ಅಭಿಷೇಕ್​ ಅಂಬರೀಷ್​ ರಾಜಕೀಯಕ್ಕೆ ಬರ್ತಾರಾ?; ಸುಮಲತಾ ಅಂಬರೀಷ್​ ಹೇಳಿದ್ದಿಷ್ಟು

ಅಭಿಷೇಕ್​ ಅಂಬರೀಷ್​ ರಾಜಕೀಯಕ್ಕೆ ಬರ್ತಾರಾ?; ಸುಮಲತಾ ಅಂಬರೀಷ್​ ಹೇಳಿದ್ದಿಷ್ಟು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 09, 2022 | 2:53 PM

ಅಂಬರೀಷ್ ಮೃತಪಟ್ಟ ನಂತರದಲ್ಲಿ ನಟಿ ಸುಮಲತಾ ಅಂಬರೀಷ್ ರಾಜಕೀಯಕ್ಕೆ ಕಾಲಿಟ್ಟರು. ಈಗ ಅವರ ಮಗ ಅಭಿಷೇಕ್ ಮಂಡ್ಯ ಅಥವಾ ಮದ್ದೂರಿನಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಚಿತ್ರರಂಗದ ಅನೇಕರು ರಾಜಕೀಯಕ್ಕೆ ಬಂದ ಉದಾಹರಣೆ ಸಾಕಷ್ಟಿದೆ. ಅಂಬರೀಷ್​ (Ambareesh) ಮೃತಪಟ್ಟ ನಂತರದಲ್ಲಿ ನಟಿ ಸುಮಲತಾ ಅಂಬರೀಷ್ (Sumalatha Ambareesh)​ ರಾಜಕೀಯಕ್ಕೆ ಕಾಲಿಟ್ಟರು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡರು. ಈಗ ಅವರ ಮಗ ಅಭಿಷೇಕ್​ ಮಂಡ್ಯ (Mandya) ಅಥವಾ ಮದ್ದೂರಿನಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ‘ಈ ವಿಚಾರದ ಬಗ್ಗೆ ಅವರ ಬಳಿಯೇ ಮಾತನಾಡುವುದು ಉತ್ತಮ. ಅವರು ನನ್ನ ಹತ್ತಿರ ಏನನ್ನೂ ಹೇಳಿಲ್ಲ. ಅವರ ಬಳಿ ನಟನಾಗು, ಎಂಎಲ್​ಎ ಆಗು, ರಾಜಕೀಯಕ್ಕೆ ಬಾ ಎಂದು ನಾನು ಯಾವಾಗಲೂ ಹೇಳಿಲ್ಲ, ಹೇಳುವುದೂ ಇಲ್ಲ. ಇದೆಲ್ಲವೂ ಆತನಿಗೆ ಬಿಟ್ಟಿದ್ದು’ ಎಂದು ಹೇಳಿದ್ದಾರೆ ಸುಮಲತಾ. ಈ ಮೂಲಕ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಇದನ್ನೂ ಓದಿ: ‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು

ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ; ಸಿನಿಮಾರಂಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಸುಮಲತಾ ಅಂಬರೀಶ್