Kannada News » Photo gallery » Rescue plane carrying 32 Gujarati students trapped in Ukraine; Here are photos
Russia Ukraine War: ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ 32 ಗುಜರಾತಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದ ರಕ್ಷಣಾ ವಿಮಾನ; ಇಲ್ಲಿವೆ ಫೋಟೋಗಳು
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಉಕ್ರೇನ್‌ನಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ, ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲಾಗುತ್ತಿದ್ದು, ಇದರ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಗುಜರಾತ್‌ನ 32 ಯುವ ವಿದ್ಯಾರ್ಥಿಗಳು ಮರಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಮೂವತ್ತೆರಡು ಗುಜರಾತಿ ವಿದ್ಯಾರ್ಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರ ಯಶಸ್ವಿಯಾಗಿ ವಿಶೇಷವಾದ ರಕ್ಷಣಾ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ 4 ಗಂಟೆಗೆ ನವದೆಹಲಿಗೆ ಕರೆತರಲಾಯಿತು.
1 / 5
ಗುಜರಾತ್ ಸರ್ಕಾರದ ನವದೆಹಲಿ ಮೂಲದ ರೆಸಿಡೆಂಟ್ ಕಮಿಷನರ್ ಆರತಿ ಕನ್ವರ್ ಅವರ ಮಾರ್ಗದರ್ಶನದಲ್ಲಿ 32 ಯುವ ವಿದ್ಯಾರ್ಥಿಗಳನ್ನು ಗುಜರಾತ್ ಭವನಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಬೆಳಗ್ಗೆ 9 ಗಂಟೆಗೆ ವೋಲ್ವೋ ಬಸ್ ಮೂಲಕ ಗುಜರಾತ್‌ಗೆ ಕಳುಹಿಸಲಾಗಿದೆ.