Ukraine Crisis: ಉಕ್ರೇನ್‌ನಿಂದ ಕನ್ನಡಿಗರ ಏರ್‌ಲಿಫ್ಟ್; ರಾತ್ರಿ 8 ಗಂಟೆಯವರೆಗೆ 30 ಕನ್ನಡಿಗ ವಿದ್ಯಾರ್ಥಿಗಳ ಆಗಮನ
ಕನ್ನಡಿಗ ವಿದ್ಯಾರ್ಥಿಗಳಿಗೆ ನೆರವಾಗಲು ಫೆಸಿಲಿಟೇಷನ್ ಸೆಂಟರ್ ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ದೆಹಲಿ, ಮುಂಬೈ ಏರ್‌ಪೋರ್ಟ್‌ಗಳಲ್ಲಿ ಫೆಸಿಲಿಟೇಷನ್ ಸೆಂಟರ್ ತೆರೆಯುವಂತೆ ಸೂಚನೆ ಕೊಡಲಾಗಿದೆ. ದೆಹಲಿ, ಮುಂಬೈ ನಿಲ್ದಾಣಗಳಲ್ಲಿ ನೋಡಲ್ ಆಫೀಸರ್ಸ್ ನೇಮಕ ಮಾಡಲಾಗಿದೆ.
ಬೆಂಗಳೂರು: ಯುದ್ಧಪೀಡಿತ ಉಕ್ರೇನ್‌ನಿಂದ ಕನ್ನಡಿಗರ ಏರ್‌ಲಿಫ್ಟ್ ಮಾಡಲಾಗಿದೆ. ರಾತ್ರಿ 8 ಗಂಟೆಯವರೆಗೆ 30 ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳಿಗೆ ನೆರವಾಗಲು ಫೆಸಿಲಿಟೇಷನ್ ಸೆಂಟರ್ ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ದೆಹಲಿ, ಮುಂಬೈ ಏರ್‌ಪೋರ್ಟ್‌ಗಳಲ್ಲಿ ಫೆಸಿಲಿಟೇಷನ್ ಸೆಂಟರ್ ತೆರೆಯುವಂತೆ ಸೂಚನೆ ಕೊಡಲಾಗಿದೆ. ದೆಹಲಿ, ಮುಂಬೈ ನಿಲ್ದಾಣಗಳಲ್ಲಿ ನೋಡಲ್ ಆಫೀಸರ್ಸ್ ನೇಮಕ ಮಾಡಲಾಗಿದೆ. ದೆಹಲಿ ಏರ್‌ಪೋರ್ಟ್‌ನ ನೋಡಲ್ ಅಧಿಕಾರಿಗಳಾಗಿ ಮೂವರು ನೇಮಕಗೊಂಡಿದ್ದಾರೆ.
ಅನಂತ, ವೆಂಕಟೇಶ್, ಜಗದೀಶ್‌ರನ್ನು ಸರ್ಕಾರ ನೇಮಿಸಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ನೋಡಲ್ ಅಧಿಕಾರಿಗಳಾಗಿ ನಾಲ್ವರ ನೇಮಕ ಮಾಡಲಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಎಂಡಿ ಪ್ರವೀಣ್ ಬಾಗೇವಾಡಿ, ಕುಮಾರಕೃಪಾ ಅತಿಥಿ ಗೃಹ ಮ್ಯಾನೇಜರ್ ಪ್ರೇಮ್ ಕುಮಾರ್, ಡಿಪಿಎಆರ್ ಅಧೀನ ಕಾರ್ಯದರ್ಶಿ ವಿರೂಪಾಕ್ಷಿ ಹಾಗೂ ಬೆಳಗಾವಿ ಎಸಿ ರವಿ ಕರಿಲಿಂಗಣ್ಣವರ್ ನೇಮಿಸಲಾಗಿದೆ.
ಉಕ್ರೇನ್‌ನಲ್ಲಿ ಒಟ್ಟು 406 ಕನ್ನಡಿಗ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ನಗರ 135, ಮೈಸೂರು 28, ಬಾಗಲಕೋಟೆ 24, ದಕ್ಷಿಣ ಕನ್ನಡ 18, ವಿಜಯಪುರ 18, ತುಮಕೂರಿನವರು 17, ಬೆಂಗಳೂರು ಗ್ರಾಮಾಂತರ 18, ಹಾಸನ ಜಿಲ್ಲೆಯವರು 13, ರಾಯಚೂರು 15, ಕೊಡಗು ಜಿಲ್ಲೆಯ 12 ವಿದ್ಯಾರ್ಥಿಗಳು, ಬೆಳಗಾವಿ 12, ಹಾವೇರಿ 10, ಕೋಲಾರದ 9 ವಿದ್ಯಾರ್ಥಿಗಳು, ದಾವಣಗೆರೆ 9, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 8, ಉಡುಪಿ 7, ಬೀದರ್ 6, ಬಳ್ಳಾರಿ 6, ಚಿತ್ರದುರ್ಗದ ಐವರು, ಶಿವಮೊಗ್ಗ 4, ಕಲಬುರಗಿ 4, ಧಾರವಾಡ 4, ಮಂಡ್ಯ 3, ಚಾಮರಾಜನಗರ 4, ಕೊಪ್ಪಳ 3, ರಾಮನಗರ 2, ಗದಗ 2, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಉಕ್ರೇನ್‌ನಿಂದ ಭಾರತಕ್ಕೆ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈವರೆಗೆ 3 ಬ್ಯಾಚ್ನಲ್ಲಿ ಆಗಮಿಸಿರುವ ಕನ್ನಡಿಗ ವಿದ್ಯಾರ್ಥಿಗಳ ಪೈಕಿ, ಮೊದಲ ಬ್ಯಾಚ್ನಲ್ಲಿ 12 ವಿದ್ಯಾರ್ಥಿಗಳು ಮುಂಬೈಗೆ ಆಗಮಿಸಿದ್ದಾರೆ. 2ನೇ ಬ್ಯಾಚ್ನಲ್ಲಿ 13 ವಿದ್ಯಾರ್ಥಿಗಳು ನವದೆಹಲಿಗೆ ಆಗಮಿಸಿದ್ದಾರೆ. 3ನೇ ಬ್ಯಾಚ್ನಲ್ಲಿ ಐವರು ವಿದ್ಯಾರ್ಥಿಗಳು ದೆಹಲಿಗೆ ಆಗಮಿಸಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕರ್ನಾಟಕದ ಐವರು ವಿದ್ಯಾರ್ಥಿಗಳು ಕೆಐಎಬಿಗೆ ಬಂದಿಳಿದಿದ್ದಾರೆ. ವಿದ್ಯಾರ್ಥಿಗಳನ್ನು ಪೋಷಕರು, ಸಂಬಂಧಿಕರು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಿಂದ ಬರುವ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ವೀಸಾ ನಿರ್ಬಂಧಗಳಿಲ್ಲದೆ ಪ್ರವೇಶಿಸಲು ಪೋಲೆಂಡ್ ಅನುಮತಿ
ಇದನ್ನೂ ಓದಿ: ಬೆಲಾರಸ್ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಗೆ: ವರದಿ
Published On - 9:33 pm, Sun, 27 February 22