ಗರ್ಭಿಣಿ ಪತ್ನಿಯನ್ನು ಉಕ್ರೇನ್​​ನಲ್ಲಿ ಬಿಟ್ಟು ಬರಲಾರೆ: ಭಾರತಕ್ಕೆ ಮರಳಲು ನಿರಾಕರಿಸಿದ ವ್ಯಕ್ತಿ

ಭಾರತೀಯಳಲ್ಲದ ನನ್ನ ಗರ್ಭಿಣಿ ಹೆಂಡತಿಯನ್ನು ಯುದ್ಧ ಪೀಡಿತ ದೇಶದಿಂದ ಸ್ಥಳಾಂತರಿಸಲಾಗುವುದಿಲ್ಲ. ಹಾಗಾಗಿ ನಾನು ಭಾರತಕ್ಕೆ ಮರಳುವುದಿಲ್ಲ ಎಂದು ಗಗನ್ ಎಂಬ ವ್ಯಕ್ತಿ ಹೇಳಿದ್ದಾರೆ.

ಗರ್ಭಿಣಿ ಪತ್ನಿಯನ್ನು ಉಕ್ರೇನ್​​ನಲ್ಲಿ ಬಿಟ್ಟು ಬರಲಾರೆ: ಭಾರತಕ್ಕೆ ಮರಳಲು ನಿರಾಕರಿಸಿದ ವ್ಯಕ್ತಿ
ಗಗನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 10:11 PM

ಉಕ್ರೇನ್‌ನಲ್ಲಿರುವ (Ukraine) ಭಾರತೀಯ ವ್ಯಕ್ತಿಯೊಬ್ಬರು ಆಪರೇಷನ್ ಗಂಗಾ (Operation Ganga) ಅಡಿಯಲ್ಲಿ ತಾಯ್ನಾಡಿಗೆ ಮರಳಲು ನಿರಾಕರಿಸಿದ್ದಾರೆ. ಭಾರತೀಯಳಲ್ಲದ ನನ್ನ ಗರ್ಭಿಣಿ ಹೆಂಡತಿಯನ್ನು ಯುದ್ಧ ಪೀಡಿತ ದೇಶದಿಂದ ಸ್ಥಳಾಂತರಿಸಲಾಗುವುದಿಲ್ಲ. ಹಾಗಾಗಿ ನಾನು ಭಾರತಕ್ಕೆ ಮರಳುವುದಿಲ್ಲ ಎಂದು ಗಗನ್ ಎಂಬ ವ್ಯಕ್ತಿ ಹೇಳಿದ್ದಾರೆ. ಉಕ್ರೇನ್ ರಾಜಧಾನಿ ಕೀವ್​​ನಿಂದ ಪಲಾಯನ ಮಾಡಿರುವ ಗಗನ್, ತನ್ನ ಕುಟುಂಬ ಮತ್ತು ಎಂಟು ತಿಂಗಳ ಗರ್ಭಿಣಿಯಾಗಿರುವ ಪತ್ನಿಯನ್ನು ಉಕ್ರೇನ್‌ನಲ್ಲಿ ಬಿಡಲು ಸಾಧ್ಯವಿಲ್ಲ. “ನಾವು ಪೋಲೆಂಡ್‌ಗೆ ಹೋಗುತ್ತೇವೆ. ನಾವು ಪ್ರಸ್ತುತ ಲಿವಿವ್​​​ನಲ್ಲಿರುವ ಸ್ನೇಹಿತರ ಸ್ಥಳದಲ್ಲಿ ಇದ್ದೇವೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.  ಫೆಬ್ರವರಿ 26 ರಂದು ಭಾರತವು ಆಪರೇಷನ್ ಗಂಗಾವನ್ನು ಪ್ರಾರಂಭಿಸಿತು. ಉಕ್ರೇನಿಯನ್ ಸರ್ಕಾರವು ನಾಗರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಭಾರತೀಯರನ್ನು ಅಲ್ಲಿಂದ ನೇರ ಸ್ಥಳಾಂತರಿಸುವುದು ಅಸಾಧ್ಯವಾಯಿತು ಭಾರತೀಯರು ಭೂ ಮಾರ್ಗಗಳ ಮೂಲಕ ಪೋಲೆಂಡ್, ರೊಮೇನಿಯಾ, ಸ್ಲೋವಾಕಿಯಾ, ಹಂಗೇರಿ ಮತ್ತು ಮೊಲ್ಡೊವಾ ದೇಶಗಳಿಗೆ ಪ್ರಯಾಣಿಸುವಂತೆ ಹೇಳಿದ್ದು ಅಲ್ಲಿಂದ ಭಾರತಕ್ಕೆ ಕರೆ ತರಲಾಗಿದೆ.  ಈ ದೇಶಗಳು ಮತ್ತು ಇತರ ಹತ್ತಿರದ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಯುಕ್ರೇನ್‌ನ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ, ಇದು ಯುದ್ಧದ ಹಿಡಿತದ ದೇಶದಿಂದ ಪ್ರಜೆಗಳಿಗೆ ದಾಟಲು ಅನುಕೂಲವಾಗುತ್ತದೆ.

ಏರ್ ಇಂಡಿಯಾ ಮತ್ತು ಭಾರತೀಯ ವಾಯುಪಡೆ ವಿಮಾನಗಳು ಭಾರತೀಯರನ್ನು ತಾಯ್ನಾಡಿಗೆ ಕರೆ ತರುತ್ತಿವೆ ಭಾರತವು 76 ವಿಮಾನಗಳಲ್ಲಿ 15,920 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಭಾನುವಾರ ಟ್ವೀಟ್ ಮಾಡಿದ್ದಾರೆ. ಇವುಗಳಲ್ಲಿ, 31 ವಿಮಾನಗಳಲ್ಲಿ 6,680 ರೊಮೇನಿಯಾದಿಂದ, 5,300 ಹಂಗೇರಿಯಿಂದ 26 ವಿಮಾನಗಳಲ್ಲಿ, 2,822 ಪೋಲೆಂಡ್‌ನಿಂದ 13 ವಿಮಾನಗಳಲ್ಲಿ ಮತ್ತು 1,118 ಮಂದಿ ಸ್ಲೋವಾಕಿಯಾದಿಂದ ಆರು ವಿಮಾನಗಳಲ್ಲಿ ಬಂದಿದ್ದಾರೆ.

ಇದನ್ನೂ ಓದಿ: ಬುಡಾಪೆಸ್ಟ್ ಹೋಟೆಲ್‌ನಿಂದ 30 ಮಂದಿಯ ತಂಡ ಆಪರೇಷನ್ ಗಂಗಾಗೆ ಸಹಕರಿಸುತ್ತಿರುವುದು ಹೇಗೆ? ಇಲ್ಲಿದೆ ಮಾಹಿತಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ