ನಾಸ್ಟ್ರಾಡಾಮಸ್ 1555ರಲ್ಲೇ ಉಕ್ರೇನ್-​ ರಷ್ಯಾ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ರಾ? ಇಲ್ಲಿದೆ ನೋಡಿ ಮಾಹಿತಿ

ಈ ಹಿಂದೆ ನಾಸ್ಟ್ರಾಡಾಮಸ್​ ಭವಿಷ್ಯ ವಾಣಿಯಂತೆ, ಲಂಡನ್​ನ ಮಹಾಬೆಂಕಿ ದುರಂತ, ಅಡಾಲ್ಫ್​ ಹಿಟ್ಲರ್​ ಮತ್ತು ನೆಪೋಲಿಯನ್​ನ ಜನನ, 9/11ರ ವರ್ಲ್ಡ್​ ಟ್ರೇಡ್​ ಸೆಂಟರ್​​ನ ಮೇಲಿನ ದಾಳಿ, ಜಾನ್​ ಎಫ್​ ಕೆನಡಿ ಹತ್ಯೆಯ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗಿದೆ.

ನಾಸ್ಟ್ರಾಡಾಮಸ್ 1555ರಲ್ಲೇ ಉಕ್ರೇನ್-​ ರಷ್ಯಾ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ರಾ? ಇಲ್ಲಿದೆ ನೋಡಿ ಮಾಹಿತಿ
ನಾಸ್ಟ್ರಾಡಾಮಸ್
Follow us
| Updated By: Pavitra Bhat Jigalemane

Updated on:Feb 25, 2022 | 12:48 PM

ರಷ್ಯಾ- ಉಕ್ರೇನ್​ ನಡುವಿನ ಯುದ್ಧ(Russia-Ukraine War) ಆರಂಭವಾಗಿದೆ. ಬಲಿಷ್ಠ ರಾಷ್ಟ್ರ ರಷ್ಯಾ ದಾಳಿಗೆ ಉಕ್ರೇನ್​ ಅಕ್ಷರಶಃ ನಲುಗಿ ಹೋಗುತ್ತಿದೆ. ಬಾಂಬ್​, ಕ್ಷಿಪಣಿಗಳ ದಾಳಿಗೆ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುರೋಪ್​ (Europe)​ ರಾಷ್ಟ್ರಗಳಿಗೆ ಇಂತಹದ್ದೊಂದು ಯುದ್ಧದ ಪರಿಸ್ಥಿತಿ ಎದುರಾಗಲಿದೆ ಎಂದು ಪ್ರೆಂಚ್​ನ ನಾಸ್ಟ್ರಾಡಾಮಸ್(Nostradamus) ಈ ಹಿಂದೆಯೇ ತಮ್ಮ ಭವಿಷ್ಯ ವಾಣಿಯಲ್ಲಿ ಹೇಳಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ​ ನಾಸ್ಟ್ರಾಡಾಮಸ್  1555ರಲ್ಲಿಯೇ 942 ಮುನ್ಸೂಚನೆಗಳನ್ನು ಒಳಗೊಂಡ ಲೆಸ್ ಪ್ರೊಫೆಟೀಸ್‌ (Les Propheties) ಎನ್ನುವ ಪುಸ್ತಕ ಬರೆದಿದ್ದಾನೆ. ಅದರಲ್ಲಿ 2022 ರಲ್ಲಿ ಯುರೋಪಿನಲ್ಲಿ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ಈ ಹಿಂದೆ  ನಾಸ್ಟ್ರಾಡಾಮಸ್​ ಭವಿಷ್ಯ ವಾಣಿಯಲ್ಲಿ ಲಂಡನ್​ನ ಮಹಾಬೆಂಕಿ ದುರಂತ, ಅಡಾಲ್ಫ್​ ಹಿಟ್ಲರ್​ ಮತ್ತು ನೆಪೋಲಿಯನ್​ನ ಜನನ, 9/11ರ ವರ್ಲಡ್​ ಟ್ರೇಡ್​ ಸೆಂಟರ್​​ನ ಮೇಲಾದ ದಾಳಿ, ಜಾನ್​ ಎಫ್​ ಕೆನಡಿ ಹತ್ಯೆಯ ಬಗ್ಗೆ ಭವಿಷ್ಯ ನುಡಿದಿದ್ದರು. ಅವೆಲ್ಲವೂ ಸತ್ಯವಾಗಿತ್ತು. ಅದೇ ರೀತಿ ಈ ವರ್ಷವೂ ಯುದ್ಧ ನಡೆಯುವ ಬಗ್ಗೆ ಭವಿಷ್ಯದಲ್ಲಿ ಹೇಳಿದ್ದರು ಎಂದು ಹೇಳಲಾಗಿದೆ.

ಮೂರನೇ ಮಹಾಯುದ್ಧ, ಭೂಕಂಪ, ಮೂರನೇ ಆಂಟಿಕ್ರೈಸ್ಟ್ ಮುಂದಿನ ದಿನಗಳಲ್ಲಿ ಸಂಭವಿಸಬಹುದು ಎಂದು ಭವಿಷ್ಯದಲ್ಲಿ ಹೇಳಲಾಗಿದೆ.  ಇದರ ಜತೆಗೆ ಬ್ರಿಟಿಷ್​ ನಾಸ್ಟ್ರಾಡಾಮಸ್ ಬೋಬು ಶೈಲರ್​ ನುಡಿದ ಭವಿಷ್ಯದಲ್ಲಿ ಎಂಡ್​ ಆಫ್​ ಡೇಸ್​ ಸರಣಿಯಲ್ಲಿ ಭವಿಷ್ಯದಲ್ಲಿ ಭೂಮಿಯು ನಾಶವಾಗಲಿದೆ. ಆದರೆ ಇದು ಇನ್ನೂ 1,772 ವರ್ಷಗಳವರೆಗೆ ಆಗುವುದಿಲ್ಲ ಎಂದಿದ್ದಾರೆ.ಇದರೊಂದಿಗೆ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಫೋಟ ಮತ್ತು ಮುಂಬರುವ ವರ್ಷಗಳಲ್ಲಿ ಸಂಭವಿಸಬಹುದಾದ ಬೃಹತ್ ಸೌರ ಜ್ವಾಲೆ ಬಗ್ಗೆ ಎಚ್ಚರಿಸಿದ್ದಾರೆ.

ನಾಸ್ಟ್ರಾಡಾಮಸ್​ ಪ್ರಕಾರ ಭೂಮಿಯ ನಾಶ 3797ರ ಹೊತ್ತಿಗೆ ಸಂಭವಿಸಬಹುದು. ಅದನ್ನು ಹೊರತುಪಡಿಸಿ ಜಗತ್ತಿಗೆ ಒಂದಷ್ಟು ಸಂಕಷ್ಟಗಳು ಎದುರಾಗಲಿದೆ ಎಂದು ದಿ ಸನ್​ ವರದಿ ಮಾಡಿದೆ. ಇನ್ನು ಬ್ರಿಟಿಷ್​ ನಾಸ್ಟ್ರಾಡಾಮಸ್​ 100 ವರ್ಷಗಳವರೆಗೆ ಭೂಮಿಯ ನಾಶವಾಗುವುದಿಲ್ಲ. ಅದರ ನಂತರ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್​: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ

Published On - 12:44 pm, Fri, 25 February 22