ಶಿವಮೊಗ್ಗ: ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ (Harsha Murder) ನಡೆದ ಹಿನ್ನೆಲೆ ಶಾಲೆ- ಕಾಲೇಜುಗಳು ಬಂದ್ ಆಗಿದ್ದವು. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಶಾಲೆ- ಕಾಲೇಜುಗಳಿಗೆ ನಿನ್ನೆವರೆಗೆ ರಜೆ ನೀಡಲಾಗಿತ್ತು. ಬಂದ್ ಆಗಿದ್ದ ಶಾಲೆ- ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿದೆ. ಆದರೆ ಹಿಜಾಬ್ (Hijab) ಧರಿಸಿ ತರಗತಿಗೆ ಹಾಜರಾಗಲು ವಿದ್ಯಾರ್ಥಿನಿಯರು ನಿರಾಕರಿಸಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಅಂತ ಆಗ್ರಹಿಸಿ ಶಿವಮೊಗ್ಗ ನಗರದ ಡಿವಿಎಸ್ ಕಾಲೇಜು ಎದುರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಡಿವಿಎಸ್ ಕಾಲೇಜು ಮುಂಭಾಗದಲ್ಲಿ ಮಾತನಾಡಿದ ವಿದ್ಯಾರ್ಥಿನಿ ತಾಯಿ ಸೂಫಿ, ಮಗಳು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಇಂದು ಪಿಯುಸಿ ಪೂರ್ವ ಸಿದ್ಧತೆ ಪರೀಕ್ಷೆ ಇದೆ. ರಾಜ್ಯಶಾಸ್ತ್ರದ ಪೂರ್ವ ಸಿದ್ಧತೆ ಪರೀಕ್ಷೆ ಇದೆ. ಮಗಳನ್ನು ಕಾಲೇಜ್ ಒಳಗೆ ಕಳುಹಿಸಿರುವೆ. ಹಿಜಾಬ್ಗೆ ಅವಕಾಶ ನೀಡಿದರೆ ಪರೀಕ್ಷೆ ಬರೆಯುತ್ತಾಳೆ. ಇನ್ನೂ ಹೈಕೋರ್ಟ್ ಆದೇಶ ಬಂದಿಲ್ಲ. ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಅಂತ ಒತ್ತಾಯಿಸಿದ್ದಾರೆ.
ಮಾರ್ಚ್ 4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಳಗ್ಗೆ 6 ರಿಂದ ಸಂಜೆ 7ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ಸೇವೆಗಷ್ಟೇ ಅನುಮತಿ ನೀಡಿ ಆದೇಶ ನೀಡಲಾಗಿದೆ.
ಇದನ್ನೂ ಓದಿ
ಕಳೆದ ವರ್ಷ ಭೀಕರ ಅಪಘಾತ ಕಂಡಿದ್ದ ರಸ್ತೆಯ ಅಗಲೀಕರಣಕ್ಕೆ ಇಂದು ಶಂಕುಸ್ಥಾಪನೆ: ಬೆಳಗಾವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮನ
ಕಬ್ಬನ್ ಪಾರ್ಕ್ನ ಬಾಲಭವನ ಅಭಿವೃದ್ಧಿ ಕೆಲಸಕ್ಕೆ ಜನಾಕ್ರೋಶ; ಸ್ಮಾರ್ಟ್ ಸಿಟಿ ಹೆಸರಲ್ಲಿ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಎಂದು ಅಸಮಾಧಾನ