Russia Ukraine War: ನಾನು ನವೀನ್ ಒಳ್ಳೆಯ ಸ್ನೇಹಿತರಾಗಿದ್ದೇವು; ವಿದ್ಯಾರ್ಥಿನಿ ವರ್ಷಿತಾ ಹೇಳಿಕೆ
ಉಕ್ರೇನ್‌ನಲ್ಲಿ ನಮಗೆ ಆಹಾರಕ್ಕೆ ತೊಂದರೆಯಾಗಿತ್ತು. ನವೀನ್ ಸಾವಿಗೂ ಮುನ್ನ ನಾನು ಮಾತನಾಡಿದ್ದೆ. ನವೀನ್, ನಾನು ಒಳ್ಳೆಯ ಸ್ನೇಹಿತರಾಗಿದ್ದೆವು. 10ಗಂಟೆಗೆ ಅವನಿಲ್ಲ ಅನ್ನೋದು ಗೊತ್ತಾಗಿ ತುಂಬಾ ಬೇಜಾರ ಆಯ್ತು.
ಒಂದು ವಾರ ನಾವು ಬಂಕರ್‌ನಲ್ಲೇ ವಾಸವಾಗಿದ್ದೆವು. ನಮ್ಮ ಕಣ್ಣೆದುರೇ ರಷ್ಯಾ (Russia Ukraine War) ಸೇನೆ ಬಾಂಬ್ ದಾಳಿ ನಡೆಸುತ್ತಿತ್ತು ಎಂದು ಉಕ್ರೇನ್‌ನಿಂದ ವಾಪಸ್ಸಾದ ಕೋಲಾರದ ವರ್ಷಿತಾ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ನಮಗೆ ಆಹಾರಕ್ಕೆ ತೊಂದರೆಯಾಗಿತ್ತು. ನವೀನ್ ಸಾವಿಗೂ ಮುನ್ನ ನಾನು ಮಾತನಾಡಿದ್ದೆ. ನವೀನ್, ನಾನು ಒಳ್ಳೆಯ ಸ್ನೇಹಿತರಾಗಿದ್ದೆವು. 10ಗಂಟೆಗೆ ಅವನಿಲ್ಲ ಅನ್ನೋದು ಗೊತ್ತಾಗಿ ತುಂಬಾ ಬೇಜಾರ ಆಯ್ತು. ರೈಲುಗಗಳಲ್ಲಿ ಖಾರ್ಕಿವ್‌ನಿಂದ ಉಕ್ರೇನ್ ಗಡಿಗೆ ಬಂದೆವು. ರೈಲುಗಳಲ್ಲಿ ಮೊದಲು ಸ್ಥಳೀಯ ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು. ಅದಾದ ನಂತರ ಹೊರದೇಶದ ಮಹಿಳೆಯರಿಗೆ ಅವಕಾಶ ನೀಡಲಾಯಿತು. ಬಳಿಕ ಪುರುಷರಿಗೆ ರೈಲಿನಲ್ಲಿ ಗಡಿಗೆ ಹೋಗಲು ಅವಕಾಶ ಮಾಡಲಾಯಿತು. ಕೊನೆಗೂ ಎಲ್ಲ ಕಷ್ಟಗಳನ್ನು ಎದುರಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಎಂಬಿಬಿಎಸ್ ವಿದ್ಯಾರ್ಥಿನಿ ವರ್ಷಿತಾ ಹೇಳಿದ್ದಾರೆ.
ಇದನ್ನೂ ಓದಿ:
Russia-Ukraine War: ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಪ್ರಧಾನಿ ಮೋದಿ ಮಾತು