Ukraine Crisis: ರಷ್ಯಾದ ಮಿಲಿಟರಿ ಪಡೆಗಳಲ್ಲಿ 800ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ: ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆ

Russia Ukraine War: ರಷ್ಯಾ ಮಿಲಿಟರಿ ಪಡೆಗಳಲ್ಲಿ ಸುಮಾರು 800 ಕ್ಕೂ ಸಾವುನೋವುಗಳು ವರದಿಯಾಗಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ. ಈ ನಡುವೆ 137 ಉಕ್ರೇನಿಯನ್ನರು ರಷ್ಯಾದ ದಾಳಿಗೆ ಮೃತಪಟ್ಟಿದ್ದಾರೆ.

Ukraine Crisis: ರಷ್ಯಾದ ಮಿಲಿಟರಿ ಪಡೆಗಳಲ್ಲಿ 800ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ: ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆ
ಪ್ರಾತಿನಿಧಿಕ ಚಿತ್ರ (ಕೃಪೆ: ರಾಯಿಟರ್ಸ್)
Follow us
TV9 Web
| Updated By: shivaprasad.hs

Updated on: Feb 25, 2022 | 1:39 PM

ಗುರುವಾರ ರಷ್ಯಾವು ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು (Russia- Ukraine War) ಘೋಷಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡುತ್ತಿರುವ ಉಕ್ರೇನ್, ರಷ್ಯಾದ ಹಲವು ವಿಮಾನಗಳನ್ನು ಹೊಡೆದುರುಳಿಸಿದೆ. ಇದೀಗ ರಷ್ಯಾದ ಪಡೆಗಳ ಮೇಲೆ ಉಕ್ರೇನ್ ಕಾರ್ಯಾಚರಣೆಯ ಮಾಹಿತಿ ನೀಡಿರುವ ಉಕ್ರೇನ್ ರಕ್ಷಣಾ ಸಚಿವಾಲಯ, ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದ ಸಶಸ್ತ್ರ ಪಡೆಗಳು ರಷ್ಯಾದ ಪಡೆಗಳ ಸುಮಾರು 800 ಸಾವುನೋವುಗಳಾಗಿದೆ ಎಂದು ಹೇಳಿದೆ. ರಷ್ಯಾದ ಏಳು ವಿಮಾನಗಳು ಮತ್ತು ಆರು ಹೆಲಿಕಾಪ್ಟರ್‌ಗಳು ಸೇರಿದಂತೆ 30 ಕ್ಕೂ ಹೆಚ್ಚು ಟ್ಯಾಂಕ್‌ಗಳನ್ನು ನಾಶಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾನ್ಯರೂ ಹೋರಾಡುವುದಕ್ಕೆ ಸಜ್ಜುಗೊಳಿಸುವ ಆದೇಶಕ್ಕೆ ಸಹಿ ಹಾಕಿದ ಗಂಟೆಗಳ ನಂತರ ಈ ಹೇಳಿಕೆ ಬಂದಿದೆ. ಉಕ್ರೇನ್‌ನ ರಕ್ಷಣಾ ಉಪ ಮಂತ್ರಿ ಹನ್ನಾ ಮಲ್ಯಾರ್ ಮಾಹಿತಿ ನೀಡಿ, ‘‘ಶತ್ರುಗಳ (ರಷ್ಯಾ ಪಡೆಗಳ) 7 ವಿಮಾನ, 6 ಹೆಲಿಕಾಪ್ಟರ್‌ಗಳು, 30ಕ್ಕೂ ಹೆಚ್ಚು ಟ್ಯಾಂಕರ್​​ಗಳು, 130ಕ್ಕೂ ಹೆಚ್ಚು ಬಿಬಿಎಮ್ ಘಟಕಗಳನ್ನು ನಾಶಮಾಡಲಾಗಿದೆ. ಶತ್ರು ಸೈನ್ಯದಲ್ಲಿ ಸುಮಾರು 800 ಸಾವು-ನೋವುಗಳಾಗಿವೆ’ ಎಂದು ಉಕ್ರೇನಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಸೋಮವಾರದಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​, ಉಕ್ರೇನ್​ನಿಂದ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಹಾಗೂ ಲುಹಾನ್ಸ್ಕ್​ಗಳನ್ನು ಸ್ವಾಯತ್ತ ಪ್ರದೇಶಗಳಾಗಿ ಘೋಷಿಸಿದ್ದಾರೆ. ಡೊಂಬಾಸ್ ಭಾಗದ ಜನರನ್ನು ರಕ್ಷಿಸಲು ಪುಟಿನ್ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ಪುಟಿನ್ ಘೋಷಿಸಿದ ಕದನದ ನಡೆಯ ನಂತರ, ಬ್ರಿಟನ್, ಅಮೇರಿಕಾ, ಕೆನಡಾ ಸೇರಿದಂತೆ ಹಲವು ದೇಶಗಳು ರಷ್ಯಾದ ನಡೆಯನ್ನು ತೀವ್ರವಾಗಿ ವಿರೋಧಿಸಿವೆ. ಅಲ್ಲದೇ ರಷ್ಯಾದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ವಾಣಿಜ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರ್ಬಂಧ ಹೇರಿವೆ.

ರಷ್ಯಾದ ಮಿಲಿಟರಿ ವಾಹನವೊಂದು ಅಗ್ನಿಗಾಹುತಿಯಾಗುತ್ತಿರುವ ದೃಶ್ಯ:

ಇಂದು ಮುಂಜಾನೆ ಉಕ್ರೇನ್ ರಾಜಧಾನಿ ಕೈವ್​ನಲ್ಲಿ ಹಲವು ಸ್ಫೋಟಗಳು ಸಂಭವಿಸಿವೆ. ಈ ಮೂಲಕ ಉಕ್ರೇನ್ ಹಾಗೂ ರಷ್ಯಾ ಕದನ ಎರಡನೇ ದಿನಕ್ಕೆ ಕಾಲಿಟ್ಟಂತಾಗಿದೆ. ಕೈವ್ ಸುತ್ತಮುತ್ತ ನಡೆದ ಸ್ಫೋಟದ ಕುರಿತು ಮಾಹಿತಿ ನೀಡಿದ ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವ ಹೆವ್ಹೆನ್ ಯೆನಿನ್, ‘ಕ್ಷಿಪಣಿ ವಿರೋಧಿ ಕಾರ್ಯಾಚರಣೆಯಿಂದ ಸ್ಫೋಟ ಉಂಟಾಗಿದೆ’ ಎಂದಿದ್ದಾರೆ.

ರಷ್ಯಾ ದಾಳಿ ನಡೆಸಿದ್ದರಿಂದ ಉಕ್ರೇನ್​ನಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ಸುಮಾರು 74ಕ್ಕೂ ಹೆಚ್ಚು ಮಿಲಿಟರಿ ಮೂಲಸೌಕರ್ಯ ಕೇಂದ್ರಗಳು ಹಾನಿಗೊಳಗಾಗಿವೆ. ಅವುಗಳಲ್ಲಿ 11 ವಾಯುನೆಲೆ, ಮೂರು ಕಮ್ಯಾಂಡಿಂಗ್ ಕೇಂದ್ರಗಳು, ಒಂದು ಉಕ್ರೇನಿಯನ್ ನೌಕಾ ನೆಲೆ, 18 ರೇಡಾರ್ ಸ್ಟೇಶನ್​ಗಳು ಸೇರಿವೆ. ಕೆಲವು ಮೂಲಗಳ ಪ್ರಕಾರ ರಷ್ಯಾ ಉಕ್ರೇನ್​ನ ಸಾರ್ವಜನಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿಲ್ಲ ಎನ್ನಲಾಗಿದೆ.

ರಷ್ಯಾದ ದಾಳಿಯಿಂದ ಉಕ್ರೇನ್​ನ 10 ಮಿಲಿಟರಿ ಅಧಿಕಾರಿಗಳು ಸೇರಿದಂತೆ 137 ‘ವೀರರು’ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು 316 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಇದನ್ನೂ ಓದಿ:

ನಾಸ್ಟ್ರಾಡಾಮಸ್ 1555ರಲ್ಲೇ ಉಕ್ರೇನ್-​ ರಷ್ಯಾ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ರಾ? ಇಲ್ಲಿದೆ ನೋಡಿ ಮಾಹಿತಿ

Ukraine Crisis: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾದ ವಿರುದ್ಧ ‘ಸೈಬರ್ ವಾರ್’ ಘೋಷಿಸಿದ ಹ್ಯಾಕರ್​ಗಳು

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ