‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು

‘ದೇಶದ್ರೋಹಿ’ ಸಿನಿಮಾ ಮಾಡಿದ ನಟನಿಗೆ ಖಡಕ್​ ಉತ್ತರ ಕೊಟ್ಟ ಅಭಿಷೇಕ್​ ಬಚ್ಚನ್​; ಭೇಷ್​ ಎಂದ ನೆಟ್ಟಿಗರು
ಅಭಿಷೇಕ್ ಬಚ್ಚನ್, ಕಮಾಲ್ ಆರ್. ಖಾನ್

ಮಲಯಾಳಂ ಸಿನಿಮಾ ಬಗ್ಗೆ ಅಭಿಷೇಕ್​ ಬಚ್ಚನ್​ ಆಡಿದ ಮೆಚ್ಚುಗೆ ಮಾತುಗಳಿಗೆ ಕಮಾಲ್​ ಆರ್​. ಖಾನ್ ಅವರು​ ಕೊಂಕು ನುಡಿದಿದ್ದಾರೆ. ಅದಕ್ಕೆ ಉತ್ತರಿಸಿರುವ ಅಭಿಷೇಕ್​ ಅವರು ವ್ಯಂಗ್ಯವಾಗಿಯೇ ತಿರುಗೇಟು ನೀಡಿದ್ದಾರೆ.

TV9kannada Web Team

| Edited By: Madan Kumar

Feb 20, 2022 | 12:26 PM

ನಟ ಅಭಿಷೇಕ್​ ಬಚ್ಚನ್​ (Abhishek Bachchan) ಅವರಿಗೆ ಟ್ರೋಲ್​ ಕಾಟ ಎಂದಿಗೂ ತಪ್ಪಿಲ್ಲ. ಜನ ಸಾಮಾನ್ಯರು ಮಾತ್ರವಲ್ಲದೇ ಕಮಾಲ್​ ಆರ್.​ ಖಾನ್ ಅವರಂತಹ ಸೆಲೆಬ್ರಿಟಿಗಳು ಕೂಡ ಅಭಿಷೇಕ್​ ಬಚ್ಚನ್​ ಅವರನ್ನು ಟ್ರೋಲ್ (Troll)​ ಮಾಡಿದ್ದುಂಟು. ಕಮಾಲ್​ ಆರ್​. ಖಾನ್ ಬಗ್ಗೆ ಹೊಸದಾಗಿ ಹೇಳುವಂತದ್ದು ಏನೂ ಇಲ್ಲ. ನಟನಾಗಿ, ನಿರ್ದೇಶಕನಾಗಿ ಬಾಲಿವುಡ್​ನಲ್ಲಿ ಅವರು ಸೋಲು ಕಂಡಿದ್ದಾರೆ. ಬಳಿಕ ಸ್ವಯಂ ಘೋಷಿತ ವಿಮರ್ಶಕನಾಗಿ ಪ್ರಚಾರ ಪಡೆಯುವ ಸಲುವಾಗಿ ಎಲ್ಲಿಲ್ಲದ ಪ್ರಯತ್ನ ಮಾಡಲು ಆರಂಭಿಸಿದರು. ಇದರಿಂದ ಅವರು ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳನ್ನು ಎದುರು ಹಾಕಿಕೊಂಡಿದ್ದಾರೆ. ಕಿರಿಕ್​ ಮಾಡಿಕೊಳ್ಳುವಲ್ಲಿ ಅವರು ಮುಲಾಜು ನೋಡುವುದಿಲ್ಲ. ಅದು ಸಲ್ಮಾನ್ ಖಾನ್​ ಆಗಿರಲಿ ಅಥವಾ ಕಂಗನಾ ರಣಾವತ್​ ಆಗಿರಲಿ… ಎಲ್ಲರ ಜೊತೆಗೂ ಕಮಾಲ್​ ಆರ್. ಖಾನ್ (Kamaal R Khan)​ ವಿವಾದ ಮಾಡಿಕೊಂಡಿದ್ದಾರೆ. ಈಗ ಅವರು ಅಭಿಷೇಕ್​ ಬಚ್ಚನ್​ ತಂಟೆಗೆ ಹೋಗಿದ್ದಾರೆ. ಅದಕ್ಕೆ ಅಭಿಷೇಕ್​ ಬಚ್ಚನ್​ ಖಡಕ್​ ತಿರುಗೇಟು ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರ ನಡುವೆ ಜಟಾಪಟಿ ಏರ್ಪಟ್ಟಿದೆ.

ಅಭಿಷೇಕ್​ ಬಚ್ಚನ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಹಾಗೆಯೇ ಅವರು ಎಲ್ಲ ಭಾಷೆಯ ಸಿನಿಮಾಗಳನ್ನು ನೋಡಿ ಮೆಚ್ಚುಗೆ ಸೂಚಿಸುತ್ತಾರೆ. ಈಗ ಮಲಯಾಳಂನ ‘ವಾಶಿ’ ಸಿನಿಮಾ ಬಗ್ಗೆ ಅಭಿಷೇಕ್​ ಬಚ್ಚನ್​ ಟ್ವೀಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ಕಲಾವಿದರಾದ ಕೀರ್ತಿ ಸುರೇಶ್​ ಮತ್ತು ಟೊವಿನೋ ಥಾಮಸ್​ ಅಭಿನಯಿಸುತ್ತಿದ್ದಾರೆ. ‘ಮಲಯಾಳಂ ಚಿತ್ರರಂಗದಿಂದ ಬರುತ್ತಿರುವ ಮತ್ತೊಂದು ಅತ್ಯುತ್ತಮ ಸಿನಿಮಾ ಇದು. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಅಭಿಷೇಕ್​ ಬಚ್ಚನ್​ ಬರೆದುಕೊಂಡಿದ್ದಾರೆ.

ಅಭಿಷೇಕ್​ ಬಚ್ಚನ್​ ಮಾಡಿರುವ ಟ್ವೀಟ್​ ನೋಡಿ ಕಮಾಲ್​ ಆರ್​. ಖಾನ್​ ಕೊಂಕು ನುಡಿದಿದ್ದಾರೆ. ‘ಅಣ್ಣಾ.. ನೀವು ಬಾಲಿವುಡ್​ನವರು ಯಾವಾಗಲಾದರೂ ಅತ್ಯುತ್ತಮ ಸಿನಿಮಾ ಮಾಡಿ’ ಎಂದು ಕಮಾಲ್​ ಆರ್​. ಖಾನ್ ಟ್ವೀಟ್​ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಅಭಿಷೇಕ್​ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ‘ಪ್ರಯತ್ನ ಮಾಡುತ್ತೇವೆ. ನೀವೂ ಮಾಡಿದ್ರಲ್ಲ ‘ದೇಶದ್ರೋಹಿ’ ಸಿನಿಮಾ’ ಎಂದು ಅಭಿಷೇಕ್​ ಬಚ್ಚನ್​ ಕುಟುಕಿದ್ದಾರೆ.

ಕಮಾಲ್​ ಆರ್​. ಖಾನ್​ ನಟಿಸಿ, ನಿರ್ಮಾಣ ಮಾಡಿದ್ದ ‘ದೇಶದ್ರೋಹಿ’ ಸಿನಿಮಾ 2008ರಲ್ಲಿ ತೆರೆಕಂಡಿತ್ತು. ಅದನ್ನು ನೋಡಿದ ವಿಮರ್ಶಕರು ‘ಹಿಂದಿ ಚಿತ್ರರಂಗದ ಅತಿ ಕೆಟ್ಟ ಸಿನಿಮಾ’ ಎಂದು ವಿಮರ್ಶೆ ಮಾಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೇವಲ 80 ಲಕ್ಷ ರೂಪಾಯಿ ಕಲೆಕ್ಷನ್​ ಮಾಡಿ ಆ ಸಿನಿಮಾ ನೆಲಕಚ್ಚಿತ್ತು. ಹೀನಾಯವಾಗಿ ಸೋಲುವಂತಹ ಇಂಥ ಸಿನಿಮಾ ಮಾಡಿದ್ದ ಕಮಾಲ್​ ಆರ್​. ಖಾನ್ ಅವರು ಈಗ ಬಾಲಿವುಡ್​ನ ಇತರೆ ಸ್ಟಾರ್​ ನಟ-ನಟಿಯರಿಗೆ ಬುದ್ಧಿ ಹೇಳಲು ಬಂದಿದ್ದಾರೆ. ಅದಕ್ಕಾಗಿ ಅಭಿಷೇಕ್​ ಬಚ್ಚನ್​ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಕ್ಕಾಗಿ ಅಭಿಷೇನ್​ ಬಚ್ಚನ್​ ಅವರಿಗೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್​ ಕುಮಾರ್​ ಪ್ರೀತಿಯ ಮಾತು; ವಿಡಿಯೋ ವೈರಲ್​ ಮಾಡಿದ ಕಮಾಲ್​ ಖಾನ್​

Follow us on

Related Stories

Most Read Stories

Click on your DTH Provider to Add TV9 Kannada