AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧ ಭೂಮಿಯಿಂದ ಸಾಕು ನಾಯಿಯೊಂದಿಗೆ ಬಂದ ಬೆಂಗಳೂರು ಮೂಲದ ವಿದ್ಯಾರ್ಥಿ

ಯುದ್ಧ ಭೂಮಿಯಿಂದ ಸಾಕು ನಾಯಿಯೊಂದಿಗೆ ಬಂದ ಬೆಂಗಳೂರು ಮೂಲದ ವಿದ್ಯಾರ್ಥಿ

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 07, 2022 | 11:42 AM

Share

ಉಕ್ರೇನ್​ನ ಖಾರ್ಕೀವ್ ನಿಂದ ವಿದ್ಯಾರ್ಥಿ ಒಬ್ಬರು ಸಾಕು ನಾಯಿ ಜೊತೆ ಬಂದಿದ್ದಾರೆ. ಬೆಂಗಳೂರು ಮೂಲದ ರಂಜಿತ್ ರೆಡ್ಡಿ ನಾಯಿ ಜೊತೆ ಬಂದ ವಿದ್ಯಾರ್ಥಿ ಆಗಿದ್ದಾರೆ.

ಉಕ್ರೇನ್ (Ukraine) ​ನ ಖಾರ್ಕೀವ್ ನಿಂದ ವಿದ್ಯಾರ್ಥಿ ಒಬ್ಬರು ಸಾಕು ನಾಯಿ ಜೊತೆ ಬಂದಿದ್ದಾರೆ. ಬೆಂಗಳೂರು ಮೂಲದ ರಂಜಿತ್ ರೆಡ್ಡಿ ನಾಯಿ ಜೊತೆ ಬಂದ ವಿದ್ಯಾರ್ಥಿ ಆಗಿದ್ದಾರೆ. ನಾಯಿ ಕರೆದುಕೊಂಡು ಬರುವುದು ಕಷ್ಟದ ಕೆಲಸವಾಗಿತ್ತು. ಸಾಮಾನ್ಯ ವಿಮಾನದಲ್ಲಿ ಕರೆದುಕೊಂಡು ಬರುವುದು ಕಷ್ಟವಾಗಿತ್ತು. ಸಚಿವರಿಂದ ವಿಶೇಷ ಅನುಮತಿ ಪಡೆದು ಕರೆದುಕೊಂಡು ಬಂದಿದ್ದೇನೆ. ಹೋದ್ರೆ ನಾಯಿ ಜೊತೆನೆ ಹೋಗಬೇಕು ಅಂದುಕೊಂಡಿದ್ದೆ. ನಾಯಿಗೆ ಬೆಂಗಳೂರು ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತೆ. ಮನೆಯೊಳಗೆ ಎಸಿಯಲ್ಲಿಯೇ ನಾಯಿ ಸಾಕಬೇಕು. ಬೆಂಗಳೂರಿನಲ್ಲಿ ಸಾಕುವುದು ಕಷ್ಟವಾಗುತ್ತೆ. ಕಷ್ಟವಾದ್ರೆ ಬೇರೆ ದೇಶಕ್ಕೆ ಹೋಗಬೇಕಾಗುತ್ತೆ ಎಂದು ರಂಜಿತ್ ರೆಡ್ಡಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

ಉಕ್ರೇನ್​ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ಭವಿಷ್ಯವೇನು? ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಖಾರ್ಕೀವ್​, ಕೀವ್ ಸೇರಿ ನಾಲ್ಕು ಪ್ರದೇಶಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ; ಇತರ ದೇಶಗಳ ಪ್ರಜೆಗಳ ಸ್ಥಳಾಂತರಕ್ಕಾಗಿ ನಿರ್ಧಾರ