ್ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ಹಾಗೆ ಇನ್ನೂ ಅನೇಕರು ಅಲ್ಲೇ ಉಳಿಯುವಂತಾಗಿ ಬಿಟ್ಟಿದೆ.

ಯುದ್ಧ ಆರಂಭಗೊಂಡ ನಂತರ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿರುವುದರಿಂದ ಅಲ್ಲಿರುವ ಭಾರತೀಯರ ವಾಪಸ್ಸು ಬರುವುದು ಸಾಧ್ಯವಿಲ್ಲ. ಗುರುವಾರ ಭಾರತಕ್ಕೆ ವಾಪಸ್ತಾಗಲು ಅಣಿಯಾಗಿದ್ದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಗಳಲ್ಲಿ ಕೀವ್ ವಿಮಾನ ನಿಲ್ದಾಣಕ್ಕೆ ಬರುತ್ತಿರುವಾಗ ವಿಮಾನ ಹಾರಾಟ ಸ್ಥಗಿತಗೊಳಿಸಿದ ಸಂಗತಿ ಗೊತ್ತಾಗಿದೆ. ಹಾಗಾಗಿ ಅವರು ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ.

ಎರಡು ದಿನಗಳಿಗಾಗುವಷ್ಟು ಆಹಾರ ಸಾಮಗ್ರಿ ಮತ್ತು ನೀರಿನೊಂದಿಗೆ ಈ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ಬಂಕರ್ ಗೆ ಶಿಫ್ಟ್ ಆಗಿದ್ದಾರೆ. ಬಂಕರ್ ಬಹಳ ಇಕ್ಕಟ್ಟಾದ ಸ್ಥಳಗಳಾಗಿರುತ್ತವೆ. ಅವುಗಳಲ್ಲಿ ಕುರಿಗಳಂತೆ ಇರಬೇಕಾದ ಅನಿವಾರ್ಯತೆ ಅವರಿಗಿದೆ. ಕನ್ನಡ ಮಾತಾಡುತ್ತಿರುವ ವಿದ್ಯಾರ್ಥಿಗಳೂ ಬಂಕರ್ ನಲ್ಲಿದ್ದಾರೆ.

ಈ ವಿಡಿಯೋ ನೋಡುವ ವಿದ್ಯಾರ್ಥಿಗಳ ತಂದೆ-ತಾಯಿಗಳ ಮನಸ್ಥಿತಿಯ ಬಗ್ಗೆ ಯೋಚಿಸಿದರೆ ಮನಸ್ಸು ಕಳವಳಗೊಳ್ಳುತ್ತದೆ ಮಾರಾಯ್ರೇ. ಭಾರತ ಸರ್ಕಾರ ಬೇಗ ಏನಾದರೂ ಏರ್ಪಾಟು ಮಾಡಿ ಉಕ್ರೇನ್ ನಲ್ಲಿ ಸಿಲುಕಿರುವ ನಮ್ಮ ದೇಶದ ಜನರನ್ನು ವಾಪಸ್ಸು ಕರೆಸಿಕೊಳ್ಳಬೇಕು.

ಇದನ್ನೂ ಓದಿ:   Ukraine Crisis: ರಷ್ಯಾದ ಮಿಲಿಟರಿ ಪಡೆಗಳಲ್ಲಿ 800ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ: ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆ

Published on: Feb 25, 2022 04:00 PM