AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆ ಆಗಲು ನಾನಿನ್ನೂ ಚಿಕ್ಕವಳು’: ಪ್ರೀತಿ-ಶಾದಿ ಬಗ್ಗೆ ವಿವರವಾಗಿ ಮಾತಾಡಿದ ರಶ್ಮಿಕಾ ಮಂದಣ್ಣ

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ನಿಶ್ಚಿತಾರ್ಥ ಬಹಳ ಹಿಂದೆಯೇ ಮುರಿದುಬಿತ್ತು. ಅದು ಕೆಲವು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು.

‘ಮದುವೆ ಆಗಲು ನಾನಿನ್ನೂ ಚಿಕ್ಕವಳು’: ಪ್ರೀತಿ-ಶಾದಿ ಬಗ್ಗೆ ವಿವರವಾಗಿ ಮಾತಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Feb 16, 2022 | 2:10 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ಅವರಿಗೆ ಬಾಲಿವುಡ್​ನಿಂದ ಬುಲಾವ್​ ಬಂತು. ಸ್ಟಾರ್​ ನಟರ ಚಿತ್ರಗಳಿಗೆ ರಶ್ಮಿಕಾ ನಾಯಕಿ ಆಗಿ ಮಿಂಚುತ್ತಿದ್ದಾರೆ. ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ (Pushpa Movie) ಸಿನಿಮಾದಿಂದ ಅವರ ವೃತ್ತಿಬದುಕಿಗೆ ಹೊಸ ಮೈಲೇಜ್​ ಸಿಕ್ಕಿತು. ಬಾಲಿವುಡ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ, ಅಮಿತಾಭ್​ ಬಚ್ಚನ್​ ಮುಂತಾದ ಟಾಪ್​ ಹೀರೋಗಳ ಜೊತೆ ಅವರು ನಟಿಸುತ್ತಿದ್ದಾರೆ. ಈ ನಡುವೆ ಅವರು ಖಾಸಗಿ ಜೀವನದ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈ ಹಿಂದೆ ಮದುವೆ (Rashmika Mandanna Marriage) ಮತ್ತು ಲವ್​ ವಿಚಾರದಲ್ಲಿ ರಶ್ಮಿಕಾ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡರು. ಅದು ಅವರಿಗೆ ಪ್ಲಸ್​ ಆಯಿತು. ಈಗ ಮದುವೆ ಬಗ್ಗೆ ರಶ್ಮಿಕಾ ಅವರಿಗೆ ಯಾವ ರೀತಿಯ ಮನಸ್ಥಿತಿ ಇದೆ? ಅವರು ದಾಂಪತ್ಯ ಜೀವನ ಆರಂಭಿಸುವುದು ಯಾವಾಗ? ಇಂಥ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳ ಮನದಲ್ಲಿ ಇರುವುದು ಸಹಜ. ಆ ಕಾರಣಕ್ಕಾಗಿ ಹಲವು ಸಂದರ್ಶನಗಳಲ್ಲಿ ರಶ್ಮಿಕಾ ಅವರಿಗೆ ಇವೇ ಪ್ರಶ್ನೆಗಳು ಎದುರಾಗುತ್ತವೆ.

ಇತ್ತೀಚೆಗೆ ‘ಇಂಡಿಯಾ ಟುಡೆ’ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರು ಈ ವಿಚಾರಗಳ ಕುರಿತು ಮಾತನಾಡಿದರು. ವಿಜಯ್​ ದೇವರಕೊಂಡ ಜೊತೆಗಿನ ಆಪ್ತತೆಯ ಕಾರಣದಿಂದಲೂ ಅವರು ಆಗಾಗ ಕಣ್ಣು ಕುಕ್ಕುತ್ತಾರೆ. ಈ ಸ್ಟಾರ್​ ಕಲಾವಿದರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಿದೆ. ಆದರೆ ಪ್ರೀತಿ ಬಗ್ಗೆ ಈ ಜೋಡಿ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ. ಹಾಗಾಗಿ ರಶ್ಮಿಕಾ ಅವರ ಮದುವೆ ಪ್ಲ್ಯಾನ್​ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲಿಗಳಾಗಿದ್ದಾರೆ.

‘ನನ್ನ ಪ್ರಕಾರ ಲವ್​ ಎಂದರೆ ಪರಸ್ಪರ ಸಮಯ, ಗೌರವ ನೀಡುವುದು. ಒಬ್ಬರ ಜೊತೆ ಸುರಕ್ಷಿತ ಭಾವ ಮೂಡುವುದೇ ಲವ್​. ಪ್ರೀತಿ ಎಂಬುದು ಪೂರ್ತಿಯಾಗಿ ಭಾವನೆಗಳಿಗೆ ಸಂಬಂಧಿಸಿದ ವಿಷಯ ಆದ್ದರಿಂದ ಅದನ್ನು ವಿವರಿಸುವುದು ಕಷ್ಟ. ಎರಡೂ ಕಡೆಯಿಂದಲೂ ಸರಿಯಾಗಿದ್ದಾಗ ಪ್ರೀತಿ ಫಲಿಸುತ್ತದೆ. ಕೇವಲ ಒಬ್ಬರ ಕಡೆಯಿಂದ ಸಾಧ್ಯವಿಲ್ಲ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ನಿಶ್ಚಿತಾರ್ಥ ಬಹಳ ಹಿಂದೆಯೇ ಮುರಿದುಬಿತ್ತು. ಅದು ಕೆಲವು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು. ಸದ್ಯಕ್ಕೆ ನ್ಯಾಷನಲ್​ ಕ್ರಶ್​ ಎನಿಸಿಕೊಂಡು ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ಮದುವೆ ಆಗುವುದು ಯಾವಾಗ? ‘ಇದರ ಬಗ್ಗೆ ಏನು ಆಲೋಚನೆ ಮಾಡಬೇಕು ಅಂತ ತಿಳಿದಿಲ್ಲ. ಮದುವೆ ಆಗಲು ನಾನಿನ್ನೂ ತುಂಬ ಚಿಕ್ಕವಳು. ಮದುವೆ ಬಗ್ಗೆ ನಾನು ನಿರ್ಧಾರ ಮಾಡಿಲ್ಲ. ನಿಮಗೆ ಕಂಫರ್ಟಬಲ್​ ಎನಿಸುವವರ ಜೊತೆ ನೀವು ಇರಬೇಕು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ರಶ್ಮಿಕಾ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಅವರು ನಟಿಸಿರುವ ‘ಆಡವಾಳ್ಳು ಮೀಕು ಜೋಹಾರ್ಲು’ ತೆಲುಗು ಚಿತ್ರ ಫೆ.25ರಂದು ಬಿಡುಗಡೆ ಆಗಲಿದೆ. ಹಿಂದಿಯಲ್ಲಿ ‘ಮಿಷನ್​ ಮಜ್ನು’, ‘ಗುಡ್​ ಬೈ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ತೆಲುಗಿನ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ರಶ್ಮಿಕಾ ಪಾಲ್ಗೊಳ್ಳಬೇಕಿದೆ.

ಇದನ್ನೂ ಓದಿ:

Rashmika Mandanna: ಟ್ರೆಡಿಷನಲ್ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ; ವೈರಲ್​ ಆಗುತ್ತಿದೆ ಫೋಟೋ

Rashmika Mandanna: ನಿಮ್ಮನ್ನು ಮದುವೆ ಆಗುವವರು ತುಂಬಾನೇ ಲಕ್ಕಿ ಎಂದ ರಶ್ಮಿಕಾ ಮಂದಣ್ಣ

ಎರಡು-ಮೂರು ಲಕ್ಷ ರೂ.ಗೆ ಕೈ ಒಡ್ಡುವ ಮನುಷ್ಯ ಅಲ್ಲ: ಯತ್ನಾಳ್
ಎರಡು-ಮೂರು ಲಕ್ಷ ರೂ.ಗೆ ಕೈ ಒಡ್ಡುವ ಮನುಷ್ಯ ಅಲ್ಲ: ಯತ್ನಾಳ್
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಖಂಡನೆ
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಖಂಡನೆ
2ನೇ ಮದುವೆಯಾದ ಶಿಖರ್ ಧವನ್; ವಿಡಿಯೋ ವೈರಲ್
2ನೇ ಮದುವೆಯಾದ ಶಿಖರ್ ಧವನ್; ವಿಡಿಯೋ ವೈರಲ್
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ: ಪ್ರಲ್ಹಾದ್​ ಜೋಶಿ ಏನಂದ್ರು ನೋಡಿ
ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ: ಪ್ರಲ್ಹಾದ್​ ಜೋಶಿ ಏನಂದ್ರು ನೋಡಿ
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ