ನೀವು ಯುದ್ಧ ಮಾಡಿ, ಜತೆಗೆ ನಾವಿದ್ದೇವೆ ಎಂಬ ಘೋಷಣೆ ಕೂಗಿ ರಷ್ಯಾವನ್ನು ಬೆಂಬಲಿಸಿ ಮೆರವಣಿಗೆ ನಡೆಸಿದ ಹಿಂದೂ ಸೇನಾ

ನಮ್ಮ ನಾಗರಿಕರನ್ನು ರಕ್ಷಿಸಿ ಮತ್ತು ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ನಮ್ಮ ಪರಮಾಣು ಕಾರ್ಯಕ್ರಮದ ವಿರುದ್ಧ ಮತ ಚಲಾಯಿಸಿದ ಫ್ಯಾಸಿಸ್ಟ್, ಜನಾಂಗೀಯ ಉಕ್ರೇನ್ ವಿರುದ್ಧ ರಷ್ಯಾವನ್ನು ಬೆಂಬಲಿಸುತ್ತೇವೆ ಎಂದ ಹಿಂದೂ ಸೇನಾ.

ನೀವು ಯುದ್ಧ ಮಾಡಿ, ಜತೆಗೆ ನಾವಿದ್ದೇವೆ ಎಂಬ ಘೋಷಣೆ ಕೂಗಿ ರಷ್ಯಾವನ್ನು ಬೆಂಬಲಿಸಿ ಮೆರವಣಿಗೆ ನಡೆಸಿದ ಹಿಂದೂ ಸೇನಾ
ಹಿಂದೂ ಸೇನಾ ನಡೆಸಿದ ಮೆರವಣಿಗೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 7:44 PM

ದೆಹಲಿ: ಬಲಪಂಥೀಯ ಸಂಘಟನೆಯಾದ ಹಿಂದೂ ಸೇನಾದ (Hindu Sena) ಸ್ವಯಂಸೇವಕರು ಭಾನುವಾರ ಮಧ್ಯ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ರಷ್ಯಾವನ್ನು(Russia) ಬೆಂಬಲಿಸುವ ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಿದರು.‘ರಷ್ಯಾ ತುಮ್ ಸಂಘರ್ಷ್ ಕರೋ, ಹಮ್ ತುಮ್ಹಾರೆ ಸಾಥ್ ಹೈ (ರಷ್ಯಾ ನೀವು ಯುದ್ಧಮಾಡಿ, ನಾವು ನಿಮ್ಮೊಂದಿಗೆ ಇದ್ದೇವೆ)’, ‘ಭಾರತ್ ಮಾತಾ ಕಿ ಜೈ’, ‘ಭಾರತ್-ರಷ್ಯಾ ದೋಸ್ತಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ಸ್ವಯಂಸೇವಕರು ಸುಮಾರು ಒಂದು ಗಂಟೆ ಕಾಲ ಮೆರವಣಿಗೆ ನಡೆಸಿದರು.  ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಮಾತನಾಡಿ, “ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕೃತ ನಿಲುವಿನ ಬಗ್ಗೆ ಹೇಳುವುದಿಲ್ಲ, ಭಾರತವು ಗೈರುಹಾಜರಾಗುವುದಕ್ಕಿಂತ ಹೆಚ್ಚಾಗಿ ರಷ್ಯಾ ಪರವಾಗಿ ಮತ ಚಲಾಯಿಸಿ ನಮ್ಮ ಬೂಟುಗಳನ್ನು ನೆಲದ ಮೇಲೆ ಇಡಬೇಕಿತ್ತು ಎಂದು ನಾವು ವೈಯಕ್ತಿಕವಾಗಿ ಭಾವಿಸುತ್ತೇವೆ. ನಮ್ಮ ನಾಗರಿಕರನ್ನು ರಕ್ಷಿಸಿ ಮತ್ತು ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ನಮ್ಮ ಪರಮಾಣು ಕಾರ್ಯಕ್ರಮದ ವಿರುದ್ಧ ಮತ ಚಲಾಯಿಸಿದ ಫ್ಯಾಸಿಸ್ಟ್, ಜನಾಂಗೀಯ ಉಕ್ರೇನ್ ವಿರುದ್ಧ ರಷ್ಯಾವನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.  “ಯಾವುದೇ ಯುದ್ಧ ಒಳ್ಳೆಯದಲ್ಲ, ಆದರೆ ನಾವು ಒಳ್ಳೆಯದು ಮತ್ತು ಉತ್ತಮವಾದವುಗಳ ನಡುವೆ ಆಯ್ಕೆ ಮಾಡಬೇಕಾದರೆ, ನಾವು ರಷ್ಯಾದ ಬೆಂಬಲಕ್ಕೆ ನಿಲ್ಲುತ್ತೇವೆ, ಏಕೆಂದರೆ ರಷ್ಯಾ ಯಾವಾಗಲೂ ಭಾರತದ ನಿಜವಾದ ಸ್ನೇಹಿತ” ಎಂದು ಅವರು ಹೇಳಿದರು. ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದ ಕಾರಣ ಒಂದು ಪೊಲೀಸರು ಅವರನ್ನು ಚದುರಿಸಿದರು.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮತ್ತು “ಅಖಂಡ ರಷ್ಯಾ”ಕ್ಕೆ ಬೆಂಬಲವನ್ನು ಘೋಷಿಸುವ ಮೂಲಕ ಹಿಂದೂ ಸೇನಾ ಈ ಹಿಂದೆ ನವದೆಹಲಿಯ ಮಂಡಿ ಹೌಸ್‌ನಲ್ಲಿರುವ ರಷ್ಯಾದ ಬರಹಗಾರ ಅಲೆಕ್ಸಾಂಡರ್ ಪುಷ್ಕಿನ್ ಅವರ ಪ್ರತಿಮೆಯ ಮೇಲೆ ಪೋಸ್ಟರ್‌ಗಳನ್ನು ಹಾಕಿತ್ತು.

ಇದನ್ನೂ ಓದಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಿದ್ದು ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ: ಅಮಿತ್ ಶಾ