AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indians in Ukraine: ಆಶ್ರಯ ಕೊಟ್ಟ ಮನೆ ಮಾಲೀಕರನ್ನು ಕಾಪಾಡಲೆಂದು ಉಕ್ರೇನ್​ನಲ್ಲೇ ಉಳಿದ ಭಾರತದ ಹುಡುಗಿ

Kyiv: ರಷ್ಯಾ ಪಡೆಗಳ ಸತತ ದಾಳಿಯ ನಡವೆಯೂ ತನಗೆ ಆಶ್ರಯ ನೀಡಿದ ಮನೆ ಮಾಲೀಕರನ್ನು ರಕ್ಷಿಸಲೆಂದು ಅವರು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ

Indians in Ukraine: ಆಶ್ರಯ ಕೊಟ್ಟ ಮನೆ ಮಾಲೀಕರನ್ನು ಕಾಪಾಡಲೆಂದು ಉಕ್ರೇನ್​ನಲ್ಲೇ ಉಳಿದ ಭಾರತದ ಹುಡುಗಿ
ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ಜರ್ಮನಿ ರಾಜಧಾನಿ ಬರ್ಲಿನ್​ನಲ್ಲಿ ಪ್ರತಿಭಟನೆ ನಡೆಯಿತು.
TV9 Web
| Edited By: |

Updated on:Feb 27, 2022 | 10:05 PM

Share

ದೆಹಲಿ: ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್ (Ukraine) ರಾಜಧಾನಿ ಕೀವ್​ನಲ್ಲಿ (Kyiv) 17ನೇ ವರ್ಷದ ಭಾರತ ಸಂಜಾತೆಯೊಬ್ಬರು ವಾಪಸ್ ಭಾರತಕ್ಕೆ ಹಿಂದಿರುಗದೆ ಹಟ ಹಿಡಿದು ಕುಳಿತಿದ್ದಾರೆ. ರಷ್ಯಾ (Russia) ಪಡೆಗಳ ಸತತ ದಾಳಿಯ ನಡವೆಯೂ ತನಗೆ ಆಶ್ರಯ ನೀಡಿದ ಮನೆ ಮಾಲೀಕರನ್ನು ರಕ್ಷಿಸಲೆಂದು ಅವರು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಮನೆ ಮಾಲೀಕ ಉಕ್ರೇನ್ ಸೇನೆಗೆ ಸೇರ್ಪಡೆಯಾಗಿದ್ದರೆ, ಆತನ ಪತ್ನಿ ಮತ್ತು ಮಕ್ಕಳು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಪೂರ್ವ ಯೂರೋಪ್​ನ ಉಕ್ರೇನ್​ಗೆ ವೈದ್ಯಕೀಯ ಶಿಕ್ಷಣಕ್ಕಾಗಿ ನೇಹಾ ಮೊದಲ ಬಾರಿಗೆ ಭೇಟಿ ನೀಡಿದಾಗ ಅವರಿಗೆ ಕಾಲೇಜಿನ ಹಾಸ್ಟೆಲ್​ನಲ್ಲಿ ವಸತಿ ಸೌಕರ್ಯ ಸಿಗಲಿಲ್ಲ. ಕೊನೆಗೆ ಅವರು ನಿರ್ಮಾಣ ಕಾಮಗಾರಿ ನಿರ್ವಹಿಸುವ ಎಂಜಿನಿಯರ್ ಒಬ್ಬರ ಮನೆಯಲ್ಲಿ ಬಾಡಿಗೆಗೆ ಉಳಿದರು. ನೇಹಾ ಅವರ ತಾಯಿ ಹರ್ಯಾಣದ ಛರ್ಖಿ ದಾದ್ರಿ ಜಿಲ್ಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೇಹಾ ಅವರ ತಂದೆಯು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.

‘ಸದ್ಯಕ್ಕೆ ನೇಹಾ ಉಕ್ರೇನ್​ನಲ್ಲಿ ಸುರಕ್ಷಿತರಾಗಿದ್ದಾರೆ. ಈ ಹಿಂದೆ ಅವರ ಮೊಬೈಲ್ ಫೋನ್ ಆಫ್ ಆಗಿತ್ತು. ಇದೀಗ ಅವರಿಗೆ ಫೋನ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗಿದ್ದು, ಊರನ್ನು ಸಂಪರ್ಕಿಸಲು ಸಾಧ್ಯವಾಗಿದೆ. ಪ್ರಸ್ತುತ ಅವರು ಕೀವ್​ನ ಬಂಕರ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಅವರಿರುವ ಜಾಗದ ಸುತ್ತಲೂ ದೊಡ್ಡಮಟ್ಟದ ಧ್ವನಿ ಕೇಳಿಬರುತ್ತಿದೆ. ಈವರೆಗೆ ರಷ್ಯಾ ಸೇನೆಯು ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ’ ಎಂದು ಸವಿತಾ ಹೇಳಿದರು. ಸವಿತಾ ಅವರು ಡೆನ್ಮಾರ್ಕ್​ನಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸವಿತಾ ಅವರು ತಮ್ಮ ಹಾಗೂ ತಮ್ಮ ಗೆಳತಿಯ ಸ್ಥಿತಿಯ ಬಗ್ಗೆ ಫೇಸ್​ಬುಕ್ ಪೋಸ್ಟ್​ನಲ್ಲಿ ವಿವರಗಳನ್ನು ಬರೆದುಕೊಂಡಿದ್ದಾರೆ. ಉಕ್ರೇನ್​ನ ಭಾರತೀಯ ದೂತಾವಾಸ ಕಚೇರಿಯು ತುಂಬಾ ಕಷ್ಟಪಟ್ಟು ನೇಹಾ ಅವರನ್ನು ಸಂಪರ್ಕಿಸಿ ರಕ್ಷಿಸಲು ಯತ್ನಿಸಿದೆ. ಆದರೆ ನೇಹಾ ಅವರು ಕೀವ್​ನ ಅವರ ಮನೆಯಿಂದ ಹೊರಗೆ ಬರಲು ಇಷ್ಟಪಡುತ್ತಿಲ್ಲ. ಆದರೆ ನೇಹಾ ಅವರು ಮೂವರು ಮಕ್ಕಳೊಂದಿಗೆ ಅವರ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟುಬರಲು ಒಪ್ಪುತ್ತಿಲ್ಲ.

ನೇಹಾ ಅವರ ತಾಯಿಯು ಎಷ್ಟೇ ಪ್ರಯತ್ನಪಟ್ಟರು ಅವರು ಮನೆಬಿಟ್ಟು ಬರಲು ಒಪ್ಪುತ್ತಿಲ್ಲ. ಆ ಕುಟುಂಬದ ಸಂಕಷ್ಟ ಸಮಯದಲ್ಲಿ ಜೊತೆಗೆ ನಿಲ್ಲಲು ಅವರು ದೃಢನಿರ್ಧಾರ ಮಾಡಿದ್ದಾರೆ. ಚಿಕ್ಕಮಕ್ಕಳನ್ನು ಉಳಿಸಲು ಬೇಕಿದ್ದರೆ ನನ್ನ ಪ್ರಾಣ ಬೇಕಾದರೂ ಕೊಡುತ್ತೇನೆ ಎಂದು ನೇಹಾ ಹಟ ಹಿಡಿದಿದ್ದಾರೆ. ಮಕ್ಕಳೊಂದಿಗೆ ಏಕಾಂಗಿಯಾಗಿ ಇರುವ ತಾಯಿಯನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂದು ನೇಹಾ ಹೇಳಿದ್ದಾರೆ. ಡೆನ್ಮಾರ್ಕ್​ನಲ್ಲಿಯೂ ಜನರು ಯುದ್ಧವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಗೆ

ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಭಾನುವಾರ ಒಪ್ಪಿಕೊಂಡಿದೆ ಎಂದು ಮಾಸ್ಕೊದಲ್ಲಿ ಅಧಿಕಾರಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ. ಅನಿರ್ದಿಷ್ಟ ಸ್ಥಳದಲ್ಲಿ ಈ ದೇಶಗಳು ಭೇಟಿಯಾಗಲಿದವೆ. ಆದಾಗ್ಯೂ ಸಭೆಗೆ ನಿಖರವಾದ ಸಮಯವನ್ನು ನೀಡಲಿಲ್ಲ. ಉಕ್ರೇನ್ ಶಾಂತಿ ಮಾತುಕತೆಗಾಗಿ ರಷ್ಯಾವನ್ನು ಭೇಟಿಯಾಗಲು ಸಿದ್ಧವಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಆದರೆ ಆಕ್ರಮಣಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುವ ದೇಶದಲ್ಲಿ ಅಲ್ಲ. ಉಕ್ರೇನ್ ತನ್ನ ದೇಶದ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸದ ಇತರ ಸ್ಥಳಗಳಲ್ಲಿ ಮಾತುಕತೆಗಳಿಗೆ ಮುಕ್ತವಾಗಿದೆ ಎಂದು ಅವರು ಹೇಳಿದರು. ನಂತರ, ಅವರು ಬೆಲಾರಸ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಅವರೊಂದಿಗೆ ಮಾತನಾಡಿದ್ದಾರೆ ಎಂದು ಟೆಲಿಗ್ರಾಮ್​​ನಲ್ಲಿ ಹೇಳಿದ್ದರೂ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಇದಕ್ಕೂ ಮೊದಲು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಅಧಿಕಾರಿಗಳು ಮಾಸ್ಕೊ ಆಕ್ರಮಣದ ನಂತರ ಮಾತುಕತೆಗಾಗಿ ಅವಕಾಶ” ವನ್ನು ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು. ಬೆಲರೂಸಿಯನ್ ನಗರವಾದ ಗೊಮೆಲ್‌ನಲ್ಲಿ ಉಕ್ರೇನಿಯನ್ ಅಧಿಕಾರಿಗಳನ್ನು ಭೇಟಿ ಮಾಡಲು ತನ್ನ ನಿಯೋಗ ಸಿದ್ಧವಾಗಿದೆ ಎಂದು ರಷ್ಯಾ ಹೇಳಿದೆ. ಮಿನ್ಸ್ಕ್ (ಬೆಲಾರಸ್ ರಾಜಧಾನಿ) ಸ್ವತಃ ರಷ್ಯಾದ ಆಕ್ರಮಣದಲ್ಲಿ ಭಾಗಿದಾರ ಎಂದು ಝೆಲೆನ್ಸ್ಕಿ ಹೇಳಿದ್ದರಿಂದ ಉಕ್ರೇನ್ ಇದನ್ನು ತಿರಸ್ಕರಿಸಿತ್ತು. ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ನಡೆಯನ್ನು ಪ್ರಚಾರ ಎಂದು ಕರೆದಿದ್ದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೊ ಸಂದೇಶದಲ್ಲಿ ಮಾತನಾಡಿ, ‘‘ಉಕ್ರೇನ್​ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್​​ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್​ಅನ್ನು ಲಾಂಚ್ ಪ್ಯಾಡ್​ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಲಾರಸ್ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಗೆ: ವರದಿ

ಇದನ್ನೂ ಓದಿ: ಶಿಶು ವಿಹಾರಗಳು, ಶಾಲೆಗಳ ಮೇಲೆ ಕೂಡ ರಷ್ಯಾ ಸೇನೆಯಿಂದ ದಾಳಿ; ಉಕ್ರೇನಿಯನ್​ ಅಧ್ಯಕ್ಷರಿಂದ ಮಾಹಿತಿ

Published On - 9:49 pm, Sun, 27 February 22

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು