ನಟ/ನಿರ್ದೇಶಕ ‘ಜೋಗಿ’ ಪ್ರೇಮ್ (Director Prem) ಅವರು ಚಿತ್ರರಂಗದ ಹಲವು ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅವರು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾರೆ. ರಾಜಕೀಯದ ಕುರಿತಂತೆ ಅವರಿಗೆ ಮುಂದಾಲೋಚನೆಗಳಿವೆ. ಈ ಹಿಂದೆ ಕೂಡ ಅವರು ಚುನಾವಣೆಗೆ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮಂಡ್ಯದಲ್ಲಿ ‘ರೆಬಲ್ ಸ್ಟಾರ್’ ಅಂಬರೀಷ್ (Ambareesh) ಎದುರು ಎಲೆಕ್ಷನ್ಗೆ ನಿಲ್ಲುವಂತೆ ಪ್ರೇಮ್ ಅವರಿಗೆ ಆಫರ್ ಕೂಡ ಬಂದಿತ್ತು. ಆದರೆ ಅದನ್ನು ಪ್ರೇಮ್ ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಪ್ರೇಮ್ ನಿರ್ದೇಶನ ಮಾಡಿರುವ ‘ಏಕ್ ಲವ್ ಯಾ’ (Ek Love Ya Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆ.25ರಂದು ಈ ಚಿತ್ರ ರಾಜ್ಯದ್ಯಾಂತ ರಿಲೀಸ್ ಆಗಲಿದೆ. ಪ್ರೇಮ್ ಪತ್ನಿ ರಕ್ಷಿತಾ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅವರ ಸಹೋದರ ರಾಣ ‘ಏಕ್ ಲವ್ ಯಾ’ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ರಾಣಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ, ರಚಿತಾ ರಾಮ್ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಧೂಳೆಬ್ಬಿಸಿವೆ. ಚಿತ್ರಮಂದಿರದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇದನ್ನೂ ಓದಿ: ‘ಏಕ್ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಮಾತು; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.. ‘ಏಕ್ ಲವ್ ಯಾ’ ಮ್ಯೂಸಿಕ್ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್