ನಾಗರಿಕರ ಮೇಲೆ ದಾಳಿಯಾದ್ರೆ ಅದು ಕೊಲೆ ಆಗುತ್ತೆ; ದೌರ್ಜನ್ಯ ಎಸಗಿದವರನ್ನು ಸುಮ್ಮನೆ ಬಿಡಲ್ಲ: ಝೆಲೆನ್‌ಸ್ಕಿ ಆಕ್ರೋಶ
Russia Ukraine War: ನಗರ ಪ್ರದೇಶದಲ್ಲಿ ಸಾಕಷ್ಟು ನಾಗರಿಕರು ಇರುತ್ತಾರೆ. ನಾಗರಿಕರ ಮೇಲೆ ದಾಳಿಯಾದ್ರೆ ಅದು ಕೊಲೆಯಾಗುತ್ತೆ ಎಂದು ರಷ್ಯಾ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಸುಮ್ಮನೆ ಬಿಡಲ್ಲ. ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸುತ್ತೇವೆ. ನಮ್ಮ ನಗರ, ಜನರ ಮೇಲೆ ಶೆಲ್ ದಾಳಿ ನಡೆಯುತ್ತಿದೆ. ನಮ್ಮ ನೆಲದ ಮೇಲೆ ಕ್ಷಿಪಣಿಗಳ ದಾಳಿ ಮಾಡಲಾಗುತ್ತಿದೆ. ಈ ರೀತಿ ಮಾಡಿದ ನೀವು ಶಾಂತವಾಗಿ ಇರುವುದಕ್ಕೆ ಆಗಲ್ಲ. ನಮ್ಮ ಮೇಲೆ ದಾಳಿಗೆ ಆದೇಶ ಕೊಟ್ಟವರು ಶಾಂತವಾಗಿರಲ್ಲ. ಅವರಿಗೆ ಈ ನೆಲದ ಮೇಲೆ ಸಮಾಧಿಗಳು ಮಾತ್ರ ಸಿಗುತ್ತೆ. ಶಾಂತಿ, ನೆಮ್ಮದಿ ಸಿಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಕೈಗೊಂಡಿರುವ ಹಿನ್ನೆಲೆ ರಷ್ಯಾಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ರಷ್ಯಾ ಬಾಂಬ್ ದಾಳಿ ಮಾಡುವುದಾಗಿ ಘೋಷಿಸಿದೆ. ಉಕ್ರೇನ್‌ನಲ್ಲಿರುವ ರಕ್ಷಣಾ ಉದ್ಯಮಗಳ ಮೇಲೆ ದಾಳಿ ನಡೆಸಲಾಗಿದೆ. ಈ ಉದ್ಯಮಗಳು ಉಕ್ರೇನ್‌ನ ನಗರ ಪ್ರದೇಶದಲ್ಲಿವೆ. ನಗರ ಪ್ರದೇಶದಲ್ಲಿ ಸಾಕಷ್ಟು ನಾಗರಿಕರು ಇರುತ್ತಾರೆ. ನಾಗರಿಕರ ಮೇಲೆ ದಾಳಿಯಾದ್ರೆ ಅದು ಕೊಲೆಯಾಗುತ್ತೆ ಎಂದು ರಷ್ಯಾ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನಗರಗಳಲ್ಲಿ ರಷ್ಯಾ ಸೇನೆಯಿಂದ ಶೆಲ್ ದಾಳಿ ನಡೆಸಲಾಗಿದೆ. ಉಕ್ರೇನ್‌ನ ಮಧ್ಯ, ಉತ್ತರ, ದಕ್ಷಿಣದ ನಗರಗಳಲ್ಲಿ ದಾಳಿ ನಡೆದಿದೆ ಎಂದು ರಷ್ಯಾ ಶೆಲ್ ದಾಳಿ ನಡೆಸ್ತಿರುವ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ.
ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ಪ್ರಮಾದ ಉಂಟಾಗಿದೆ. ಹೀಗಾಗಿ ಅಣು ವಿದ್ಯುತ್ ಸ್ಥಾವರಗಳನ್ನ ರಕ್ಷಿಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಹೇಳಿದ್ದಾರೆ. ರಷ್ಯಾ, ಉಕ್ರೇನ್ ಜತೆ ಮಾತುಕತೆ ಬಳಿಕ ಮ್ಯಾಕ್ರನ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಚೆರ್ನೋಬಿಲ್, ಝಫೋರಿಝೀಯಾ ಸ್ಥಾವರಗಳು ವಶಕ್ಕೆ ಪಡೆಯಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದ ಹಿನ್ನೆಲೆ, ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ಸೇವೆಗಳನ್ನ ರದ್ದು ಮಾಡಲಾಗಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಕಂಪನಿಯ ವಕ್ತಾರರಿಂದ ಮಾಹಿತಿ ಲಭಿಸಿದೆ. ಅಲ್ಲದೆ, ರಷ್ಯಾದಲ್ಲಿ ಟಿಕ್‌ಟಾಕ್ ಲೈವ್ ಸ್ಟ್ರೀಮಿಂಗ್ ಕೂಡ ಬ್ಯಾನ್ ಆಗಿದೆ. ಅಮೆರಿಕ ಎಕ್ಸ್‌ಪ್ರೆಸ್‌ನ ತನ್ನ ಎಲ್ಲಾ ಸೇವೆ ಸ್ಥಗಿತಗೊಳಿಸಿದೆ. ರಷ್ಯಾ, ಬೆಲಾರಸ್‌ನಲ್ಲಿ ಎಲ್ಲಾ ಸೇವೆಗಳು ಸ್ಥಗಿತ ಆಗಿದೆ.
ಇಂದು 7 ವಿಮಾನಗಳಲ್ಲಿ 1,200 ಭಾರತೀಯರ ಏರ್‌ಲಿಫ್ಟ್ ಆಗಲಿದೆ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಏರ್‌ಲಿಫ್ಟ್ ಪ್ರಕ್ರಿಯೆ ಮುಂದುವರಿದಿದ್ದು, ಇಂದು ಸುಮಾರು 1,200 ಭಾರತೀಯರ ಏರ್‌ಲಿಫ್ಟ್ ಕಾರ್ಯ ನಡೆಯಲಿದೆ. 7 ವಿಮಾನಗಳಲ್ಲಿ 1,200 ಭಾರತೀಯರ ಏರ್‌ಲಿಫ್ಟ್ ಆಗಲಿದೆ ಎಂಬ ಬಗ್ಗೆ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಉಕ್ರೇನ್‌ನಲ್ಲಿ ಸಿಲುಕಿದ್ದ 160 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ಆಪರೇಷನ್ ಗಂಗಾ ವಿಮಾನದಲ್ಲಿ ಹಂಗೇರಿಯಾದ ಬುಡಾಪೆಸ್ಟ್‌ನಿಂದ ದೆಹಲಿಗೆ 160 ಜನರ ಏರ್‌ಲಿಫ್ಟ್ ಮಾಡಲಾಗಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ 458 ಕನ್ನಡಿಗರು ತವರಿಗೆ ವಾಪಸ್ ಆಗಿದ್ದಾರೆ. ಉಕ್ರೇನ್‌ನಲ್ಲಿರುವ ಇನ್ನೂ 235 ಕನ್ನಡಿಗರ ಏರ್‌ಲಿಫ್ಟ್ ಬಾಕಿ ಇದೆ. ಉಕ್ರೇನ್‌ನ ಸುಮಿ ನಗರದಲ್ಲಿರುವ ಸಿಲುಕಿರುವ 7 ಕನ್ನಡಿಗರ ರಕ್ಷಣೆಗಾಗಿ ಹರಸಾಹಸ ನಡೆಯುತ್ತಿದೆ. ಒಟ್ಟು 691 ಕನ್ನಡಿಗರು ಉಕ್ರೇನ್‌ನಿಂದ ವಾಪಸಾಗಲು ಸಹಾಯವಾಣಿಗೆ ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗರ್ಭಿಣಿ ಪತ್ನಿಯನ್ನು ಉಕ್ರೇನ್‌ನಲ್ಲಿ ಬಿಟ್ಟು ಬರಲಾರೆ: ಭಾರತಕ್ಕೆ ಮರಳಲು ನಿರಾಕರಿಸಿದ ವ್ಯಕ್ತಿ
ಇದನ್ನೂ ಓದಿ: ಗನ್ ಹಿಡಿದೇ ಗೊತ್ತಿಲ್ಲದ ಉಕ್ರೇನ್‌ನ ಪುರುಷರಿಗೆ ಗನ್ ಬಳಕೆ ಬಗ್ಗೆ ಕ್ರ್ಯಾಶ್ ಕೋರ್ಸ್
Published On - 7:35 am, Mon, 7 March 22