Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?

Rishab Shetty: ಚಂದನವನದ ಸ್ಟಾರ್ ನಟ ಶಿವರಾಜ್​ ಕುಮಾರ್ ಹಾಗೂ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ಜೊತೆಯಾಗಿ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಈ ಕುರಿತು ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

Shiva Rajkumar: ಶಿವರಾಜ್ ಕುಮಾರ್ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಖಚಿತ; ಯಾವಾಗ ಸೆಟ್ಟೇರಲಿದೆ ಸಿನಿಮಾ?
ರಿಷಬ್ ಶೆಟ್ಟಿ, ಶಿವರಾಜ್ ಕುಮಾರ್
Follow us
TV9 Web
| Updated By: shivaprasad.hs

Updated on: Aug 19, 2021 | 6:02 PM

ಕನ್ನಡದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ 126ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ಈ ಕುರಿತು ರಿಷಬ್ ಟ್ವೀಟ್ ಮಾಡಿದ್ದು, ಅದರಲ್ಲಿ ಇಂದು ಶಿವರಾಜ್ ಕುಮಾರ್ ಜೊತೆ ಮಾತುಕತೆಯ ನಂತರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ನಿರ್ಮಾಪಕ ಜಯಣ್ಣ ಕೂಡಾ ಹಾಜರಿದ್ದರು. ಈ ಮೂಲಕ ಶಿವರಾಜ್​ ಕುಮಾರ್ 126ನೇ ಚಿತ್ರಕ್ಕೆ ಜಯಣ್ಣ ಹಣ ಹೂಡುವುದು ಪಕ್ಕಾ ಆದಂತಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ‘ಶಿವಣ್ಣ ಅವರನ್ನು ಇಂದು ಬೆಳಗ್ಗೆ ಭೇಟಿಯಾಗುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಂಚಿಕೊಂಡಿರುವ ಟ್ವೀಟ್:

ಸಿನಿಮಾ ಸೆಟ್ಟೇರುವುದು ಯಾವಾಗ?

ಶಿವರಾಜ್ ಕುಮಾರ್ ಹಾಗೂ ರಿಷಬ್ ಜೊತೆಯಾಗುವುದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಕಾರಣ ಶಿವಣ್ಣ ಈಗಾಗಲೇ ಹಲವು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. 123ನೇ ಸಿನಿಮಾವಾದ ‘ಬೈರಾಗಿ’ ಚಿತ್ರೀಕರಣದಲ್ಲಿ ಶಿವಣ್ಣ ತೊಡಗಿಸಿಕೊಂಡಿದ್ದಾರೆ. ಇದರ ನಂತರ 124ನೇ ಸಿನಿಮಾವಾಗಿ ಇತ್ತೀಚೆಗಷ್ಟೇ ಸೆಟ್ಟೇರಿದ್ದ ‘ನೀ ಸಿಗೋವರೆಗೂ’ ಚಿತ್ರ ತಯಾರಾಗಲಿದೆ. ಅದರ ನಂತರ ಬಹು ನಿರೀಕ್ಷಿತ ಶಿವರಾಜ್ ಕುಮಾರ್ ಅವರ 125ನೇ ಚಿತ್ರವಾಗಿ ‘ವೇದ’ ಚಿತ್ರ ಸೆಟ್ಟೇರಬೇಕಿದೆ. ಈ ಚಿತ್ರವನ್ನು ಭಜರಂಗಿ 1 ಹಾಗೂ ಭಜರಂಗಿ 2ರಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ನಿರ್ದೇಶಕ ಹರ್ಷ ನಿರ್ದೇಶಿಸಲಿದ್ದಾರೆ. ಅದರ ನಂತರ ರಿಷಬ್ ನಿರ್ದೇಶನದ ಚಿತ್ರಕ್ಕೆ ಶಿವರಾಜ್ ಕುಮಾರ್ ಜೊತೆಯಾಗಲಿದ್ದಾರೆ.

ಈ ನಡುವೆ ರಿಷಬ್ ಕೂಡಾ ಕೆಲವು ಚಿತ್ರಗಳ ಕಮಿಂಟ್​ಮೆಂಟ್ ಮುಗಿಸಿಕೊಳ್ಳಬೇಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ‘ಕಾಂತಾರ’ ಚಿತ್ರಕ್ಕೆ ರಿಷಬ್ ಆಕ್ಷನ್ ಕಟ್ ಹೇಳಲಿದ್ದು, ಪ್ರಮುಖ ಪಾತ್ರವನ್ನೂ ನಿಭಾಯಿಸಲಿದ್ದಾರೆ. ಇದರ ನಂತರ ಶಿವಣ್ಣ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.

ಭಜರಂಗಿ 2 ಚಿತ್ರದ ಮೂರನೇ ಹಾಡು ಆಗಸ್ಟ್ 20ಕ್ಕೆ ಬಿಡುಗಡೆ:

ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಭಜರಂಗಿ 2’ ಚಿತ್ರದ ಮೂರನೇ ಹಾಡು ನಾಳೆ(ಆಗಸ್ಟ್ 20) ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಕುರಿತು ಹರ್ಷ ಟ್ವೀಟ್ ಮಾಡಿದ್ದು, ನಾಳೆ ಬೆಳಗ್ಗೆ 10.05ಕ್ಕೆ ಚಿತ್ರದ ಮೂರನೇ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಹರ್ಷ ಮಾಡಿರುವ ಟ್ವೀಟ್:

ಭಜರಂಗಿ 2 ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿದ್ ಶ್ರೀರಾಮ್ ಹಾಡಿರುವ ‘ನೀ ಸಿಗೋವರೆಗೂ’ ಹಾಡನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡಿನ ಮೊದಲ ಸಾಲನ್ನೇ ಶಿವರಾಜ್ ಕುಮಾರ್ ನೂತನ ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗೆಯೇ ‘ಭಜರೇ ಭಜರೇ ಭಜರಂಗಿ’ ಹಾಡಿಗೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?

16 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 16 ವರ್ಷಗಳ ಸಂಭ್ರಮ

(Shiva Rajkumar 126th movie is confirmed and it is directed by Rishab Shetty)