ಗನ್ ಹಿಡಿದೇ ಗೊತ್ತಿಲ್ಲದ ಉಕ್ರೇನ್​​ನ ಪುರುಷರಿಗೆ ಗನ್ ಬಳಕೆ ಬಗ್ಗೆ ಕ್ರ್ಯಾಶ್ ಕೋರ್ಸ್

ರಷ್ಯಾದ ಸೈನಿಕರನ್ನು ಹೋರಾಡಲು ಮತ್ತು ಕೊಲ್ಲಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ಸೆಂಕಿವ್ "ನಾನು ಸಿದ್ಧನಾಗುವುದಿಲ್ಲ, ಆದರೆ ನಾನು ಅದನ್ನು ಮಾಡುತ್ತೇನೆ ಎಂದು ಹೇಳುತ್ತಾರೆ. 

ಗನ್ ಹಿಡಿದೇ ಗೊತ್ತಿಲ್ಲದ ಉಕ್ರೇನ್​​ನ ಪುರುಷರಿಗೆ ಗನ್ ಬಳಕೆ ಬಗ್ಗೆ ಕ್ರ್ಯಾಶ್ ಕೋರ್ಸ್
ಗನ್ ಬಳಕೆ ಬಗ್ಗೆ ತರಬೇತಿ ಪಡೆಯುತ್ತಿರುವ ಉಕ್ರೇನ್​​ನ ಪುರುಷರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 06, 2022 | 8:44 PM

ಲಿವಿವ್: ರಷ್ಯಾ (Russia) ಉಕ್ರೇನ್ (Ukraine) ಮೇಲೆ ಆಕ್ರಮಣವನ್ನು ಪ್ರಾರಂಭಿಸುವ ಮೊದಲು, ಆಂಡ್ರಿ ಸೆಂಕಿವ್ ಅವರು ಕ್ರೀಡೆಯ ಬಗ್ಗೆ ಬ್ಲಾಗ್ ಬರೆಯುತ್ತಿದ್ದರು. ಶಾಂತಿಪ್ರಿಯರಾದ ಅವರು ಜೀವನದಲ್ಲಿ ಎಂದಿಗೂ ಬಂದೂಕು ಹಿಡಿದಿರಲಿಲ್ಲ. ಹನ್ನೊಂದು ದಿನಗಳ ನಂತರ, 27 ವರ್ಷದ ಉಕ್ರೇನಿಯನ್ ಪಶ್ಚಿಮ ನಗರವಾದ ಲಿವಿವ್‌ನಲ್ಲಿ 30 ಇತರ ಪುರುಷರೊಂದಿಗೆ ಆಕ್ರಮಣಕಾರಿ ರೈಫಲ್ ಅನ್ನು ಹೇಗೆ ನಿರ್ವಹಿಸಬೇಕೆಂದು ಅವರು ಕಲಿಯುತ್ತಿದ್ದಾರೆ.  ಇವರ ಜತೆ  ವ್ಯಾಪಾರಿಗಳು, ಐಟಿ ತಜ್ಞರು, ಬಾಣಸಿಗ ಮತ್ತು ಫುಟ್ಬಾಲ್ ಆಟಗಾರರೂ ಇದ್ದಾರೆ. “21 ನೇ ಶತಮಾನದಲ್ಲಿ, ಬಹಳ ಹಿಂದೆಯೇ ನಾಶವಾಗಬೇಕಾದ ಕೌಶಲ್ಯಗಳು ಮತ್ತೆ ಹೆಚ್ಚಿನ ಬೇಡಿಕೆಯಲ್ಲಿವೆ ಎಂಬುದು ತುಂಬಾ ಭಯಾನಕವಾಗಿದೆ” ಎಂದು ಸೆಂಕಿವ್ ಹೇಳುತ್ತಾರೆ.  ರಷ್ಯಾ ಫೆಬ್ರವರಿ 24 ರಂದು ಉಕ್ರೇನ್ ಮೇಲೆ ಪ್ರಾರಂಭಿಸಿದ ದಾಳಿಯನ್ನು “ವಿಶೇಷ ಮಿಲಿಟರಿ ಕಾರ್ಯಾಚರಣೆ” ಎಂದು ಕರೆಯುತ್ತದೆ. ಅದೇ ವೇಳೆ ನ್ಯಾಟೋ ಮತ್ತು ಯುರೋಪಿಯನ್ ಒಕ್ಕೂಟದ ಸದಸ್ಯತ್ವವನ್ನು ಬಯಸುತ್ತಿರುವ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದೆ.  ರಷ್ಯಾದ ಸೈನಿಕರನ್ನು ಹೋರಾಡಲು ಮತ್ತು ಕೊಲ್ಲಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ಸೆಂಕಿವ್ “ನಾನು ಸಿದ್ಧನಾಗುವುದಿಲ್ಲ, ಆದರೆ ನಾನು ಅದನ್ನು ಮಾಡುತ್ತೇನೆ ಎಂದು ಹೇಳುತ್ತಾರೆ.  ಸೋವಿಯತ್ ಯುಗದಲ್ಲಿ ಪ್ರಚಾರದ ಚಲನಚಿತ್ರಗಳನ್ನು ಪ್ರದರ್ಶಿಸುವ ಹಿಂದಿನ ರಷ್ಯಾದ ಸಾಂಸ್ಕೃತಿಕ ಕೇಂದ್ರದಲ್ಲಿ ಪಶ್ಚಿಮ ನಗರವಾದ ಲಿವಿವ್ ನಲ್ಲಿ ತರಬೇತಿ ನಡೆಯಿತು.

ಇಂದು ಆ ಕಟ್ಟಡವನ್ನು ವಾರಿಯರ್ಸ್ ಹೌಸ್ ಎಂದು ಕರೆಯಲಾಗುತ್ತದೆ. ಅದರ ಗೋಡೆಗಳಲ್ಲಿ 2014 ರಲ್ಲಿ ಪೂರ್ವ ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡಿದ ಉಕ್ರೇನಿಯನ್ ಸೈನಿಕರ ಭಾವಚಿತ್ರಗಳನ್ನು ನೇತುಹಾಕಲಾಗಿದೆ.  ತರಬೇತುದಾರ ಡೆನ್ನಿಸ್ ಕೊಹುಟ್, ಡಾನ್‌ಬಾಸ್‌ನಲ್ಲಿ ಹೋರಾಡಿದ್ದು ಈಗ ಅಗ್ನಿಶಾಮಕ ದಳದವರಾಗಿದ್ದಾರೆ.

ಅವರು ಮೂರು ಆಕ್ರಮಣಕಾರಿ ರೈಫಲ್‌ಗಳನ್ನು ಮೇಜಿನ ಮೇಲೆ ಇಡುವ ಮೂಲಕ ತರಬೇತಿ ಪ್ರಾರಂಭಿಸಿದರು ಮತ್ತು ಅದು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ಅವರು ವಾರದ ಪ್ರಾಥಮಿಕ ತರಬೇತಿಯನ್ನು ಒಂದೇ ದಿನದಲ್ಲಿ ಮುಗಿಸಲು ಬಯಸಿದ್ದರು.

“ಈ ಕೊಠಡಿಯಲ್ಲಿರುವ 10 ಪುರುಷರು ಸಹ ಬಂದೂಕು ಎತ್ತಿಕೊಂಡು ರಷ್ಯಾದ ಸೈನಿಕರನ್ನು ಶೂಟ್ ಮಾಡಿದರೆ, ತರಬೇತಿ ಪೂರ್ಣವಾದಂತೆ” ಎಂದು ಅವರು ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ತಿಳಿಸಿದರು.

ತನ್ನ ರೈಫಲ್ ಅನ್ನು ಮೇಲಕ್ಕೆತ್ತಿ, ಕೊಹುಟ್ ಸ್ವಯಂಸೇವಕರಿಗೆ ಸರಿಯಾಗಿ ನಿಲ್ಲುವುದು ಹೇಗೆ ಎಂದು ತೋರಿಸಿದರು. “ನಿಮ್ಮ ಉಪಕರಣವು ನಿಜವಾಗಿಯೂ ಭಾರವಾಗಿದೆ ಮತ್ತು ನೀವು ಶೂಟಿಂಗ್ ಪ್ರಾರಂಭಿಸಿದಾಗ ನೀವು ಬೀಳಬಹುದು” ಎಂದು ಅವರು ಹೇಳಿದರು.

“ತಮ್ಮನ್ನು ಅಥವಾ ನಮ್ಮ ಸೈನಿಕರನ್ನು ಹೇಗೆ ಶೂಟ್ ಮಾಡಬಾರದು” ಎಂದು ಸ್ವಯಂಸೇವಕರಿಗೆ ಕಲಿಸಲು ಬಯಸುವುದಾಗಿ ಕೊಹುಟ್ ಹೇಳಿದರು. ಒಳಬರುವ ಶೆಲ್‌ನ ಧ್ವನಿಯನ್ನು ಅನುಕರಿಸಲು ಕೊಹುಟ್ ಶಿಳ್ಳೆ ಹೊಡೆಯುವುದರೊಂದಿಗೆ ಸ್ವಯಂಸೇವಕರು ಸ್ಫೋಟದ ಸಮಯದಲ್ಲಿ ಮಲಗುವುದು ಮತ್ತು ತಮ್ಮ ತಲೆಯನ್ನು ಹೇಗೆ ರಕ್ಷಿಸಿಕೊಳ್ಳುಬೇಕು ಎಂಬುದನ್ನು ಕಲಿಸಿದರು.

ನ್ಯಾಷನಲ್ ಗಾರ್ಡ್ ಆಫ್ ಉಕ್ರೇನ್ ಪ್ರಕಾರ, ರಷ್ಯಾ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 100,000 ಕ್ಕೂ ಹೆಚ್ಚು ಉಕ್ರೇನಿಯನ್ ಪುರುಷರು ಹೋರಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಕೆಲವು ಮಿಲಿಟರಿ ತರಬೇತಿಯನ್ನು ಪಡೆದ ಐಟಿ ಪ್ರಾಜೆಕ್ಟ್ ಮ್ಯಾನೇಜರ್ ಯಾರೋಸ್ಲಾವ್ ದುರ್ದಾ, 37, ರಾಜತಾಂತ್ರಿಕತೆ ಅಥವಾ ನ್ಯಾಟೋ ನೊ-ಫ್ಲೈ ಜೋನ್ ರಷ್ಯಾದ ಮುನ್ನಡೆಯನ್ನು ತಡೆಯಬಹುದು ಎಂದು ಇನ್ನೂ ಆಶಿಸುತ್ತಿದ್ದರು.

ಆದಾಗ್ಯೂ, ಯುದ್ಧ ಮುಂದುವರಿದರೆ  ದುರ್ದಾ ತನ್ನ ಹೆಂಡತಿ ಮತ್ತು 8 ವರ್ಷದ ಮಗಳನ್ನು ಬಿಟ್ಟು ಯುದ್ಧಭೂಮಿಗೆ ಹೋಗುವುದಾಗಿ ಹೇಳಿದರು. ಇದು ನಮ್ಮ ಭೂಮಿಯಾಗಿದ್ದು, ಅದನ್ನು ರಕ್ಷಿಸಬೇಕು ಅಂತಾರೆ ಅವರು.

ಇದನ್ನೂ ಓದಿ:ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ: ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್