JCB: ಜೆಸಿಬಿ ಹಾಗೂ ಕ್ರೇನ್ ಯಾವಾಗಲೂ ಹಳದಿ ಬಣ್ಣದಲ್ಲಿ ಇರಲು ಕಾರಣವೇನು? ಕುತೂಹಲಕಾರಿ ಮಾಹಿತಿ ಇಲ್ಲಿದೆ

JCB: ಜೆಸಿಬಿ, ಕ್ರೇನ್ ಹಾಗೂ ಇತರ ಯಂತ್ರಗಳು ಯಾವಾಗಲೂ ಹಳದಿ ಬಣ್ಣದಲ್ಲಿ ಇರುತ್ತವೆ. ಇದರ ಹಿಂದಿನ ಕಾರಣವೇನು? ಜೆಸಿಬಿ ಯಂತ್ರದ ನಿಜವಾದ ಹೆಸರೇನು? ಇತ್ಯಾದಿ ಕುತೂಹಲಕಾರಿ ಮಾಹಿತಿ ಇಲ್ಲಿ ನೀಡಲಾಗಿದೆ.

TV9 Web
| Updated By: ganapathi bhat

Updated on: Feb 20, 2022 | 9:23 AM

ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ ಯಂತ್ರಗಳನ್ನು ಬಳಸುತ್ತಾರೆ. ಈ ಎಲ್ಲಾ ಯಂತ್ರಗಳು ಹಳದಿ ಬಣ್ಣದವು. ಇದು ಏಕೆ ಹೀಗಿರುತ್ತದೆ? ಈ ಯಂತ್ರಗಳು ಯಾಕೆ ಹಳದಿ ಬಣ್ಣದಲ್ಲಿ ಇರುತ್ತವೆ? ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಜೆಸಿಬಿ, ಕ್ರೇನ್ ಮುಂತಾದವು ಯಾಕೆ ಹಳದಿ ಬಣ್ಣದಲ್ಲೇ ಇರುತ್ತದೆ? ಇದರ ಹಿಂದಿನ ಕಾರಣಗಳೇನು? ಈ ಅನುಮಾನಗಳು, ಪ್ರಶ್ನೆ ನಿಮ್ಮ ತಲೆಗೂ ಬಂದಿರಬಹುದು. ಅದಕ್ಕೆಲ್ಲಾ ಇಲ್ಲಿ ಉತ್ತರ ನೀಡಲಾಗಿದೆ.

1 / 6
ಮೊದಲನೆಯದಾಗಿ ನೀವು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಜೆಸಿಬಿ ಎಂಬುದು ಒಂದು ಕಂಪನಿಯ ಹೆಸರು. ಅದು ಯಂತ್ರದ ಹೆಸರಲ್ಲ. ನೀವು ಜೆಸಿಬಿ ಎಂದು ಕರೆಯುವ ಅಗೆಯುವ ಯಂತ್ರವು ಅದರ ಕಂಪನಿಯ ಹೆಸರಿನಿಂದಲೇ ಗುರುತಿಸಿಕೊಂಡಿದೆ. ಖ್ಯಾತವಾಗಿದೆ. ಜೆಸಿಬಿ ಒಂದು ಕಂಪನಿಯಾಗಿದ್ದು, ಇದು ನಿರ್ಮಾಣ ಸ್ಥಳಗಳಲ್ಲಿ ಬಳಸುವ ಯಂತ್ರಗಳನ್ನು ದೀರ್ಘಕಾಲದವರೆಗೆ ತಯಾರಿಸುತ್ತಿದೆ. ಅದರ ಮೂಲಕ ಉತ್ಖನನವನ್ನು ಮಾಡಲಾಗುತ್ತದೆ. ಕಟ್ಟಡ ಕೆಡಹುವ, ಒಡೆಯುವ, ಅಥವಾ ಕಟ್ಟುವ, ಸ್ಥಳ ಸಪಾಟು ಮಾಡುವ ಕೆಲಸ ಮಾಡಲಾಗುತ್ತದೆ. ಜೆಸಿಬಿ ಕಂಪೆನಿ ಹೆಸರಾದರೆ ಯಂತ್ರದ ಹೆಸರೇನು ಗೊತ್ತೇ? ಈ ಯಂತ್ರದ ಹೆಸರು ಬ್ಯಾಕ್‌ಹೋ ಲೋಡರ್ ಎಂದು!

2 / 6
ಮೊದಲ ಹಳದಿ ಜೆಸಿಬಿ ಯಂತ್ರ ಯಾವಾಗ ಬಂದಿತು? ಜೆಸಿಬಿ 1945 ರಿಂದ ನಿರಂತರವಾಗಿ ಹೊಸ ಯಂತ್ರಗಳನ್ನು ತಯಾರಿಸುತ್ತಿದೆ. ಅನೇಕ ಆವಿಷ್ಕಾರಗಳನ್ನು ಮಾಡಿದೆ. ಮಾಡುತ್ತಿದೆ. ಕಂಪನಿಯ ಮೊದಲ ಬ್ಯಾಕ್‌ಹೋ ಲೋಡರ್ ಅನ್ನು 1953 ರಲ್ಲಿ ತಯಾರಿಸಲಾಯಿತು. ಅದು ನೀಲಿ ಮತ್ತು ಕೆಂಪು ಬಣ್ಣಗಳಲ್ಲಿತ್ತು. ಇದರ ನಂತರ, ಅದನ್ನು ನವೀಕರಿಸಲಾಯಿತು. 1964 ರಲ್ಲಿ ಹಳದಿ ಬಣ್ಣದ ಬ್ಯಾಕ್‌ಹೋ ಲೋಡರ್ ಅನ್ನು ತಯಾರಿಸಲಾಯಿತು. ಅಂದಿನಿಂದ, ಹಳದಿ ಬಣ್ಣದ ಯಂತ್ರಗಳನ್ನೇ ನಿರಂತರವಾಗಿ ತಯಾರಿಸಲಾಗುತ್ತಿದೆ ಮತ್ತು ಇತರ ಕಂಪನಿಗಳು ಸಹ ನಿರ್ಮಾಣ ಸ್ಥಳದಲ್ಲಿ ಬಳಸುವ ಯಂತ್ರಗಳನ್ನು ಹಳದಿ ಬಣ್ಣದಲ್ಲೇ ಇಡುತ್ತವೆ.

3 / 6
ಹಳದಿ ಬಣ್ಣ ಏಕೆ? ಜೆಸಿಬಿ ಅಥವಾ ಕ್ರೇನ್‌ಗಳು ಅಥವಾ ನಿರ್ಮಾಣ ಸ್ಥಳಗಳಲ್ಲಿ ಬಳಸುವ ಈ ಯಂತ್ರಗಳು ಹಳದಿ ಬಣ್ಣದಲ್ಲಿ ಇರುತ್ತದೆ. ಯಂತ್ರಗಳಲ್ಲಿ ಹಳದಿ ಬಣ್ಣ ಇರಲು ಆ ಬಣ್ಣಕ್ಕೆ ಇರುವ ಗೋಚರತೆ ಕಾರಣವಾಗಿದೆ. ಈ ಹಳದಿ ಬಣ್ಣದಿಂದಾಗಿ ಹಗಲು ರಾತ್ರಿ ಎನ್ನದೆ ಉತ್ಖನನ ಸ್ಥಳದಲ್ಲಿ ಜೆಸಿಬಿ ಸುಲಭವಾಗಿ ಗೋಚರಿಸುತ್ತದೆ. ಅಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ದೂರದಿಂದಲೇ ಗೊತ್ತಾಗುತ್ತದೆ. ಹಳದಿ ಬಣ್ಣ ಕತ್ತಲೆಯಲ್ಲಿಯೂ ಕಾಣುವುದರಿಂದ ಯಂತ್ರ ಇರುವುದನ್ನು ದೂರದಿಂದಲೇ ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ ಹಳದಿ ಬಣ್ಣ ಇಡಲಾಗಿದೆ.

4 / 6
ಅಂದರೆ ಈ ಯಂತ್ರಗಳ ಹಳದಿ ಬಣ್ಣವನ್ನು ಭದ್ರತಾ, ಜಾಗ್ರತಾ ಕಾರಣಗಳಿಗಾಗಿ ಮಾಡಲಾಗಿದೆ. ಈ ನಿರ್ಣಯದ ಬಳಿಕ ಯಂತ್ರವನ್ನು ಹಳದಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಈ ಬಣ್ಣದ ಗೋಚರತೆಯ ಕಾರಣಕ್ಕಾಗಿಯೇ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ ಹಳದಿ ಬಣ್ಣದ ಹೆಲ್ಮೆಟ್‌ಗಳನ್ನು ತಯಾರಿಸುತ್ತಾರೆ. ಇದನ್ನು ಕೂಡ ನೀವು ನೋಡಿರಬಹುದು, ಗಮನಿಸಿರಬಹುದು.

5 / 6
ಜೆಸಿಬಿ ಎಂಬುದು ಬ್ರಿಟೀಷ್ ಮ್ಯಾನುಫ್ಯಾಕ್ಚರರ್ ಕಂಪೆನಿ ಆಗಿದೆ. ಯುನೈಟೆಡ್ ಕಿಂಗ್ಡಮ್​ನಲ್ಲಿ ಅದರ ಮುಖ್ಯ ಕಚೇರಿ ಇದೆ. ಜೋಸೆಫ್ ಬಾಮ್​ಫೋರ್ಡ್ ಎಂಬಾತ ಸಂಸ್ಥೆಯ ಸ್ಥಾಪಕ. ಜೋಸೆಫ್ ಸಿರಿಲ್ ಬಾಮ್​ಫೋರ್ಡ್ (ಜೆಸಿಬಿ) ಎಂಬುದು ಕಂಪೆನಿ ಹಾಗೂ ಸಂಸ್ಥಾಪಕನ ಹೆಸರು ಕೂಡ ಹೌದು.

6 / 6
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ