AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆ

ಶ್ರೀಲಂಕಾ ಕರಾವಳಿಯಲ್ಲಿ ಇರಾನ್‌ನ ಐಆರ್‌ಐಎಸ್ ದೇನಾ ಯುದ್ಧನೌಕೆಯನ್ನು ಮುಳುಗಿಸಿರುವುದಾಗಿ ಅಮೆರಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಮೆರಿಕದ ಪ್ರಕಾರ, ದ್ವಿತೀಯ ವಿಶ್ವಯುದ್ಧದ ನಂತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶತ್ರು ಹಡಗನ್ನು ಉರುಳಿಸಿದ ಮೊದಲ ಪ್ರಕರಣವಿದಾಗಿದೆ. ಐಆರ್‌ಐಎಸ್ ದೇನಾ ಯುದ್ಧನೌಕೆ ಭಾರತೀಯ ನೌಕಾಪಡೆಯ ಐಎಫ್​ಆರ್/ಮಿಲನ್ ಸಮರಾಭ್ಯಾಸದಲ್ಲಿ ಪಾಲ್ಗೊಂಡು ಇರಾನ್​ಗೆ ವಾಪಸಾಗುತ್ತಿತ್ತು ಎನ್ನಲಾಗಿದೆ.

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆ
ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆImage Credit source: TV9 Network
ಗಣಪತಿ ಶರ್ಮಾ
|

Updated on:Mar 04, 2026 | 9:57 PM

Share

ಕೊಲಂಬೋ, ಮಾರ್ಚ್ 4: ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಇರಾನ್​ನ ಯುದ್ಧನೌಕೆ ಐಆರ್​ಐಎಸ್ ದೇನಾ (IRIS Dena) ಹೊಡೆದ್ದು ತಾನೇ ಎಂದು ಅಮೆರಿಕ ಅಧಿಕೃತವಾಗಿ ಹೇಳಿಕೊಂಡಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಇರಾನ್-ಇಸ್ರೇಲ್ ಸಂಘರ್ಷ ಇದೀಗ ಭಾರತದ ಸಮೀಪಕ್ಕೂ ವಿಸ್ತರಿಸಿರುವುದು ಸ್ಪಷ್ಟವಾಗಿದೆ. ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ (Pete Hegseth) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಂತರರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್ ಯುದ್ಧಹಡಗನ್ನು ಅಮೆರಿಕದ ಸಬ್‌ಮರೀನ್ ಟಾರ್ಪಿಡೋ (ನೌಕಾ ಸ್ಫೋಟಕ) ಮೂಲಕ ಗುರಿಯಾಗಿಸಿ ಹೊಡೆದು ಮುಳುಗಿಸಲಾಗಿದೆ’ ಎಂದು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ಈ ದಾಳಿ ನಡೆದಿದ್ದು, ದ್ವಿತೀಯ ವಿಶ್ವಯುದ್ಧದ ನಂತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶತ್ರು ಹಡಗನ್ನು ನೇರವಾಗಿ ಗುರಿಯಾಗಿಸಿದ ಮೊದಲ ಘಟನೆ ಇದು ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತಾ ಹೆರಾತ್ ನೀಡಿದ ಮಾಹಿತಿ ಪ್ರಕಾರ, ಬುಧವಾರ ಬೆಳಗ್ಗೆ 5.08ಕ್ಕೆ ಇರಾನ್ ಹಡಗಿನಿಂದ ತುರ್ತು ಸಂದೇಶ ಬಂದಿತ್ತು. ಬಳಿಕ 6 ಗಂಟೆಗೆ ಒಂದು ನೌಕಾಪಡೆ ಹಡಗು ಮತ್ತು 7 ಗಂಟೆಗೆ ಮತ್ತೊಂದು ಹಡಗನ್ನು ರಕ್ಷಣೆಗೆ ಕಳುಹಿಸಲಾಯಿತು. ಘಟನೆ ಶ್ರೀಲಂಕಾ ಪ್ರಾದೇಶಿಕ ಜಲಗಡಿಯ ಹೊರಗಿದ್ದರೂ, ಆರ್ಥಿಕ ವಲಯದ ಒಳಗೆಯೇ ನಡೆದಿದೆ. ಗಾಲ್ ನಗರದಿಂದ ಸುಮಾರು 44 ನಾಟಿಕಲ್ ಮೈಲು ದೂರದಲ್ಲಿ ನಡೆದಿದೆ.

ಈ ದಾಳಿಯಲ್ಲಿ ಕನಿಷ್ಠ 101 ಮಂದಿ ನಾಪತ್ತೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಈಗಾಗಲೇ 32 ಮಂದಿಯನ್ನು ರಕ್ಷಿಸಲಾಗಿದ್ದು, 28 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 140ಕ್ಕೂ ಹೆಚ್ಚು ಸಿಬ್ಬಂದಿ ಹಡಗಿನಲ್ಲಿ ಇದ್ದರೆಂದು ಅಂದಾಜಿಸಲಾಗಿದೆ.

ಭಾರತಕ್ಕೆ ಬಂದು ಇರಾನ್​ಗೆ ವಾಪಸಾಗುತ್ತಿದ್ದ ಯುದ್ಧನೌಕೆ!

ಭಾರತೀಯ ನೌಕಾಪಡೆ ಆಯೋಜಿಸಿದ್ದ ಐಎಫ್​ಆರ್/ಮಿಲನ್ ಸಮರಾಭ್ಯಾಸದಲ್ಲಿ ಭಾಗವಹಿಸಿ ಐಆರ್‌ಐಎಸ್ ದೇನಾ ಯುದ್ಧನೌಕೆ ಇರಾನ್​ಗೆ ವಾಪಸಾಗುತ್ತಿದ್ದಾಗ ಅಮೆರಿಕದ ಸಬ್​ಮರೀನ್ ದಾಳಿ ನಡೆಸಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ಘಟನೆಗೆ ಮುನ್ನ ಕಳೆದ ವಾರಾಂತ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್, ಇರಾನ್‌ನ ಗುರಿಗಳ ಮೇಲೆ ಜಂಟಿ ದಾಳಿ ನಡೆಸಿದ್ದವು. ದಾಳಿ ಮುಂದುವರಿದಿದೆ. ಅದರ ಬೆನ್ನಲ್ಲೇ ಈಗ ಅಮೆರಿಕ ನೇರವಾಗಿ ಇರಾನ್ ನೌಕಾಪಡೆಯ ಹಡಗನ್ನು ಗುರಿಯಾಗಿಸಿರುವುದು ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿ: ಕನಿಷ್ಠ 101 ಮಂದಿ ಕಣ್ಮರೆ

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಜೋರಾಗಿದೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಈಗ ಹಿಂದೂ ಮಹಾಸಾಗರ ಪ್ರದೇಶಕ್ಕೂ ತಟ್ಟಿದ್ದು, ಜಾಗತಿಕ ರಾಜಕೀಯ ಹಾಗೂ ಸಮುದ್ರ ಭದ್ರತಾ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:46 pm, Wed, 4 March 26

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ