‘ಈಗ ಮೊಬೈಲ್​ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್​ಮೆಂಟ್​ ಬಳಿಕ ಅದಿತಿ ಮಾತು

ಉದ್ಯಮಿ ಯಶಸ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಅದಿತಿ ಪ್ರಭುದೇವ ಅವರು ಸಿನಿಮಾ ಕೆಲಸಗಳಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ‘ಓಲ್ಡ್​ ಮಾಂಕ್​’ ಬಿಡುಗಡೆಗಾಗಿ ಅವರು ಕಾದಿದ್ದಾರೆ.

‘ಈಗ ಮೊಬೈಲ್​ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್​ಮೆಂಟ್​ ಬಳಿಕ ಅದಿತಿ ಮಾತು
ಅದಿತಿ ಪ್ರಭುದೇವ, ಯಶಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 19, 2022 | 8:09 PM

ಹತ್ತು ಹಲವು ಸಿನಿಮಾಗಳಲ್ಲಿ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಬ್ಯುಸಿ ಆಗಿದ್ದಾರೆ. ಶ್ರೀನಿ ಜೊತೆ ನಟಿಸಿರುವ ‘ಓಲ್ಡ್​ ಮಾಂಕ್​’ (Old Monk Movie) ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇಂಥ ಸಂದರ್ಭದಲ್ಲಿ ಅವರು ಏಕಾಏಕಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅದಿತಿ ಪ್ರಭುದೇವ ನಿಶ್ಚಿತಾರ್ಥ (Aditi Prabhudeva Engagement) ಮಾಡಿಕೊಂಡ ಬಳಿಕ ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಈಗ ಅವರು ಟಿವಿ9 ಜೊತೆಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದಿತಿ ಅವರನ್ನು ಕೈ ಹಿಡಿಯಲಿರುವ ಹುಡುಗ ಯಶಸ್​ ಅವರ ವ್ಯಕ್ತಿತ್ವ ಎಂಥದ್ದು? ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು ಹೇಗೆ? ಅದಿತಿ ಅವರ ಸಿನಿಮಾ ಜರ್ನಿಗೆ ಯಶಸ್​ ಅವರ ಕುಟುಂಬದವರು ಎಷ್ಟು ಬೆಂಬಲ ನೀಡುತ್ತಿದ್ದಾರೆ? ಈ ಎಲ್ಲ ವಿಚಾರಗಳ ಬಗ್ಗೆ ಅದಿತಿ ಪ್ರಭುದೇವ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಅದಿತಿ ಪ್ರಭುದೇವ ಅವರನ್ನು ಮೊದಲು ಇಷ್ಟಪಟ್ಟಿದ್ದು ಯಶಸ್​. ಕುಟುಂಬದವರ ಮೂಲಕ ಮದುವೆ ಪ್ರಪೋಸಲ್​ ಬಂದಾಗ ಅದಿತಿ ಗ್ರೀನ್​ ಸಿಗ್ನಲ್​ ನೀಡಿದರು. ಆ ಕುರಿತು ಅದಿತಿ ಸ್ವತಃ ವಿವರ ನೀಡಿದ್ದಾರೆ. ‘ನಮ್ಮದು ಅರೇಂಜ್​ ಮ್ಯಾರೇಜ್​. ಇದರ ಬಗ್ಗೆ ಖುಷಿ ಇದೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು. ಯಾವಾಗಲೂ ನಾನು ಒಬ್ಬೊಂಟಿಯಾಗಿ ಇರುತ್ತಿದೆ. ಕುಟುಂಬದ ಸ್ನೇಹಿತರೊಬ್ಬರು ಯಶಸ್​ ಅವರನ್ನು ಪರಿಚಯಿಸಿದರು. ಅವರ ಕುಟುಂಬದವರಿಗೆ ನಾನೆಂದರೆ ಮೊದಲಿನಿಂದಲೂ ಇಷ್ಟ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

‘ಎಲ್ಲೋ ಫಾರಿನ್​ನಲ್ಲಿ ಕುಳಿತು ಕೆಲಸ ಮಾಡುವವರು ನನಗೆ ಇಷ್ಟ ಆಗುವುದಿಲ್ಲ. ತೋಟ, ಕೃಷಿ, ಹಸು ಬಗ್ಗೆ ಆಸಕ್ತಿ ಇರುವವಳು ನಾನು. ಅಂಥ ಹುಡುಗನನ್ನು ಮನೆಯವರು ಕೂಡ ಒಪ್ಪಬೇಕಿತ್ತು. ಆ ವಿಚಾರದಲ್ಲಿ ಒತ್ತಡ ಇತ್ತು. ಯಶಸ್​ ಕೂಡ ನನ್ನ ರೀತಿಯ ವ್ಯಕ್ತಿ. ಕಾಫಿ ತೋಟ, ಮರ-ಗಿಡಗಳ ಬಗ್ಗೆ ಅವರಿಗೆ ಇಂಟರೆಸ್ಟ್​ ಇದೆ. ಆ್ಯಟಿಟ್ಯೂಡ್​ ಸಮಸ್ಯೆ ಇಲ್ಲ. ಎಲ್ಲರ ಜೊತೆ ನಗುತ್ತ ಮಾತನಾಡುತ್ತಾರೆ. ಆ ವ್ಯಕ್ತಿತ್ವವೇ ಮುಖ್ಯ. ದುಡ್ಡು ಹಾಳಾಗಿ ಹೋದರೆ ಹೇಗೋ ಸಂಪಾದನೆ ಮಾಡಬಹುದು. ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದನೆ ಮಾಡೋದು? ಒಳ್ಳೆಯ ಹುಡುಗ ಎನಿಸಿತು, ಮನೆಯವರೆಲ್ಲ ಒಪ್ಪಿಕೊಂಡರು. ಎಂಗೇಜ್​ಮೆಂಟ್​ ಆದ ಬಳಿಕ ನಾನು ಖಂಡಿತಾ ಅವರನ್ನು ತುಂಬ ಪ್ರೀತಿಸುತ್ತಿದ್ದೇನೆ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

‘ನನ್ನ ಗುಣಕ್ಕೆ ಯಶಸ್​ ಸೆಟ್​ ಆಗುತ್ತಾರಾ ಎಂಬ ಪ್ರಶ್ನೆ ನನ್ನ ಮನದಲ್ಲಿ ಇತ್ತು. ನಾವು 18-20ರ ವಯಸ್ಸಿನವರಲ್ಲ. ಈವರೆಗೆ ಹಲವು ಜನರನ್ನು ನೋಡಿರುತ್ತೇವೆ. ಬೇರೆಯವರ ಜೀವನವನ್ನು ನೋಡಿ ತಿಳಿದುಕೊಂಡಿರುತ್ತೇವೆ. ಆ ಮೆಚ್ಯುರಿಟಿ ಇರುವುದರಿಂದ ಯಶಸ್ ಅವರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯ್ತು’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಯಶಸ್​ ಅವರ ಇಡೀ ಕುಟುಂಬವೇ ಅದಿತಿ ಪ್ರಭುದೇವ ಅವರ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅದು ಅವರಿಗೆ ಹೆಚ್ಚು ಖುಷಿ ನೀಡಿದೆ. ‘ಯಶಸ್​ ಒಬ್ಬ ಉದ್ಯಮಿ ಆಗಿದ್ದರೂ ಕೂಡ ಅವರು ಯಾವಾಗಲೂ ತೋಟದ ಬಗ್ಗೆ ಮಾತನಾಡುತ್ತಾರೆ. ಅದು ನನಗೆ ಹೆಚ್ಚು ಹಿಡಿಸಿತು. ಯಾವುದೇ ಸಂಬಂಧದಲ್ಲಿ ಪಾರದರ್ಶಕತೆ ಇರಬೇಕು. ಈಗಿನ ಕಾಲದಲ್ಲಿ ಅದು ತುಂಬ ಕಡಿಮೆ. ಮೊಬೈಲ್​ ಕೊಡು ಅಂದ್ರೆ ಸಾಕು ಬ್ರೇಕಪ್​ ಆಗಿ ಬಿಡತ್ತೆ. ನಾವು ಹಂಗಿಲ್ಲ. ನನ್ನ ಮೊಬೈಲ್​ ಅವರ ಬಳಿ, ಅವರ ಮೊಬೈಲ್​ ನನ್ನ ಬಳಿ ಇರುವಷ್ಟು ಪಾರದರ್ಶಕತೆ ನಮ್ಮ ನಡುವೆ ಇದೆ. ಸದ್ಯಕ್ಕೆ ಚೆನ್ನಾಗಿ ನಡೆಯುತ್ತಿದೆ. ಹೀಗೆ ಇರಬೇಕು ಅಂತ ಆಸೆ ಪಡುತ್ತೇನೆ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಇದನ್ನೂ ಓದಿ:

‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್