16 ಗೋಲ್ಡ್ ಮೆಡಲ್ ಪಡೆದ ರಾಯಚೂರು ವಿದ್ಯಾರ್ಥಿನಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್! ನೆಗೆಟಿವ್ ಟ್ರೋಲ್ಗೆ ವಿದ್ಯಾರ್ಥಿನಿ ಬೇಸರ
ನೆಗೆಟಿವ್ ಟ್ರೋಲ್ಗೆ ಒಳಗಾಗುತ್ತಿರುವ ವಿದ್ಯಾರ್ಥಿನಿ ಬುಶ್ರಾ ಮತೀನ್ ರಾಯಚೂರು ನಗರದ ನಿವಾಸಿ. ಈಕೆ ಜಹೀರುದ್ದಿನ್ ಎಂಬುವವರ ಪುತ್ರಿ. ವಿದ್ಯಾರ್ಥಿನಿ ರಾಯಚೂರು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ.
ರಾಯಚೂರು: ಜಿಲ್ಲೆ ಬಿಸಿಲುನಾಡು, ರಾಜ್ಯದಲ್ಲಿ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಅದರಲ್ಲೂ ಶೈಕ್ಷಣಿಕ ವಿಭಾಗದಲ್ಲಿ ವಿದ್ಯಾರ್ಥಿಗಳು (Students) ಸಾಧನೆ ಮಾಡೋದು ಮರಿಚಿಕೆ ಎನ್ನುವ ಮಾತುಗಳು ಇದ್ದವು. ಆದರೆ ಈ ಹಣೆಪಟ್ಟಿಯನ್ನು ಬುಶ್ರಾ ಮತೀನ್ ಎನ್ನುವ ವಿದ್ಯಾರ್ಥಿನಿ ಅಳಿಸಿ ಹಾಕಿದ್ದಾರೆ. ಜೊತೆಗೆ, ವಿದ್ಯಾರ್ಥಿನಿ ಬುಶ್ರಾ ಮತೀನ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಛಿದ್ರಗೊಳೊಳಿಸಿ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ (Visvesvaraya Technological University) ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ವಿಟಿಯು ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ ಬುಶ್ರಾ ಮತೀನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಕೋರ್ಟ್ಲ್ಲಿರುವ ಹಿಜಾಬ್ ವಿಚಾರವನ್ನು ಕೆಲ ಕಿಡಿಗೇಡಿಗಳು ಮುಂದಿಟ್ಟುಕೊಂಡು ಬುಶ್ರಾ ಮತೀನ್ ಅವರನ್ನು ಹಿಜಾಬೀಸ್ ರಾಕ್ಸ್ ಅಂತ ನೆಗೆಟಿವ್ ಟ್ರೋಲ್ ಮಾಡಿದ್ದಾರೆ.
ಸಾಧನೆಗೈದು ನೆಗೆಟಿವ್ ಟ್ರೋಲ್ಗೆ ಒಳಗಾಗುತ್ತಿರುವ ವಿದ್ಯಾರ್ಥಿನಿ ಬುಶ್ರಾ ಮತೀನ್ ರಾಯಚೂರು ನಗರದ ನಿವಾಸಿ. ಈಕೆ ಜಹೀರುದ್ದಿನ್ ಎಂಬುವವರ ಪುತ್ರಿ. ವಿದ್ಯಾರ್ಥಿನಿ ರಾಯಚೂರು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಸಿವಿಲ್ ಇಂಜಿನಿಯರಿಂಗ್ನ ಎಲ್ಲಾ 8 ಸೆಮಿಸ್ಟರ್ಗಳಲ್ಲೂ ರಾಜ್ಯಕ್ಕೆ ಫರ್ಸ್ಟ್ ರ್ಯಾಂಕ್ ಪಡೆದಿದ್ದಾರೆ. ಜೊತೆಗೆ ವಿವಿಧ ವಿಷಯಗಳಲ್ಲೂ ವಿನೂತನ ಸಾಧನೆ ಮಾಡಿ ಒಟ್ಟು 16 ಗೋಲ್ಡ್ ಮೆಡಲ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ನೆಗೆಟಿವ್ ಟ್ರೋಲ್ ಬಗ್ಗೆ ಟಿವಿ9 ಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿನಿ ಬುಶ್ರಾ ಮತೀನ್, ನೆಗೆಟಿವ್ ಟ್ರೋಲ್ ಏಕೆ ಮಾಡಲಾಗುತ್ತಿದೆ ಗೊತ್ತಿಲ್ಲ. ನಾನೊಬ್ಬ ಭಾರತೀಯಳು ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ ಎಂದರು. ಬುಶ್ರಾ ಮತೀನ್ ತಂದೆ ಜಹೀರುದ್ದಿನ್ ಮಾತನಾಡಿ, ನನ್ನ ಮಗಳನ್ನು ನೆಗೆಟಿವ್ ಟ್ರೋಲ್ ಮಾಡಲಾಗುತ್ತಿದೆ. ಧರ್ಮ ಬೇರೆ, ಶಿಕ್ಷಣ ಬೇರೆ. ಅವರನ್ನು ಹಾಗೇ ಬಿಂಬಿಸಬೇಡಿ ಅಂತ ಮನವಿ ಮಾಡಿದ್ದಾರೆ.
ಇದನ್ನೂ ಓದಿ
ತುಮಕೂರಿನಲ್ಲಿ ರೈತರ ಮನವಿಗೆ ಬಗ್ಗದೆ ಫಸಲು ನೀಡುತ್ತಿದ್ದ ಅಡಕೆ, ತೆಂಗಿನ ಮರಗಳನ್ನ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು
ನಾಗರಿಕರ ಮೇಲೆ ದಾಳಿಯಾದ್ರೆ ಅದು ಕೊಲೆ ಆಗುತ್ತೆ; ದೌರ್ಜನ್ಯ ಎಸಗಿದವರನ್ನು ಸುಮ್ಮನೆ ಬಿಡಲ್ಲ: ಝೆಲೆನ್‌ಸ್ಕಿ ಆಕ್ರೋಶ