Womans Day : ಶೈಕ್ಷಣಿಕ ಕ್ಷೇತ್ರದಲ್ಲಿ 16 ಚಿನ್ನದ ಪದಕ ಗೆದ್ದ ರಾಯಚೂರಿನ ವಿದ್ಯಾರ್ಥಿನಿ… ಆದರೆ
ರಾಯಚೂರಿನ ಎಸ್ ಎಲ್ ಎನ್ ಕಾಲೇಜಿನ ಬಿಇ ಸಿವಿಲ್ ಇಜಿನಿಯರಿಂಗ್ ವಿದ್ಯಾರ್ಥಿನಿ ಬುಶ್ರಾ ಮತೀನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ಹಿಜಾಬ್…….. ಹಿಜಾಬ್ …. ಪ್ರಪಂಚವೇ ಕರ್ನಾಟಕವನ್ನು ನೋಡುವ ಮಟ್ಟಿಗೆ ಸುದ್ದಿಯಾಗಿರುವ ವಿಚಾರ, ಕರ್ನಾಟಕದಲ್ಲಿ ಈ ವಿವಾದ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಇಂದಿಗೂ ಹಿಜಾಬ್ ಪ್ರಕರಣ ಚರ್ಚೆಯಲ್ಲಿದೆ. ಹಿಜಾಬ್ ಎಂಬ ವಿವಾದ ಇದೀಗ ಧರ್ಮ ವಿಚಾರಕ್ಕೆ ತಿರುಗಿ ನಿಂತಿದೆ. ವಿದ್ಯಾಸಂಸ್ಥೆಗಳಲ್ಲಿ ಇದೀಗ ಧರ್ಮದ ವಿಚಾರಕ್ಕಾಗಿ ರಣರಂಗವಾಗಿದೆ. ಸಮಾಜದಲ್ಲಿ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಧಾರ್ಮಿಕ ವಿಚಾರವಾಗಿ ಅನೇಕ ಕಹಿ ಘಟನೆಗಳು ನಡೆದು ಹೋಗಿದೆ. ಸರ್ಕಾರವು ಅನೇಕ ಕಾನೂನತ್ಮಕ ವಿಚಾರವನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಹೇಳಿಕೊಂಡಿದೆ. ಹಿಜಾಬ್ ವಿಚಾರವಾಗಿ ಹೈಕೋರ್ಟ್ ಕೂಡ ಕೆಲವೊಂದು ಚರ್ಚೆಗಳನ್ನು ನಡೆಸಿದೆ. ಕರ್ನಾಟಕದ ಹಿಜಾಬ್ ವಿಚಾರ ಇದೀಗ ಟ್ರೋಲ್ ವಾರ್ ಗೆ ವೇದಿಕೆಯಾಗುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ನೀಡುತ್ತಿರುವ ಹೇಳಿಕೆಗಳು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ಟ್ರೋಲ್ ಪೇಜ್ ಗಳ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ವಿರುದ್ಧವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಇದಕ್ಕೆ ಪೂರಕವಾಗಿ ರಾಯಚೂರಿನ ಎಸ್ ಎಲ್ ಎನ್ ಕಾಲೇಜಿನ ಬಿಇ ಸಿವಿಲ್ ಇಜಿನಿಯರಿಂಗ್ ವಿದ್ಯಾರ್ಥಿನಿ ಬುಶ್ರಾ ಮತೀನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ. ಹಿಜಾಬ್ ವಿಚಾರವಾಗಿ ಬುಶ್ರಾ ಮತೀನ್ ನ್ನು ಟ್ರೋಲ್ ಮಾಡಲಾಗಿದೆ. ಟ್ರೋಲ್ ಪೇಜ್ ಗಳು ನಮ್ಮಂತಹ ವಿದ್ಯಾರ್ಥಿಗಳಿಗೆ ಈ ರೀತಿಯ ಮಾಡಬಾರದು, ನಾನು ಏನು ತಪ್ಪು ಮಾಡಿದೆ ಎಂದು ಟ್ರೋಲ್ ಪೇಜ್ ಗಳಿಗೆ ಬುಶ್ರಾ ಮತೀನ್ ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಹಿಜಾಬ್ ರಾಕ್ಸ್ ಎಂಬ ಟ್ರೋಲ್ ಪೇಜ್ ಬುಶ್ರಾ ಮತೀನ್ ಅವರ ಸಾಧನೆಗೆ ಪೂರಕವಾಗಿ ಟ್ರೋಲ್ ಮಾಡಿದ್ದಾರೆ. ಬುಶ್ರಾ ಮತೀನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವ ಬ್ರುಶಾ ಮತೀನ್ ಒಟ್ಟು 16 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಬುಶ್ರಾ ಮತೀನ್ ಮಾಡಿದ ಸಾಧನೆ ಗೊತ್ತಾ?
ಬುಶ್ರಾ ಮತೀನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಮುನ್ನ ಅವರ ಸಾಧನೆ ಹಾದಿಯನ್ನು ತಿಳಿದುಕೊಳ್ಳಬೇಕು ಎನ್ನುವಂತಿದೆ. ಆದರೆ ಅವರ ಸಾಧನೆಯ ಇತಿಹಾಸವನ್ನು ನೋಡಿದ್ದರೆ, ಈಕೆಯ ಸಾಧನೆಗೆ ಟ್ರೋಲ್ ಪೇಜ್ ಗಳು ಶಬ್ಬಾಷ್ ಎನ್ನಬಹುದು, ಹೌದು ಬುಶ್ರಾ ಅವರ ಈ ಸಾಧನೆಯ ಬಗ್ಗೆ ಹಿಜಾಬ್ ರಾಕ್ಸ್ ಎಂಬ ಟ್ರೋಲ್ ಮಾಡಿದೆ. ಬುಶ್ರಾ ಮತೀನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ನೋಡಿದರೆ ನೀವು ಅಚ್ಚರಿ ಪಡುವುದು ಖಂಡಿತ. ಹೌದು ಬುಶ್ರಾ ಮತೀನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ರಾಯಚೂರಿನ ಎಸ್ ಎಲ್ ಎನ್ ಕಾಲೇಜಿನ ಬಿಇ ಸಿವಿಲ್ ಇಜಿನಿಯರಿಂಗ್ ಮಾಡುತ್ತಿರುವ ರಾಯಚೂರಿನ ವಿದ್ಯಾರ್ಥಿನಿ ಬುಶ್ರಾ ಮತೀನ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕಾ ಮಹಾವಿದ್ಯಾಲಯ 21ನೇ ಘಟಕೋತ್ಸವದಲ್ಲಿ ಈ ಚಿನ್ನದ ಪದಕಗಳನ್ನು ಸ್ವೀಕರಿಸಿದ್ದಾರೆ. ಇದು ವಿಟಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಸಾಧನೆಯನ್ನು ಬುಶ್ರಾ ಮತೀನ್ ಮಾಡಿದ್ದಾರೆ.
ಬುಶ್ರಾ ಮತೀನ್ ನ್ನು ಟ್ರೋಲ್ ಮಾಡಿದ್ದು ಯಾಕೆ ?
ಹಿಜಾಬ್ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ. ಪರ – ವಿರೋಧ ಮಾತುಗಳು ಕೇಳಿ ಬರುತ್ತಿದೆ. ಹಿಜಾಬ್ ಈಗ ಧರ್ಮ ವಿವಾದದ ಹೊಣೆಯನ್ನು ಹೊತ್ತಿದೆ. ಈ ವಿವಾದ ಕೋಟ್ ಅಂಗಳದಲ್ಲಿ ಚರ್ಚೆಯಲ್ಲಿದೆ. ಹಿಜಾಬ್ ವಿಚಾರದಲ್ಲಿ ಬುಶ್ರಾ ಮತೀನ್ ಅವರನ್ನು ಕೂಡ ಟ್ರೋಲ್ ಮಾಡಲಾಗಿದೆ. ಹೌದು ನಾವು ಭಾರತೀಯರು, ನೀವು ಮಾಸ್ಕ್ ಯಾಕೆ ಹಾಕ್ತೀರ ನಾವು ಕೂಡ ಅದಕ್ಕೆ ನಮ್ಮ ದೇಹ ರಕ್ಷಣೆಗೆ ಹಿಜಾಬ್ ಹಾಕುತ್ತೇವೆ, ನಾವು ಪಾಕಿಸ್ತಾನಕ್ಕೆ ಹೋಗಿ ಅಂತರೆ, ಪಾಕಿಸ್ತಾನ ಏನು ಅವರ ಅಪ್ಪನ್ನದ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು, ಈ ಬಗ್ಗೆ ಹಿಜಾಬ್ ವಿಚಾರದಲ್ಲಿ ಹಿಂದುಳಿದ ಜಿಲ್ಲೆ ಎಂದು ಬಿಂಬಿತವಾಗಿರುವ ರಾಯಚೂರಿನಲ್ಲಿ ವಿದ್ಯಾರ್ಥಿನಿ ರಾಜ್ಯಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದ ಬ್ರುಶಾ ಮತೀನ್ ಹಿಜಾಬ್ ರಾಕ್ಸ್ ಎಂಬ ಟ್ರೋಲ್ ಪೇಜ್ ಅವರ ಸಾಧನೆಯ ಬಗ್ಗೆ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಬ್ರುಶಾ ಮತೀನ್ ಅವರ ಈ ಸಾಧನೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಅವರ ಮನೆಯವರು ಬೇಸರಗೊಂಡಿದ್ದಾರೆ.