ಬೆಲಾರಸ್ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಗೆ: ವರದಿ
ಉಕ್ರೇನ್ ಶಾಂತಿ ಮಾತುಕತೆಗಾಗಿ ರಷ್ಯಾವನ್ನು ಭೇಟಿಯಾಗಲು ಸಿದ್ಧವಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಬೆಲಾರಸ್‌ನಲ್ಲಿ (Belarus) ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ (Ukraine)ಭಾನುವಾರ ಒಪ್ಪಿಕೊಂಡಿದೆ ಎಂದು ಮಾಸ್ಕೊದಲ್ಲಿ ಅಧಿಕಾರಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ. ಅನಿರ್ದಿಷ್ಟ ಸ್ಥಳದಲ್ಲಿ ಈ ದೇಶಗಳು ಭೇಟಿಯಾಗಲಿದವೆ. ಆದಾಗ್ಯೂ ಸಭೆಗೆ ನಿಖರವಾದ ಸಮಯವನ್ನು ನೀಡಲಿಲ್ಲ. ಉಕ್ರೇನ್ ಶಾಂತಿ ಮಾತುಕತೆಗಾಗಿ ರಷ್ಯಾವನ್ನು ಭೇಟಿಯಾಗಲು ಸಿದ್ಧವಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಆದರೆ ಆಕ್ರಮಣಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುವ ದೇಶದಲ್ಲಿ ಅಲ್ಲ. ಉಕ್ರೇನ್ ತನ್ನ ದೇಶದ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸದ ಇತರ ಸ್ಥಳಗಳಲ್ಲಿ ಮಾತುಕತೆಗಳಿಗೆ ಮುಕ್ತವಾಗಿದೆ ಎಂದು ಅವರು ಹೇಳಿದರು. ನಂತರ, ಅವರು ಬೆಲಾರಸ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ಮಾತನಾಡಿದ್ದಾರೆ ಎಂದು ಟೆಲಿಗ್ರಾಮ್ನಲ್ಲಿ ಹೇಳಿದ್ದರೂ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಇದಕ್ಕೂ ಮೊದಲು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಅಧಿಕಾರಿಗಳು ಮಾಸ್ಕೊ ಆಕ್ರಮಣದ ನಂತರ ಮಾತುಕತೆಗಾಗಿ “ಅವಕಾಶ” ವನ್ನು ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು. ಬೆಲರೂಸಿಯನ್ ನಗರವಾದ ಗೊಮೆಲ್‌ನಲ್ಲಿ ಉಕ್ರೇನಿಯನ್ ಅಧಿಕಾರಿಗಳನ್ನು ಭೇಟಿ ಮಾಡಲು ತನ್ನ ನಿಯೋಗ ಸಿದ್ಧವಾಗಿದೆ ಎಂದು ರಷ್ಯಾ ಹೇಳಿದೆ. ಮಿನ್ಸ್ಕ್ (ಬೆಲಾರಸ್ ರಾಜಧಾನಿ) ಸ್ವತಃ ರಷ್ಯಾದ ಆಕ್ರಮಣದಲ್ಲಿ ಭಾಗಿದಾರ ಎಂದು ಝೆಲೆನ್ಸ್ಕಿ ಹೇಳಿದ್ದರಿಂದ ಉಕ್ರೇನ್ ಇದನ್ನು ತಿರಸ್ಕರಿಸಿತ್ತು. ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ನಡೆಯನ್ನು ಪ್ರಚಾರ ಎಂದು ಕರೆದಿದ್ದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೊ ಸಂದೇಶದಲ್ಲಿ ಮಾತನಾಡಿ, ‘‘ಉಕ್ರೇನ್ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್ಅನ್ನು ಲಾಂಚ್ ಪ್ಯಾಡ್ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ವಿಡಿಯೋೊದಲ್ಲಿ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಮಾತನಾಡಿದ ಝೆಲೆನ್ಸ್ಕಿ, ‘‘ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ಪ್ರವೇಶಿಸಿದಾಗ ಉಕ್ರೇನ್ ಮತ್ತು ರಷ್ಯಾದ ಸೈನಿಕರ ನಡುವೆ ಕಾದಾಟ ನಡೆದಿದೆ. ಜನರನ್ನು ನೋಯಿಸಲು ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿವೆ’’ ಎಂದು ಆರೋಪಿಸಿದ್ದಾರೆ.
ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು. ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿದೆ. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಪ್ರಸ್ತಾಪಿಸಿ, ಬೇರೆಡೆ ಮಾತುಕತೆಗೆ ಸಿದ್ಧ ಎಂದಿದ್ದರು.
Published On - 7:51 pm, Sun, 27 February 22