ಕಬ್ಬನ್ ಪಾರ್ಕ್​ನ ಬಾಲಭವನ ಅಭಿವೃದ್ಧಿ ಕೆಲಸಕ್ಕೆ ಜನಾಕ್ರೋಶ; ಸ್ಮಾರ್ಟ್ ಸಿಟಿ ಹೆಸರಲ್ಲಿ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಎಂದು ಅಸಮಾಧಾನ

ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಈ ಬಾಲಭವನಕ್ಕೆ ಕೊರೊನಾ ಪೂರ್ವದಲ್ಲಿ ಸಾಕಷ್ಟು ಮಕ್ಕಳು ಸೇರ್ತಾಯಿದ್ರು. ಆದ್ರೆ ಕೊವಿಡ್ ಬಂದ ಬಳಿಕ ಮಕ್ಕಳ ವಿಸೀಟ್ಗೆ ಬ್ರೇಕ್ ಹಾಕಲಾಗಿತ್ತು. ಈ ಮಧ್ಯೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬಾಲಭವನ ಅಭಿವೃದ್ಧಿ ಕೆಲಸ ಮಾಡಲಾಗ್ತಿತ್ತು. ಆದ್ರೆ ಇದಕ್ಕೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.

ಕಬ್ಬನ್ ಪಾರ್ಕ್​ನ ಬಾಲಭವನ ಅಭಿವೃದ್ಧಿ ಕೆಲಸಕ್ಕೆ ಜನಾಕ್ರೋಶ; ಸ್ಮಾರ್ಟ್ ಸಿಟಿ ಹೆಸರಲ್ಲಿ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಎಂದು ಅಸಮಾಧಾನ
ಕಬ್ಬನ್ ಪಾರ್ಕ್ನಲ್ಲಿರುವ ಬಾಲಭವನ
Follow us
TV9 Web
| Updated By: ಆಯೇಷಾ ಬಾನು

Updated on:Feb 28, 2022 | 8:17 AM

ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ(Cubbon Park) ಬಾಲಭವನ ಅಭಿವೃದ್ಧಿ ಮಾಡ್ತೀವಿ ಅಂತ ಕೆಲಸ ಶುರು ಮಾಡಿದ್ದ ಸ್ಮಾರ್ಟ್ ಸಿಟಿ(Smart City Project) ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಡೆವಲಪ್ಮೆಂಟ್ ಹೆಸರಲ್ಲಿ ನೈಸರ್ಗಿಕ ಸೌಂದರ್ಯ ಕೆಡಿಸ್ತಿದ್ದಾರೆ ಅಂತ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ. ನೆನಪಿನ ಬುತ್ತಿ ಹೊತ್ತಿರುವ ಪುಟಾಣಿ ಎಕ್ಸ್ಪ್ರೆಸ್ ರೈಲು.. ಹಸಿರು ಹೊದ್ದು ಮಲಗಿರುವ ಸ್ವಚ್ಚಂದವಾದ ಪರಿಸರ. ಚಿಣ್ಣರಿಗೆ ಪ್ರಕೃತಿ ಪಾಠ ಹೇಳಿಕೊಡ್ತಿದ್ದ ಇದೇ ಜಾಗ ಇದೀಗ ಸ್ಮಾರ್ಟ್ ಸಿಟಿ ಹೆಸರಲ್ಲಿ ಮೂಲ ಸೌಂದರ್ಯ ಕಳೆದುಕೊಳ್ತಿದೆ.

ಚಿಣ್ಣರಿಗಾಗೇ ನಿರ್ಮಾಣವಾಗಿರುವ ಬಾಲಭವನ ತಂಗಾಳಿ ಮಧ್ಯೆ, ಸ್ವಚ್ಛವಾದ ಪರಿಸರದಲ್ಲಿ ಮಕ್ಕಳು ಪ್ರಕೃತಿ ಸವಿಯನ್ನು ಸವಿಯಲಿ ಅಂತಾನೇ ನಿರ್ಮಾಣ ಮಾಡಿರೋ ಜಾಗ. ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಈ ಬಾಲಭವನಕ್ಕೆ ಕೊರೊನಾ ಪೂರ್ವದಲ್ಲಿ ಸಾಕಷ್ಟು ಮಕ್ಕಳು ಸೇರ್ತಾಯಿದ್ರು. ಆದ್ರೆ ಕೊವಿಡ್ ಬಂದ ಬಳಿಕ ಮಕ್ಕಳ ವಿಸೀಟ್ಗೆ ಬ್ರೇಕ್ ಹಾಕಲಾಗಿತ್ತು. ಈ ಮಧ್ಯೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬಾಲಭವನ ಅಭಿವೃದ್ಧಿ ಕೆಲಸ ಮಾಡಲಾಗ್ತಿತ್ತು. ಆದ್ರೆ ಇದಕ್ಕೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಮತ್ತಷ್ಟು ಹಾಳು ಮಾಡ್ತಿದ್ದಾರೆ ಅಂತ ಆರೋಪಿಸಿದೆ.

ಕಬ್ಬನ್ ಪಾರ್ಕ್ ವಾಕರ್ಸ್ ಪ್ರಕಾರ, ಬಾಲಭವನದಲ್ಲಿ ಈಗ ಬೆಳೆಸಲಾಗುತ್ತಿರುವ ಮೆಕ್ಸಿಕನ್ ಗ್ರಾಸ್ ಶೋಕಿಗಷ್ಟೇ. ಇದ್ರಿಂದ ಬಾಲಭವನದ ಮೂಲಸೌಂದರ್ಯಕ್ಕೆ ಧಕ್ಕೆಯಾಗ್ತಿದೆ. ಮೆಕ್ಸಿಕನ್ ಗ್ರಾಸ್ಗೆ ಆಗಾಗ ರಾಸಾಯನಿಕವನ್ನು ಸಿಂಪಡಿಸಬೇಕಾಗುತ್ತೆ. ಜೊತೆಗೆ ಬಾಲಭವನದಲ್ಲಿ ಬಿದಿರಿನ ಮರ ಇತ್ತು. ಆದ್ರೆ ಅವುಗಳನ್ನು ಈಗ ತೆಗೆದುಹಾಕಿ ತಾಳೆಗಳನ್ನು ಹೆಚ್ಚಾಗಿ ನೆಡಲಾಗ್ತಾಯಿದೆ. ಈ ತಾಳೆ ಮರಗಳು ಹೆಚ್ಚು ನೀರು ಕುಡಿಯುತ್ತವೆ. ಜೊತೆಗೆ ನೆರಳು ಕೊಡುವಂತಹ ಮರಗಳಲ್ಲ. ಇದರಿಂದ ಯಾವ ಪರಿಸರವನ್ನು ಮಕ್ಕಳಿಗೆ ತೋರಿಸಿದಂತಾಗುತ್ತೆ ಅಂತ ಪ್ರಶ್ನಿಸ್ತಿದ್ದಾರೆ.

ಒಟ್ನಲ್ಲಿ ಬಾಲಭವನದ ಅಭಿವೃದ್ಧಿ ಮಾಡ್ತೇವೆ ಅಂತ ಸ್ಮಾರ್ಟ್ ಸಿಟಿ ಕೆಲಸ ಶುರು ಮಾಡಿದ್ರೆ, ಇದ್ದ ಸ್ವಾಭಾವಿಕ ಸೌಂದರ್ಯವನ್ನು ಕೆಡಿಸ್ತಿದ್ದಾರೆ ಅಂತ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಗರಿಕರ ಜೊತೆ ಚರ್ಚಿಸಿ ಬಾಲಭವನದ ಅಭಿವೃದ್ಧಿ ಮಾಡಬೇಕು ಅಂತ ಒತ್ತಾಯಿಸ್ತಿದ್ದಾರೆ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು.

ಇದನ್ನೂ ಓದಿ: ರಾಷ್ಟ್ರೀಯ ವಿಜ್ಞಾನ ದಿನ -ಗೌರಿಬಿದನೂರು ಬಳಿ ಕುಗ್ರಾಮದಲ್ಲಿದೆ ಡಾ. ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ, ಏನಿದರ ವಿಶೇಷತೆ? 

ಮೊಡವೆಗಳಿಗೆ ಕಾರಣವಾಗುವ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಸ್ನಾನ ಮಾಡುವಾಗ ಇರಲಿ ಎಚ್ಚರ

Published On - 8:16 am, Mon, 28 February 22