AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ವಿಜ್ಞಾನ ದಿನ -ಗೌರಿಬಿದನೂರು ಬಳಿ ಕುಗ್ರಾಮದಲ್ಲಿದೆ ಡಾ. ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ, ಏನಿದರ ವಿಶೇಷತೆ?

Dr H Narasimhaiah: ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೊ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ, ಹೊಸಕೋಟೆ ಅನ್ನೊ ಕುಗ್ರಾಮದ ಬಳಿ ಸರ್ಕಾರವು ಶಿಕ್ಷಣ ತಜ್ಞ, ವೈಜ್ಞಾನಿಕ ಮನೋಭಾವದ ಡಾ. ಎಚ್. ನರಸಿಂಹಯ್ಯ ಹೆಸರಿನಲ್ಲಿ ವಿಜ್ಞಾನ ಕೇಂದ್ರವೊಂದನ್ನು ಆರಂಭಿಸಿದ್ದು, ಜನರ ಗಮನ ಸೆಳೆಯುತ್ತಿದೆ.

ರಾಷ್ಟ್ರೀಯ ವಿಜ್ಞಾನ ದಿನ -ಗೌರಿಬಿದನೂರು ಬಳಿ ಕುಗ್ರಾಮದಲ್ಲಿದೆ ಡಾ. ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ, ಏನಿದರ ವಿಶೇಷತೆ?
National Science Day 2022: ರಾಷ್ಟ್ರೀಯ ವಿಜ್ಞಾನ ದಿನ -ಗೌರಿಬಿದನೂರು ಬಳಿ ಕುಗ್ರಾಮದಲ್ಲಿದೆ ಡಾ. ಎಚ್. ನರಸಿಂಹಯ್ಯ ವಿಜ್ಞಾನ ಕೇಂದ್ರ, ಏನಿದರ ವಿಶೇಷತೆ?
TV9 Web
| Updated By: ಸಾಧು ಶ್ರೀನಾಥ್​|

Updated on: Feb 28, 2022 | 7:23 AM

Share

ಚಿಕ್ಕಬಳ್ಳಾಪುರ: ಫೆಬ್ರವರಿ 28 ಅಂದ್ರೆ ಥಟ್ಟನೆ ನೆನಪಾಗೋದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ (National Science Day 2022). ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ದಿನಾಚರಣೆ ಮಾಡಲಾಗುತ್ತದೆ. ಇದೇ ಆಚರಣೆಯ ಸಂದರ್ಭದಲ್ಲೇ ಈ ಊರಲ್ಲಿ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರವೊಂದನ್ನು ತೆರೆದಿದ್ದು, ಜನರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಅದು ಎಲ್ಲಿದೆ? ಅಲ್ಲಿಯ ವೈಶಿಷ್ಠವೇನು ಅಂತೀರಾ? ಈ ಸ್ಟೋರಿ ಓದಿ. ಕುಗ್ರಾಮವೊಂದರ ಬಳಿ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪಿಸಿ ಅದರಲ್ಲಿ ಮ್ಯಾಥಮಾಟಿಕ್ಸ್ ಪಾರ್ಕ್, ಫನ್ ಸೈನ್ಸ್, ಸ್ಪೇಸ್ ಗ್ಯಾಲರಿ, ಮಾನವ ವಿಕಾಸ ಗ್ಯಾಲರಿ, ಕಿರು ತಾರಾಲಯ, ಸೌಂಡ್ ಪಾರ್ಕ್, ಇನ್ನೋವೇಷನ್ ಹಬ್, ಜಂಥರ್ ಮಂಥರ್ ಸೇರಿದಂತೆ ವಿವಿಧ ವಿಜ್ಞಾನದ ಪ್ರಯೋಗಳ ಮಾದರಿಯನ್ನು ಸರಳ ರೀತಿಯಲ್ಲಿ ಅಳವಡಿಸಲಾಗಿದೆ. ಹೌದು ಇದು ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೊ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ, ಹೊಸಕೋಟೆ ಅನ್ನೊ ಕುಗ್ರಾಮದ ಬಳಿ ಸರ್ಕಾರವು ಶಿಕ್ಷಣ ತಜ್ಞ, ವೈಜ್ಞಾನಿಕ ಮನೋಭಾವದ ಡಾ. ಎಚ್. ನರಸಿಂಹಯ್ಯ (Dr H Narasimhaiah) ಹೆಸರಿನಲ್ಲಿ ವಿಜ್ಞಾನ ಕೇಂದ್ರವೊಂದನ್ನು ಆರಂಭಿಸಿದ್ದು, ಜನರ ಗಮನ ಸೆಳೆಯುತ್ತಿದೆ.

ಕ್ಲಾಸ್ ರೂಮ್ ಗಳಲ್ಲಿ, ಲ್ಯಾಬೊರೆಟರಿಗಳಲ್ಲಿ, ವಿಜ್ಞಾನ ಗಣಿತದ ಬಗ್ಗೆ ಕೇಳಿ ತಿಳಿಯವುದರ ಬದಲು, ಪರಿಚಯಿಸುವ,ಅನುಭವಿಸುವ ಹಾಗೂ ಮಕ್ಕಳಲ್ಲಿ ಚಿಂತನೆ ಉದ್ಭವ ಆಗುವ ರೀತಿಯಲ್ಲಿ ಕಲಿಯುವ ಉದ್ದೇಶದಿಂದ ನಿರ್ಮಿಸಲಾಗಿದೆ. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನಾಗಿ ಸರ್ಕಾರ ಮೇಲ್ದರ್ಜೆಗೆರಿಸಿದ್ದು, ವಿವಿಧ ಗ್ಯಾಲರಿಗಳ ಶಂಕು ಸ್ಥಾಪನೆ, ಉದ್ಘಾಟನೆ ಮಾಡಲಾಗುತ್ತಿದೆ. ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಯಲು ವಿಜ್ಞಾನ ಕೇಂದ್ರ ಸಹಕಾರಿಯಾಗಿದ್ದು, ಸದುಪಯೋಗ ಪಡಿಸಿಕೊಳ್ಳಿ ಎಂದು ಗೌರಿಬಿದನೂರು ಕ್ಷೇತ್ರದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮನವಿ ಮಾಡಿದ್ದಾರೆ.

ಒಟ್ನಲ್ಲಿ ನಗರ ಹಾಗೂ ರಾಜಧಾನಿಗಳಿಗೆ ಸಿಮಿತವಾಗಿದ್ದ ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರವೊಂದನ್ನು, ಕುಗ್ರಾಮವೊಂದರ ಬಳಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಹ್ಯೂಮನ್ ಇವ್ಯಾಲ್ಯೂಯೆಷನ್, ಅಸ್ಟ್ರಾನಮಿ, ಮ್ಯಾಥಮಾಟಿಕ್ಸ್ ಹಾಗೂ ಅಕೌಸ್ಟಿಕ್ಸ್ ಬಗ್ಗೆ ಯವ ಪೀಳಿಗೆಗೆ ತಿಳಿಸುವ ಪ್ರಯತ್ನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. (ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ)

ಇದನ್ನೂ ಓದಿ: ರಷ್ಯಾ ಸೈನಿಕರ ಅಟ್ಟಹಾಸ! ಕನ್ನಡಿಗರೂ ಸೇರಿದಂತೆ ಭಾರತೀಯರ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ಹಲ್ಲೆ, ಆತಂಕದಲ್ಲಿ ಕನ್ನಡಿಗರು

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಅಥವಾ ವೃತ್ತಿಪರ ಆಯ್ಕೆಗಳು ಸಿಗುತ್ತವೆ