AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

Farhan Akhtar Shibani Dandekar Wedding: ನಟ ಫರ್ಹಾನ್​ ಅಖ್ತರ್​ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಈಗ ಶಿಬಾನಿ ದಂಡೇಕರ್​ ಜೊತೆ ವಿವಾಹ ಆಗಿದ್ದಾರೆ.

ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ
ಫರ್ಹಾನ್ ಅಖ್ತರ್, ಶಿಬಾನಿ
TV9 Web
| Edited By: |

Updated on: Feb 19, 2022 | 9:28 PM

Share

ಬಾಲಿವುಡ್​ ಪ್ರಯಣ ಪಕ್ಷಿಗಳಾದ ಫರ್ಹಾನ್​ ಅಖ್ತರ್​ ಹಾಗೂ ಶಿಬಾನಿ ದಂಡೇಕರ್​ ಅವರು ಇಂದು (ಫೆ.19) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಖಂಡಾಲದಲ್ಲಿ ಈ ಮದುವೆ ನಡೆದಿದೆ. ಫರ್ಹಾನ್​ ಅಖ್ತರ್ (Farhan Akhtar) ಅವರ ತಂದೆ ಜಾವೇದ್​ ಅಖ್ತರ್​ ಹಾಗೂ ತಾಯಿ ಶಬಾನಾ ಅಜ್ಮಿ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಫರ್ಹಾನ್​ ಅಖ್ತರ್​-ಶಿಬಾನಿ ದಂಡೇಕರ್ ಮದುವೆಗೆ (Farhan Akhtar Shibani Dandekar Marriage) ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಫರ್ಹಾನ್​ ಅಖ್ತರ್ ಸಹೋದರಿ ಜೋಯಾ ಅಖ್ತರ್​, ನಟಿ ರಿಯಾ ಚಕ್ರವರ್ತಿ, ಶಿಬಾನಿ  ಸಹೋದರಿ ಅನುಷಾ ದಂಡೇಕರ್, ನಟ ಹೃತಿಕ್​ ರೋಷನ್, ​​ಗಾಯಕ ಶಂಕರ್​ ಮಹದೇವನ್​ ಮುಂತಾದವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಮದುವೆಯಲ್ಲಿ ಶಂಕರ್​ ಮಹದೇವನ್​ ಅವರು ‘ದಿಲ್​ ಚಾಹ್ತಾ ಹೈ’ ಸಿನಿಮಾದ ಗೀತೆಯನ್ನು ಹಾಡುವ ಮೂಲಕ ನವಜೋಡಿಗೆ ಅಭಿನಂದನೆ ತಿಳಿಸಿದರು. ಫರ್ಹಾನ್​ ಅಖ್ತರ್​ ಕಪ್ಪು ಬಣ್ಣದ ಸೂಟ್​ ಧರಿಸಿದ್ದರೆ, ಶಿಬಾನಿ ದಂಡೇಕರ್ (Shibani Dandekar)​ ಅವರು ಕೆಂಪು ಗೌನ್​ ಧರಿಸಿ ಮಿಂಚಿದರು.

ಫರ್ಹಾನ್​ ಅಖ್ತರ್​ ಅವರಿಗೆ 48 ವರ್ಷ ವಯಸ್ಸು. 41ರ ಪ್ರಾಯದ ಶಿಬಾನಿ ದಂಡೇಕರ್​ ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಫರ್ಹಾನ್​ ಅಖ್ತರ್​ ಮತ್ತು ಶಿಬಾನಿ ದಂಡೇಕರ್ ಮದುವೆ ನೆರವೇರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗ ಈ ಜೋಡಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ.

ಫರ್ಹಾನ್​ ಅಖ್ತರ್​ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು ಪ್ರೀತಿಸಲು ಆರಂಭಿಸಿದರು. ಇಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಸಿಕ್ಕ ಬಳಿಕ ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಫರ್ಹಾನ್​ ಅಖ್ತರ್​ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಹಿಂದು ಧರ್ಮದ ಶಿಬಾನಿ ದಂಡೇಕರ್​ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಎರಡೂ ಧರ್ಮದ ಸಂಪ್ರದಾಯದಂತೆ ಈ ಮದುವೆ ನೆರವೇರಿಲ್ಲ. ಬದಲಾಗಿ, ಪರಸ್ಪರರಿಗೆ ಬರೆದುಕೊಂಡ ಪ್ರತಿಜ್ಞೆಗಳನ್ನು ಎಲ್ಲರ ಎದುರು ಓದುವ ಮೂಲಕ ಫರ್ಹಾನ್​ ಅಖ್ತರ್​ ಮತ್ತು ಶಿಬಾನಿ ದಂಡೇಕರ್​ ಮದುವೆ ಮಾಡಿಕೊಂಡಿದ್ದಾರೆ.

ತುಂಬ ಸರಳವಾಗಿ ಮದುವೆ ಆಗಬೇಕು ಎಂಬುದು ಈ ಜೋಡಿಯ ಉದ್ದೇಶ ಆಗಿತ್ತು ಅದು ನೆರವೇರಿದೆ. ನಟನಾಗಿ, ನಿರ್ದೇಶಕನಾಗಿ ಫರ್ಹಾನ್​ ಅಖ್ತರ್​ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ದಿಲ್​ ಚಾಹ್ತಾ ಹೈ’ ಚಿತ್ರ ಪ್ರೇಕ್ಷಕರಿಂದ ಮಚ್ಚುಗೆ ಪಡೆದುಕೊಂಡಿತ್ತು. ರಾಷ್ಟ್ರ ಪ್ರಶಸ್ತಿ, ಫಿಲ್ಮ್​ಫೇರ್​ ಪ್ರಶಸ್ತಿಗಳು ಕೂಡ ಆ ಚಿತ್ರಕ್ಕೆ ಸಿಕ್ಕವು. ಅದೇ ಸಿನಿಮಾದ ಹಾಡನ್ನು ಮದುವೆ ಸಂದರ್ಭದಲ್ಲಿ ಹಾಡುವ ಮೂಲಕ ಗಾಯಕ ಶಂಕರ್​ ಮಹದೇವನ್​ ಅವರು ವಾತಾವರಣದ ರಂಗು ಹೆಚ್ಚಿಸಿದರು.

ಇದನ್ನೂ ಓದಿ:

‘ಈಗ ಮೊಬೈಲ್​ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್​ಮೆಂಟ್​ ಬಳಿಕ ಅದಿತಿ ಮಾತು

‘ಮದುವೆ ಆಗಲು ನಾನಿನ್ನೂ ಚಿಕ್ಕವಳು’: ಪ್ರೀತಿ-ಶಾದಿ ಬಗ್ಗೆ ವಿವರವಾಗಿ ಮಾತಾಡಿದ ರಶ್ಮಿಕಾ ಮಂದಣ್ಣ

Follow Us
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ