ತುಮಕೂರಿನಲ್ಲಿ ರೈತರ ಮನವಿಗೆ ಬಗ್ಗದೆ ಫಸಲು ನೀಡುತ್ತಿದ್ದ ಅಡಕೆ, ತೆಂಗಿನ ಮರಗಳನ್ನ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು

ತುಮಕೂರಿನಲ್ಲಿ ರೈತರ ಮನವಿಗೆ ಬಗ್ಗದೆ ಫಸಲು ನೀಡುತ್ತಿದ್ದ ಅಡಕೆ, ತೆಂಗಿನ ಮರಗಳನ್ನ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು
ಕೃಷಿ ಭೂಮಿಯನ್ನು ತೆರವು ಮಾಡದಂತೆ ಅಧಿಕಾರಿಗಳಿಗೆ ಅಡ್ಡ ಬಂದ ರೈತ ಕುಟುಂಬ

ಶಾರದಮ್ಮ ಎಂಬುವವರು ಅಡಕೆ, ತೆಂಗು ಬೆಳೆದಿದ್ದರು. ಆದರೆ ರೈತರಿಗೆ ಸೇರಿದ್ದ ಭೂಮಿಯನ್ನ ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೋಲಿಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

TV9kannada Web Team

| Edited By: sandhya thejappa

Mar 07, 2022 | 9:03 AM

ತುಮಕೂರು: ರೈತರಿಗೆ (Farmers) ಯಾವುದೇ ನೋಟಿಸ್ ನೀಡದೆ ಅಧಿಕಾರಿಗಳು ಏಕಾಏಕಿ ಕೃಷಿ ಭೂಮಿಯನ್ನು ತೆರವು ಮಾಡಿಸಿದ ಘಟನೆ ತುಮಕೂರು (Tumkur) ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನಘಟ್ಟದಲ್ಲಿ ನಡೆದಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ಭಾನುವಾರ ಸಂಜೆ ಏಕಾಏಕಿ ನೂರಕ್ಕೂ ಹೆಚ್ಚು ಅಡಕೆ, ತೆಂಗು ಮರಗಳನ್ನ ತೆರವು ಮಾಡಿಸಿದ್ದಾರೆ. ರೈತರು ಭೂಮಿ ತಮಗೆ ಸೇರಿದ್ದಾಗಿ ದಾಖಲೆಗಳನ್ನ ತೋರಿಸಿದ್ದರು. ಅಲ್ಲದೆ ಅಡಕೆ, ತೆಂಗು ಮರ ತೆರವು ಮಾಡದಂತೆ ಮನವಿ ಮಾಡಿದ್ದರು. ಆದರೆ ಯಾವುದನ್ನೂ ಲೆಕ್ಕಿಸದೆ ನಿನ್ನೆ ಸಂಜೆ ಏಕಾಏಕಿ ತೆರವು ಕಾರ್ಯ ನಡೆಸಿದ್ದಾರೆ.

ಗ್ರಾಮದ ಶಾರದಮ್ಮ ಎಂಬುವವರು ಅಡಕೆ, ತೆಂಗು ಬೆಳೆದಿದ್ದರು. ಆದರೆ ರೈತರಿಗೆ ಸೇರಿದ್ದ ಭೂಮಿಯನ್ನ ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೋಲಿಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ರೈತ ಮಹಿಳೆ ಶಾರದಮ್ಮ ಕೋರ್ಟ್ಗೆ ಅಫೀಲು ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೊರಿಸುತ್ತೇವೆ ಎಂದರೂ ಅಧಿಕಾರಿಗಳು ಬೀಡಲಿಲ್ಲ. ಇದೊಂದು ಉದ್ದೇಶ ಪೂರ್ವಕವಾಗಿ ನಡೆದ ಕೃತ್ಯ ಅಂತ ರೈತ ಕುಟುಂಬ ಗಂಭೀರ ಆರೋಪ ಮಾಡುತ್ತಿದೆ.

ಆಕಸ್ಮಿಕ ಬೆಂಕಿ ತಗುಲಿ‌ ಸುಟ್ಟು ಕರಕಲಾದ ಅಂಗಡಿ: ಮೈಸೂರು: ಆಕಸ್ಮಿಕ ಬೆಂಕಿ ತಗುಲಿ‌ ಪೆಟ್ಟಿ ಅಂಗಡಿ ಕರಕಲಾಗಿದೆ. ಈ ಘಟನೆ ಮೈಸೂರು ಕುವೆಂಪುನಗರದ ಕೆ ಬ್ಲಾಕ್​ನಲ್ಲಿ ನಡೆದಿದೆ. ಗಾನಭಾರತಿ ವೀಣೆ ಶೇಷಣ್ಣ ಹಿಂಭಾಗದ ಬಟ್ಟೆ ಐರನ್ ಅಂಗಡಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ಮೂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಸದ್ಯ ಈ ಪ್ರಕರಣ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ

Russia-Ukraine War Live: ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಬದಲಾದ ಪೋಷಕರ ಮನಸ್ಥಿತಿ; ಸ್ವದೇಶದಲ್ಲೇ ಶಿಕ್ಷಣಕ್ಕೆ ಆಗ್ರಹ

ಗರ್ಭಿಣಿ ಪತ್ನಿಯನ್ನು ಉಕ್ರೇನ್​​ನಲ್ಲಿ ಬಿಟ್ಟು ಬರಲಾರೆ: ಭಾರತಕ್ಕೆ ಮರಳಲು ನಿರಾಕರಿಸಿದ ವ್ಯಕ್ತಿ

Follow us on

Related Stories

Most Read Stories

Click on your DTH Provider to Add TV9 Kannada