‘ಪುನೀತ್​ ರೀತಿ ನಾವು ಸ್ಟಂಟ್​ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​

ಪುನೀತ್​ ರಾಜ್​ಕುಮಾರ್​ ಜೊತೆ 13 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಅನುಭವ ರವಿ ವರ್ಮಾ ಅವರಿಗೆ ಇದೆ. ಅವರ ಮಾತುಗಳು ಇಲ್ಲಿವೆ..

TV9kannada Web Team

| Edited By: Madan Kumar

Mar 07, 2022 | 10:16 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಸ್ಟಂಟ್ಸ್​ ಮತ್ತು ಡ್ಯಾನ್ಸ್ ಕಂಡು ಬೆರಗಾಗದವರಿಲ್ಲ. ಕರುನಾಡಿನಲ್ಲಿ ಇರುವ ಅಭಿಮಾನಿಗಳು ಮಾತ್ರವಲ್ಲದೇ, ಪರಭಾಷೆಯ ಸ್ಟಾರ್​ ಹೀರೋಗಳು ಕೂಡ ಅಪ್ಪು ಫೈಟಿಂಗ್​ ನೋಡಿ ಫಿದಾ ಆಗಿದ್ದರು. ಆ ವಿಚಾರವನ್ನು ಸಾಹಸ ನಿರ್ದೇಶಕ ರವಿ ವರ್ಮಾ (Stunt Master Ravi Varma) ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಜೇಮ್ಸ್​’ (James Movie) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ರವಿ ವರ್ಮಾ ಮಾತನಾಡಿದ್ದಾರೆ. ‘ನಾನು ಹಲವು ವರ್ಷಗಳಿಂದ ಪುನೀತ್​ ರಾಜ್​ಕುಮಾರ್​ ಅವರ ಜೊತೆ ಕೆಲಸ ಮಾಡಿದ್ದೆ. ‘ಅಪ್ಪು’ ಚಿತ್ರದಲ್ಲಿ ಅಸಿಸ್ಟೆಂಟ್​ ಆಗಿದ್ದೆ. ‘ವಂಶಿ’ ಸಿನಿಮಾದಿಂದ ಪೂರ್ಣ ಪ್ರಮಾಣದಲ್ಲಿ ಸ್ಟಂಟ್​ ಮಾಸ್ಟರ್​ ಆದೆ. ಇಲ್ಲಿಯವರೆಗೆ 13 ಸಿನಿಮಾಗಳಲ್ಲಿ ಅಪ್ಪು ಸರ್​ ಜೊತೆ ಕೆಲಸ ಮಾಡಿದ್ದೇನೆ. ನಾನು ಪರಭಾಷೆಯಲ್ಲಿ ಸಾಹಸ ನಿರ್ದೇಶನ ಮಾಡಿದಾಗ ಅಲ್ಲಿನ ಹೀರೋಗಳು ಕೂಡ ಮೊದಲೇ ಒಂದು ಮಾತು ಹೇಳಿಬಿಡುತ್ತಿದ್ದರು. ನಾನು ಕರ್ನಾಟಕದವನು ಅಂತ ಗೊತ್ತಾದಾಗ ‘ನಾವು ಅಪ್ಪು ಸರ್​ ಥರ ಸ್ಟಂಟ್ಸ್​ ಮಾಡೋದಿಲ್ಲ. ಸ್ವಲ್ಪ ನೋಡಿಕೊಂಡು ಮಾಡಿಸಿ’ ಅಂತ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​ ಮುಂತಾದವರು ಹೇಳುತ್ತಿದ್ದರು. ಪುನೀತ್​ ರಾಜ್​ಕುಮಾರ್​ ಜೊತೆ ಇಷ್ಟು ವರ್ಷ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎಂದಿದ್ದಾರೆ ರವಿ ವರ್ಮಾ.

ಇದನ್ನೂ ಓದಿ:

ಪುನೀತ್​ ಮೇಲಿನ ಅಭಿಮಾನಕ್ಕೆ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ ಫ್ಯಾನ್ಸ್​; ಇಲ್ಲಿದೆ ವಿಡಿಯೋ

‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’: ‘ಜೇಮ್ಸ್​’ ಬಗ್ಗೆ ಚಿಕ್ಕಣ್ಣ ನೋವಿನ ನುಡಿ

Follow us on

Click on your DTH Provider to Add TV9 Kannada